ಫೆ.6ರಿಂದ ಬೆಂಗ್ಳೂರು ಪೊಲೀಸರಿಗೆ ಜೆಂಡರ್ ಸೆನ್ಸ್ ಟೈಜೇಷನ್ ಕಾರ್ಯಾಗಾರ

Posted By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ. 06 : ಸೆಂಟರ್ ಫಾರ್ ಸೋಷಿಯಲ್ ರಿಸರ್ಚ್ ಸಂಸ್ಥೆ ದೆಹಲಿ ಮತ್ತು ಹ್ಯಾನ್ಸ್ ಸೀಡಲ್ ಫೌಂಡೇಷನ್ ಬವಾರಿಯಾ ರವರ ಸಹಯೋಗದೊಂದಿಗೆ ಸುಮಾರು 40 ಬೆಂಗಳೂರು ನಗರ ಪೊಲೀಸ್ ಘಟಕದ ಅಧಿಕಾರಿಗಳಿಗೆ ಎರಡು ದಿನ ಜೆಂಡರ್ ಸೆನ್ಸ್ ಟೈಜೇಷನ್ ವರ್ಕ್ ಶಾಪ್ ನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 6 ಮತ್ತು 07ರಂದು ಈ ವರ್ಕ್ ಶಾಪ್ ಪೊಲೀಸ್ ಆಯುಕ್ತರ ಕಚೇರಿ ನೆಲಮಹಡಿ ಸಭಾಂಗಣದಲ್ಲಿ ನಡೆಯಲಿದೆ.

Gender Sensitization Workshop for Bengaluru city police officers from feb 6 to 7 at Bengaluru

ಈ ಕಾರ್ಯಾಗಾರದಲ್ಲಿ ಜೆಂಡರ್ ಸೆನ್ಸ್ ಟೈಜೇಷನ್ ಮತ್ತು ಅದರ ಅನುಷ್ಠಾನ, ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಸುರಕ್ಷತಾ ಮಟ್ಟಗಳ ಸಮೀಕ್ಷೆ-ಸಮುದಾಯ ಒಗ್ಗೂಡಿಸುವಿಕೆ ಹಾಗೂ ಸಾರ್ವಜನಿಕ ವಕಾಲತ್ತು, ಪೊಲೀಸ್ ಮತ್ತು ಮಾದ್ಯಮಗಳು ಮಹಿಳೆಯರ ಸಮಸ್ಯೆಗಳ ನಿವಾರಣೆಯ ಬಗ್ಗೆ ಕೈಗೊಳ್ಳಬಹುದಾದ ಜಾಗೃತಿ ಕ್ರಮಗಳು, ಜೆಂಡರ್ ಸೆನ್ಸ್ ಟೈಜೇಷನ್ ಸೂಕ್ಷ್ಮತೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮ, ಪೊಲೀಸ್ ಅಧಿಕಾರಿಗಳ ಸಾಮರ್ಥ್ಯವನ್ನು ಬಲಗೊಳಿಸುವಿಕೆ ಹಾಗೂ ಇನ್ನಿತರ ಹಲವು ವಿಷಯಗಳನ್ನಾಧರಿಸಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಸೋಮವಾರ ಮಧ್ಯಾಹ್ನ 02:45 ಗಂಟೆಗೆ ಗೃಹ ಸಚಿವ ಡಾ, ಜಿ ಪರಮೇಶ್ವರ ಅವರು ಪೊಲೀಸ್ ಆಯುಕ್ತರ ಕಚೇರಿಯ ಅಂಪಿ ಥೇಟರ್ ನ್ನು ಉದ್ಘಾಟಿಸಿ, ಈ ಕಾರ್ಯಾಗಾರಕ್ಕೆ ಚಾಲನೆ ನೀಡುವರು.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವರ ಸಲಹೆಗಾರರು ಮತ್ತು ಡಿಜಿ ಮತ್ತು ಐಜಿಪಿಗಳು ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Centre for Social Research Delhi and Hanns Seidel foundation, Bavaria organized 'Gender Sensitization Workshop' for 40 Bengaluru city police officers from February 06 to 07 at Bengaluru police commissioner office.
Please Wait while comments are loading...