ಗೌರಿ ಲಂಕೇಶ್ ಹತ್ಯೆ ಪ್ರಕರಣ: ರೌಡಿ ಶೀಟರ್ ಕುಣಿಗಲ್ ಗಿರಿ ವಿಚಾರಣೆ

Posted By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada
   Gauri lankesh : SIT Investigation Rowdy Sheeter Kunigal Giri | Oneindia Kannada

   ಬೆಂಗಳೂರು, ಸೆಪ್ಟೆಂಬರ್ 14: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ರೌಡಿ ಶೀಟರ್ ಕುಣಿಗಲ್ ಗಿರಿ ಹಾಗೂ ಆತನ ಆರು ಸಹಚರರನ್ನು ವಿಚಾರಣೆಗೊಳಪಡಿಸಿದೆ ಎಂದು ನ್ಯೂಸ್ ಮಿನಟ್ ವರದಿ ಮಾಡಿದೆ.

   ಗೌರಿ ಹತ್ಯೆ ಖಂಡಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನಿಂದ ಪ್ರತಿಭಟನೆ

   ಮತ್ತೊಂದು ಪ್ರಕರಣವೊಂದರಲ್ಲಿ ಮೂರು ವರ್ಷಗಳ ಹಿಂದೆ ಬಂಧಿತನಾಗಿರುವ ಕುಣಿಗಲ್ ಗಿರಿ, ಸದ್ಯಕ್ಕೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧಿತನಾಗಿದ್ದಾನೆ.

   Gauri Lankesh Murder Investigation: SIT investigating Rowdy Sheeter Kunigal Giri

   ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಗಳು ಕುಣಿಗಲ್ ಗಿರಿ ಹಾಗೂ ಆತನ ಸಹಚರರಿಗೆ ಗೊತ್ತಿರುವ ಸಾಧ್ಯತೆಗಳನ್ನು ಪತ್ತೆ ಹಚ್ಚಿರುವ ಎಸ್ಐಟಿ ಅಧಿಕಾರಿಗಳು ಇದೇ ಕಾರಣಕ್ಕಾಗಿಯೇ ಆತನನ್ನು ವಿಚಾರಣೆಗೊಳಪಡಿಸಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

   ಗೌರಿ, ಕಲಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಪಿಸ್ತೂಲ್

   ಈಗಾಗಲೇ ಎಸ್ಐಟಿ ತಂಡದ ಅಧಿಕಾರಿಯೊಬ್ಬರು ಗಿರಿಯನ್ನು ಒಮ್ಮೆ ವಿಚಾರಣೆ ಮಾಡಿದ್ದು, ಶೀಘ್ರದಲ್ಲೇ ಮತ್ತಷ್ಟು ಸುತ್ತಿನ ವಿಚಾರಣೆ ನಡೆಸಿ ಗಿರಿಯಿಂದ ಮಾಹಿತಿ ಪಡೆಯಲು ಅಧಿಕಾರಿಗಳು ಯತ್ನಿಸಲಿದ್ದಾರೆಂದು ಹೇಳಲಾಗಿದೆ.ಯಾರು

   ಈ ಕುಣಿಗಲ್ ಗಿರಿ?
   ಕುಣಿಗಲ್ ಗಿರಿ ರೌಡಿಶೀಟರ್, 2014ರಲ್ಲಿ ಆಂಧ್ರದ ಅನಂತಪುರದಲ್ಲಿ ಗಿರಿ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿತ್ತು. ಬಂಧನದ ನಂತರ ಗಿರಿ ನೂರಕ್ಕೂ ಹೆಚ್ಚು ಅಪಹರಣ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು.

   ಸದ್ಯಕ್ಕೆಈತ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದಾನೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   More than a week after the cold-blooded murder of senior journalist-activist Gauri Lankesh at her residence, the Bengaluru police appear to have made a breakthrough. The Special Investigation Team are set to grill rowdy sheeter Kunigal Giri and his six associates for their alleged role in the case.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ