ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹತ್ಯೆ ಆರೋಪಿ ನವೀನ್ ಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 18: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ಜಾಮೀನು ನೀಡಬೇಕೆಂದು ನವೀನ್‌ಕುಮಾರ್ ಪರ ವಕೀಲ ವೇದಮೂರ್ತಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.

ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್ ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್

ಜಾಮೀನು ಅರ್ಜಿಯನ್ನು ನಗರದ 70ನೇ ಸಿಸಿಎಚ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ವಿಚಾರಣೆಯನ್ನು ನ್ಯಾಯಾಧೀಶ ರಾಮಲಿಂಗೇಗೌಡ ಅವರು ಮುಂದೂಡಿದ್ದಾರೆ.

Gauri Lankesh murder accused bail pitition inquiry postponed

ಗೌರಿ ಲಂಕೇಶ್ ಹತ್ಯೆ ಆರೋಪಿಗಳಲ್ಲಿ ನವೀನ್ ಕುಮಾರ್ ಕೂಡ ಒಬ್ಬನಾಗಿದ್ದು ಈತನೇ ಮೊದಲಿಗೆ ಬಂಧನವಾಗಿದ್ದು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಕಾರಣ ಮದ್ದೂರಿನ ಈತನನ್ನು ಮೆಜೆಸ್ಟಿಕ್ ಬಳಿ ಬಂಧಿಸಲಾಯಿತು . ವಿಚಾರಣೆಯ ನಂತರ ಗೌರಿ ಹತ್ಯೆಯಲ್ಲಿ ಈತನ ಪಾತ್ರವೂ ಇರುವುದು ಬೆಳಕಿಗೆ ಬಂದಿತ್ತು.

ಛೆ, ಇದೆಂಥ ಮಾತು! ಗೌರಿಯನ್ನು ನಾಯಿಗೆ ಹೋಲಿಸಿದರೇ ಮುತಾಲಿಕ್?!ಛೆ, ಇದೆಂಥ ಮಾತು! ಗೌರಿಯನ್ನು ನಾಯಿಗೆ ಹೋಲಿಸಿದರೇ ಮುತಾಲಿಕ್?!

ಇದೀಗ ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಘ್ಮೋರೆ, ಅಮೋಲ್ ಕಾಳೆ, ಪ್ರವೀಣ್ ಮತ್ತಿತರರು ಬಂಧಿತರಾಗಿದ್ದು ಚಾರ್ಜ್‌ ಶೀಟ್‌ ಕೂಡ ಸಲ್ಲಿಕೆಯಾಗಿದೆ ಹಾಗಾಗಿ ನವೀನ್‌ ಕುಮಾರ್‌ ಜಾಮೀನಿಗೆ ಅರ್ಜಿ ಹಾಕಿದ್ದ.

English summary
Gauri Lankesh murder accused K.T.Naveen Kumar applied for bail. But SIT ask some time to file objection so court postponed inquiry on bail application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X