ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಲಂಕೇಶ್ ಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿದ್ದುದು ಹಂತಕನಾ..?!

|
Google Oneindia Kannada News

Recommended Video

ಗೌರಿ ಲಂಕೇಶ್‌ ಹತ್ಯೆ: ಓರ್ವ ಶಾರ್ಪ್ ಶೂಟರ್ ಬಂಧನ | Oneindia Kannada

ಬೆಂಗಳೂರು, ಜನವರಿ 01: ಇಡೀ ದೇಶವನ್ನೂ ತಲ್ಲಣಿಸಿದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ದಿನೇ ದಿನೇ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಗೌರಿ ಹತ್ಯೆಗೂ ಒಂದೂವರೆ ಗಂಟೆ ಮೊದಲು ಗೌರಿ ಅವರ ಮನೆಮುಂದೆ ವ್ಯಕ್ತಿಯೊಬ್ಬ ಶಂಕಾಸ್ಪದವಾಗಿ ಓಡಾಡಿದ್ದರ ಕುರಿತ ಸ್ಫೋಟಕ ಮಾಹಿತಿಯೊಂದನ್ನು ಕನ್ನಡದ ಖಾಸಗಿ ವಾಹಿನಿಯೊಂದು ಬಹಿರಂಗಪಡಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಯಾರು? ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಯಾರು?

ಸೆಪ್ಟೆಂಬರ್ 5, 2017 ರಂದು ರಾತ್ರಿ 8 ಗಂಟೆಗೆ ಗೌರಿ ಲಂಕೇಶ್ ಅವರನ್ನು ಅವರ ಮನೆಯಲ್ಲೇ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದ. ಆದರೆ ಇದುವರೆಗೂ ಕೊಲೆಗಾರನನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಅಚ್ಚರಿ ಮೂಡಿಸಿದೆ.

Gauri Lankesh murder: A new twist

ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬನ ಮುಖಚಹರೆಗೆ ಬೇರೆ ಬೇರೆ ರೂಪುಕೊಟ್ಟು ಆತನನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಗೌರಿ ಅವರ ಹತ್ಯೆಗೂ ಒಂದೂವರೆ ಗಂಟೆ ಮೊದಲು ಅವರ ಮನೆಯ ಮುಂದೆ ಈತ ಅನುಮಾನಾಸ್ಪದವಾಗಿ ಓಡಾಡಿರುವುದು ದೃಢವಾಗಿದೆ. ಒಂದು ಮೂಲದ ಪ್ರಕಾರ ಈತ ಮಂಗಳೂರು ಮೂಲದ ವ್ಯಕ್ತಿ ಇದ್ದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಗೌರಿ ಲಂಕೇಶ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ 3 ರೇಖಾಚಿತ್ರ ಬಿಡುಗಡೆಗೌರಿ ಲಂಕೇಶ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ 3 ರೇಖಾಚಿತ್ರ ಬಿಡುಗಡೆ

ಹತ್ಯೆಯಾಗಿ ಇದೀಗ ಸುಮಾರು ನಾಲ್ಕು ತಿಂಗಳು ಕಳೆಯುತ್ತಿದ್ದರೂ ಇದುವರೆಗೂ ಯಾವೊಬ್ಬ ಆರೋಪಿಯೂ ಪತ್ತೆಯಾಗಿಲ್ಲ. ಹಂತಕರ ಪತ್ತೆಗೆ ಸರ್ಕಾರ ವಿಶೇಷ ತನಿಖಾ ದಳ(ಎಸ್ ಇಟಿ) ರಚಿಸಿದೆಯಾದರೂ ಕೊಲೆಗಾರರ ಪತ್ತೆಯಾಗಿಲ್ಲ. 'ಹಂತಕರ ಸುಳಿವು ಸಿಕ್ಕಿದೆ, ಶೀಘ್ರದಲ್ಲೇ ಬಂಧಿಸುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಆಗಾಗ ಹೇಳಿಕೆ ನೀಡುತ್ತಿದ್ದರೂ ಇದುವರೆಗೂ ಯಾರ ಬಂಧನವೂ ಆಗಿಲ್ಲ.

ಆದರೆ ಈಗ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾದ ವ್ಯಕ್ತಿಯೇ ನಿಜಕ್ಕೂ ಗೌರಿ ಹಂತಕನಾ? ಆತನ ಜೊತೆ ಇನ್ಯಾರ ಕೈಯಿದೆ ಎಂಬಿತ್ಯಾದಿ ಮಾಹಿತಿಗಳು ಸಂಪೂರ್ಣ ತನಿಖೆಯ ನಂತರವೇ ಹೊರಬರಬೇಕಿದೆ.

English summary
A private Kannada news channel has telecasted a photo of a person who suspiciously moving around Kannada journalist Gauri Lankesh's house before 1 hour of her murder. The channel doubts, he might be the killer of Gauri Lankesh. But more details about the person is yet to be known.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X