ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಇಂದಿರಾ ಬಸ್ ಪಾಸ್!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜನವರಿ 05 : ಗಾರ್ಮೆಂಟ್ಸ್ ಗಳಲ್ಲಿ ಪಾಳಿ ಪ್ರಕಾರ ಕೆಲಸ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ರಿಯಾಯಿತಿ ದರದ ಇಂದಿರಾ ಬಸ್ ಪಾಸ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.

  ಗಾರ್ಮೆಂಟ್ಸ್ ಗಳಲ್ಲಿ ಪಾಳಿ ಪ್ರಕಾರ ಕೆಲಸ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ಪ್ರತ್ಯೇಕ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸುವುದಾಗಿ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು.

  ಆದರೆ ಅದು ಸಾದ್ಯವಾಗದ ಕಾರಣ, ಈಗ ಬಸ್ ಬದಲು ಇಂದಿರಾ ಹೆಸರಲ್ಲಿ ಬಸ್ ಪಾಸ್ ನೀಡಲು ಇಲಾಖೆ ಮುಂದಾಗಿದೆ. ಬಸ್ ಸೌಲಭ್ಯ ಕಲ್ಪಿಸಲು ಸಾದ್ಯವಾದ ಕಾರಣ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವಂತೆ ಕಾರ್ಮಿಕ ಒಕ್ಕೂಟಗಳು ಇಲಾಖೆಗೆ ಮನವಿ ಮಾಡಿದ್ದವು. ಇದಕ್ಕೆ ಸಚಿವರೇ ಆಸಕ್ತಿ ತೋರಿಸಿದ್ದಾರೆ.

  Garments workers will get BMTC pass

  ವೋಲ್ವೊ ಬಸ್ ಸಂಚಾರ ಇನ್ನು ಸುಗಮ: ಶೇ.37ರಷ್ಟು ದರ ಇಳಿಕೆ

  ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆಲ ದಿನಗಳ ಹಿಂದೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿದ್ದು, ಪಾಸ್ ಗೆ ಒಪ್ಪಿಗೆ ದೊರೆತಿದೆ ಎಂದು ಬಿಎಂಟಿಸಿ ಉನ್ನತ ಮೂಲಗಳು ತಿಳಿಸಿವೆ.

  ರಿಯಾಯಿತಿ ಎಷ್ಟು ಎನ್ನುವುದು ಅಂತಿಮಗೊಂಡಿಲ್ಲ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಬಿಎಂಟಿಸಿ , ಕಾರ್ಮಿಕ ಇಲಾಖೆ, ಕಾರ್ಖಾನೆ ಮಾಲೀಕರ ಸಂಘ ಜಂಟಿಯಾಗಿ ಸೇರಿ ಈ ಪಾಸ್ ವಿತರಣೆಗೆ ಸಿದ್ಧತೆ ನಡೆಸಿದೆ. ಪಾಸ್ ಗೆ ಯಾವ ಇಲಾಖೆ, ಒಕ್ಕೂಟಗಳಿಂದ ಯಾರು ಎಷ್ಟು ಮೊತ್ತ ಭರಿಸಬೇಕು. ಕಾರ್ಮಿಕರು ಕೂಡ ಇಂತಿಷ್ಟು ಭರಿಸಬೇಕೇ ಇಲ್ಲವೇ ಗಾರ್ಮೆಂಟ್ಸ್ ಕಂಪನಿಗಳೇ ಪೂರ್ಣ ಹಣ ನೀಡಬೇಕೆ ಎಂಬ ವಿಷಯದ ಕುರಿತು ಚರ್ಚೆಗಳು ನಡೆದಿದೆ.

  ನಗದು ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!

  ರೂಟ್ ವರ್ಕ್: ಎಷ್ಟು ಮಂದಿ ಕಾರ್ಮಿಕರು ಯಾವ ರೀತಿಯ ವಾಹನ ಬಳಸುತ್ತಾರೆ ಎಂಬ ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ಹಾಗಾಗಿ ಮೊದಲು ಅದನ್ನು ಅಧ್ಯಯನ ಮಾಡಿ, ನಂತರ ರೂಪುರೇಷೆ ಸಿದ್ಧಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ರೂಟ್ ವರ್ಕ್ ಕೆಲಸ ಆರಂಭವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Department of Transport has decided to issue concessional bus pass garments workers in Bengaluru city. Earlier the department had planned to provide dedicated buses for the workers but it was not come to reality.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more