ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18 : ಉದ್ಯಾನ ನಗರಿ ಬೆಂಗಳೂರನ್ನು ಕಾಡುತ್ತಿರುವ ಕಸದ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶಗಳನ್ನು ನೀಡಿದೆ. ನಗರದ ಕಸದ ಸಮಸ್ಯೆ ಬಗೆಹರಿಸಲು ತ್ಯಾಜ್ಯ ವಿಂಗಡನೆ ಮಾಡುವುದು ಕಡ್ಡಾಯ ಎಂದು ಹೇಳಿರುವ ಕೋರ್ಟ್, ತಪ್ಪಿದರೆ ದಂಡ ಹಾಕಿ ಎಂದು ಬಿಬಿಎಂಪಿ ಮತ್ತು ಸರ್ಕಾರಕ್ಕೆ ಸೂಚನೆ ನೀಡಿದೆ.

ಬೆಂಗಳೂರು ನಗರದ ಕಸದ ಸಮಸ್ಯೆ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕುಮಾರ್ ಮತ್ತು ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ, ಗುರುವಾರ ಹಲವು ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ಪಾಲನೆ ಮಾಡಬೇಕು ಎಂದು ಸೂಚಿಸಿದೆ. [ಬೆಂಗಳೂರಿಗರೇ, ದಾರಿಯಲ್ಲಿ ಕಸ ಕಂಡ್ರೆ ಸೆಲ್ಫಿ ತಗೊಳ್ಳಿ!]

garbage

ತ್ಯಾಜ್ಯ ವಿಂಗಡನೆ ಮಾಡುವುದು ಕಡ್ಡಾಯ, ಎರಡು ಬಿನ್ ಒಂದು ಬ್ಯಾಗ್ ಪದ್ಧತಿ ಅಳವಡಿಕೆ, ತ್ಯಾಜ್ಯ ವಿಂಗಡನೆ ಮಾಡದಿದ್ದರೆ ದಂಡ ವಿಧಿಸುವುದು, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದರೆ ದಂಡ ವಿಧಿಸುವುದು ಮುಂತಾದ ನಿರ್ದೇಶನಗಳನ್ನು ಕೋರ್ಟ್ ನೀಡಿದೆ. [ಕಸ ವಿಲೇವಾರಿ ಘಟಕದ ವಿರುದ್ಧ ಗೊರೂರಲ್ಲಿ ಪ್ರತಿಭಟನೆ]

2 ಬಿನ್, ಒಂದು ಬ್ಯಾಗ್ ಪದ್ಧತಿ : ಟು ಬಿನ್, ಒಂದು ಬ್ಯಾಗ್ ಪದ್ಧತಿ ಅಳವಡಿಸಿಕೊಂಡು ತ್ಯಾಜ್ಯವನ್ನು ವಿಂಗಡನೆ ಮಾಡುವಂತೆ ಕೋರ್ಟ್ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಈ ವ್ಯವಸ್ಥೆ ಅನ್ವಯ ಕೆಂಪು ಮತ್ತು ಹಸಿರು ಬಣ್ಣದ ಬಿನ್ ಮತ್ತು ಪೇಪರ್ ಬ್ಯಾಗ್‌ಗಳನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು. [ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]

ಯಾವುದರದಲ್ಲಿ ಯಾವ ತ್ಯಾಜ್ಯ?: ಹಸಿರು ಬಣ್ಣದ ಬಿನ್‌ನಲ್ಲಿ ಅಡುಗೆ ಮನೆ ತ್ಯಾಜ್ಯ, ತರಕಾರಿ ತ್ಯಾಜ್ಯ, ಹಣ್ಣು, ಹೂ ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಿ ಕಸ ವಿಲೇವಾರಿಗೆ ಆಗಮಿಸುವ ಪೌರ ಕಾರ್ಮಿಕರಿಗೆ ನೀಡಬೇಕು. ಕೆಂಪು ಬಣ್ಣದ ಬಿನ್‌ನಲ್ಲಿ ನ್ಯಾಪ್‌ಕಿನ್, ವೈದ್ಯತ್ಯಾಜ್ಯ, ಕಾಂಡೋಮ್, ಇಂಜಕ್ಷನ್ ಮುಂತಾದವುಗಳನ್ನು ಹಾಕಬೇಕು. ಕಸ ವಿಂಗಡಿಸದೇ ನೀಡಿದರೆ ಪೌರ ಕಾರ್ಮಿಕರು ಅದನ್ನು ಸ್ವೀಕರಿಸಬಾರದು ಎಂದು ಕೋರ್ಟ್ ಹೇಳಿದೆ.

ಒಣ ತ್ಯಾಜ್ಯಕ್ಕೆ ಬ್ಯಾಗ್ ಬಳಕೆ ಮಾಡಿ : ಹಾಲಿನ ಕವರ್, ನ್ಯೂಸ್ ಪೇಪರ್, ಪಿಜ್ಜಾ ಬ್ಯಾಗ್ ಮುಂತಾದ ಒಣ ತ್ಯಾಜ್ಯಾಗಳನ್ನು ಬ್ಯಾಗ್‌ಗಳಲ್ಲಿ ಸಂಗ್ರಹಣೆ ಮಾಡಿ ನೀಡಬೇಕು ಎಂದು ಸೂಚಿಸಲಾಗಿದೆ. ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಆಸ್ಪತ್ರೆ, ಮಾಲ್‌ ಮತ್ತು ಹೋಟೆಲ್‌ಗಳಲ್ಲೂ 2 ಬಿನ್, ಒಂದು ಬ್ಯಾಗ್ ಪದ್ಧತಿ ಆಳವಡಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

English summary
Karnataka High Court directed to using two bins and one bag system for Bengaluru garbage issue. A Division Bench of Justice N. Kumar and Justice B.V. Nagarathna said that, it would be mandatory for all categories of waste generators to segregate waste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X