ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಚತುರ್ಥಿ: ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಗಣೇಶ ಚತುರ್ಥಿಯ ಅಂಗವಾಗಿ ಯಶವಂತಪುರದಿಂದ ಬೆಳಗಾವಿಗೆ ವಿಶೇಷ ರೈಲು ವ್ಯವಸ್ಥೆಯನ್ನು ನೈಋತ್ಯ ರೈಲ್ವೆ ಇಲಾಖೆ ಮಾಡಿದೆ.

ಈಗಾಗಲೇ ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವ ರೈಲುಗಳು ಸಾಮಾನ್ಯ ದಿನಗಳಲ್ಲಿಯೇ ಅತಿ ಹೆಚ್ಚು ಜನದಟ್ಟಣೆಯನ್ನು ಹೊಂದಿರುತ್ತದೆ, ಸಾಮಾನ್ಯ ದಿನಗಳಲ್ಲಿ ಕೂಡ ರೈಲು ಸಂಚಾರವನ್ನು ಹೆಚ್ಚಳ ಮಾಡುವಂತೆ ರೈಲ್ವೆ ಬಳಕೆದಾರರ ಸಂಘ ಹಾಗೂ ಪ್ರಯಾಣಿಕರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ.

ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು

ಇದೀಗ ಗೌರಿ-ಗಣೇಶ ಹಬ್ಬದ ಅಂಗವಾಗಿ ಸೆಪ್ಟೆಂಬರ್ 12ರಂದು ರಾತ್ರಿ 8.45ಕ್ಕೆ ಹೊರಡುವ ರೈಲು(065581) ಮರು ದಿನ ಬೆಳಗ್ಗೆ 8.10ಕ್ಕೆ ಬೆಳಗಾವಿ ತಲುಪಲಿದೆ.

Ganesha festival: Special train between Yeshwanthpur and Belagavi

ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ

ಸೆಪ್ಟೆಂಬರ್ 16ರಂದು ಸಂಜೆ 5.20ಕ್ಕೆ ಬೆಳಗಾವಿಯಿಂದ ಹೊರಡುವ ರೈಲು(06582) ಮರುದಿನ ಬೆಳಗ್ಗೆ 5 ಗಂಟೆಗ ಯಶವಂತಪುರ ತಲುಪಲಿದೆ.ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿದೆ.

ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ

ಈಗಾಗಲೇ ಸರ್ಕಾರಿ ಬಸ್‌ಗಳು ಹಾಗೂ ರೈಲುಗಳು ಫುಲ್ ಆಗಿವೆ, ಇನ್ನು ಖಾಸಗಿ ಬಸ್‌ಗಳು 600-700ರೂ ಪ್ರಯಾಣ ದರ ಏರಿಕೆ ಮಾಡಿದೆ. ಹಾಗಾಘಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದರಿಂದ ನೈಋತ್ಯ ರೈಲ್ವೆಯು ಎರಡು ದಿನ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಿದೆ.

English summary
South western railway has announce special Tatkal train service during Ganesha festival between Yeshwanthpur and Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X