ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಚತುರ್ಥಿಗೆ ಈಗಲೇ‌ ಬಸ್‌ಗಳು ಫುಲ್: ಟಿಕೆಟ್ ಸೋಲ್ಡ್ ಔಟ್!

By Nayana
|
Google Oneindia Kannada News

Recommended Video

Ganesh Chaturthi 2018 : ಗಣೇಶ ಹಬ್ಬಕ್ಕೆ ಎರಡು ವಾರಗಳಿರುವಾಗಲೇ ಎಲ್ಲ ಬಸ್ ಗಳು ಫುಲ್ | Oneindia Kannada

ಬೆಂಗಳೂರು, ಆಗಸ್ಟ್ 27: ಗಣೇಶ ಚತುರ್ಥಿಗೆ ತೆರಳಲು ಈಗಾಗಲೇ ಬೆಂಗಳೂರಿನಲ್ಲಿ ಸೀಟುಗಳನ್ನು ಬುಕ್ ಮಾಡುತ್ತಿದ್ದಾರೆ. ಕೆಎಸ್ ಆರ್ ಟಿಸಿ ಬಸ್‌ಗಳ ಟಿಕೆಟ್ ಬಹುತೇಕ ಫುಲ್ ಆಗಿದೆ. ಸೆಪ್ಟೆಂಬರ್ 11, 12ರಂದು ತೆರಳಲು ಈಗಾಗಲೇ ಟಿಕೇಟ್ ಕಾಯ್ದಿರಿಸಿದ್ದಾರೆ.

ಈ ವರ್ಷ 1000, 1500 ಬಸ್‌ಗಳನ್ನು ವ್ಯವಸ್ಥೆ ಮಾಡಲು ಸಂಸ್ಥೆ ನಿರ್ಧರಿಸಿದೆ. ಕೆಂಪೇಗೌಡ ಬಸ್‌ ನಿಲ್ದಾಣದಿಂದ ಪ್ರತಿದಿನ 369 ಐಷಾರಾಮಿ ಬಸ್‌ಗಳು ಶಿವಮೊಗ್ಗ, ಬೆಳಗಾವಿ, ಶಿರಸಿ, ಗೋಕರ್ಣ, ಮಂಗಳೂರು, ಧರ್ಮಸ್ಥಳ, ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳುತ್ತದೆ. ಕೆಎಸ್ ಆರ್‌ಟಿಸಿ ನಿತ್ಯ ವೋಲ್ವೊ, ಐರಾವತ, ಮಲ್ಟಿ ಎಕ್ಸೆಲ್, ಸ್ಲೀಪರ್ ಸೇರಿದಂತೆ 600ಕ್ಕೂ ಹೆಚ್ಚು ಬಸ್‌ ಗಳನ್ನು ರಾಜ್ಯ ಹಾಗೂ ಹೊರರಾಜ್ಯಗಳಿಗೆ ಕಳುಹಿಸಲಾಗುತ್ತದೆ.

ನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್ನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್

ಸೆಪ್ಟೆಂಬರ್ 12ರಿಂದ 15ರವರೆಗೆ ಮತ್ತು ಸೆಪ್ಟೆಂಬರ್ 15ರಿಂದ 30ರವರೆಗೆ ಹೆಚ್ಚುವರಿ ಬಸ್ ಗಳ ಅವಕಾಶ ಕಲ್ಪಿಸಲಾಗಿದೆ. ಈ 45 ಬಸ್‌ಗಳ ಪೈಕಿ 20ವಾಹನಗಳಲ್ಲಿ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಹಬ್ಬದ ನಿಮಿತ್ತ ಹೆಚ್ಚಿನ ಜನರು ಖಾಸಗಿ ಬಸ್‌ಗಳನ್ನು ಬುಕ್ ಮಾಡುತ್ತಿದ್ದಾರೆ.

Ganesha festival: Bus ticket sold out two weeks before

ಇದರ ಪ್ರಯೋಜನ ಪಡೆದುಕೊಂಡಿರುವ ಟ್ರಾವೆಲ್ ಏಜೆನ್ಸಿಗಳು ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಿವೆ. ಮೈಸೂರು ರಸ್ತೆ ನಿಲ್ದಾಣದಿಂದ 163 ಬಸ್‌ ಗಳನ್ನು ಮೈಸೂರು, ಮಡಿಕೇರಿ, ಕೇರಳ, ಕೊಯಮತ್ತೂರಿಗೆ ಸಂಚರಿಸುತ್ತದೆ. ಇಲ್ಲಿಯೂ ಶೇ.50ರಷ್ಟು ಸೀಟುಗಳು ಮುಂಗಡವಾಗಿ ಬುಕಿಂಗ್ ಆಗಿದೆ.

English summary
Including private operators, KSRTC bus ticket sold out following Ganesha festival on September 11 and 12. Many private buses collecting double bus fare for reservation of the festival day in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X