ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು

By Nayana
|
Google Oneindia Kannada News

Recommended Video

ಗಣೇಶ ಚತುರ್ಥಿ: ಸರ್ಕಾರಿ ಬಸ್ ಹೌಸ್ ಫುಲ್, ಹೆಚ್ಚಾಯ್ತು ಖಾಸಗಿ ಬಸ್ ಪ್ರಯಾಣ ದರ | Oneindia kannada

ಬೆಂಗಳೂರು, ಸೆಪ್ಟೆಂಬರ್ 7: ಗಣೇಶ ಚತುರ್ಥಿಗೆ ಊರಿಗೆ ಹೋಗ್ಬೇಕು ಅಂದ್ಕೊಂಡಿದೀರಾ ಹಾಗಾದ್ರೆ ಬೇಗ ಬೇಗ ಬಸ್‌ ಟಿಕೆಟ್ ಖರೀದಿಸಿ, ಸರ್ಕಾರಿ ಬಸ್‌ಗಳು ಈಗಲೇ ಬುಕಿಂಗ್ ಆಗಿದ್ದು, ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ.

ಬೆಂಗಳೂರಿನಿಂದ ಗಣೇಶ ಚತುರ್ಥಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ಎಲ್ಲರೂ ಸಿದ್ಧತೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ ಬಸ್‌, ರೈಲು ಟಿಕೇಟ್ ಬುಕ್ ಮಾಡುವುದರಲ್ಲಿ ತೊಡಗಿದ್ದಾರೆ.

ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!

ಯಾವುದಾದರೂ ಒಂದು ಬಸ್ ನಲ್ಲಿ ಸೀಟ್ ಸಿಕ್ಕೇ ಸಿಗುತ್ತೆ ಎಷ್ಟೊಂದು ಬಸ್‌ಗಳಿಗೆ ಅಂದುಕೊಂಡು ಊರಿಗೆ ಹೊರಡುವ ಎರಡು ದಿನಗಳ ಹಿಂದೆ ಟಿಕೆಟ್ ಬುಕ್ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ಹಬ್ಬಕ್ಕೆ ವಾರವಿರುವಾಗಲೇ ಸರ್ಕಾರಿ ಬಸ್‌ಗಳ ಟಿಕೇಟ್ ಫುಲ್ ಆಗಿದ್ದು ಇದೀಗ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ.

Ganesha festival: Bus fare on Rising

ಪ್ಲಾಸ್ಟರ್ ಆಫ್‌ ಪ್ಯಾರೀಸ್ ಗಣೇಶ ನಿಷೇಧಕ್ಕೆ ಬಿಬಿಎಂಪಿ ಚಿಂತನೆಪ್ಲಾಸ್ಟರ್ ಆಫ್‌ ಪ್ಯಾರೀಸ್ ಗಣೇಶ ನಿಷೇಧಕ್ಕೆ ಬಿಬಿಎಂಪಿ ಚಿಂತನೆ

ಕಳೆದ ಒಂದು ತಿಂಗಳಿಂದ ಟಿಕೆಟ್ ಗಳನ್ನು ಬುಕ್ ಮಾಡುತ್ತಿದ್ದಾರೆ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಈ ಎಲ್ಲಾ ಕಡೆಗೆ ತೆರಳುವ ಬಸ್‌ಗಳು ಈಗಾಗಲೇ ಬುಕಿಂಗ್ ಆಗಿದೆ. ಇನ್ನೂ ಖಾಸಗಿ ಬಸ್‌ಗಳನ್ನು ಕೇಳಬೇಕೆ ನಿತ್ಯ 600-700 ಇದ್ದ ಟಿಕೆಟ್ ದರ 1500-2000ರೂ ದಾಟಿದೆ. ಒಟ್ಟಾರೆ 600-700ರೂ ಹೆಚ್ಚಳವಾಗಿದೆ.

ಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕುಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕು

ಅಷ್ಟು ಹಣ ನೀಡಲು ಸಿದ್ಧವಿದ್ದರೂ ಕೂಡ ಟಿಕೆಟ್ ಸಿಗದೆ ಪರದಾಡುವಂತಾಗಿದೆ. ಸಾಕಷ್ಟು ಖಾಸಗಿ ಬಸ್‌ಗಳಿಗೆ ಆನ್‌ಲೈನ್ ಬುಕಿಂಗ್ ಇಲ್ಲ ಜಯನಗರ, ಮೆಜೆಸ್ಟಿಕ್, ಬನಶಂಕರಿ ಇನ್ನಿತರೆ ಕಚೇರಿಗೆ ತೆರಳಿ ಟಿಕೆಟ್ ತೆಗೆದುಕೊಳ್ಳಬೇಕಿದೆ. ಆದರೆ ಪ್ರಯಾಣ ದರ ದುಪ್ಪಟ್ಟಾಗಿರುವುದು ತಲೆನೋವಾಗಿದೆ.

English summary
As KSRTC buses reservation have been occupied fully, private bus operators collecting more than double from passengers during this Ganesha festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X