ಬೆಂಗಳೂರು : ಗಣೇಶ ವಿಸರ್ಜನೆಗೆ 36 ಕೆರೆ, 269 ಸಂಚಾರಿ ಘಟಕದ ವ್ಯವಸ್ಥೆ

Posted By: Gururaj
Subscribe to Oneindia Kannada

ಬೆಂಗಳೂರು, ಆಗಸ್ಟ್, 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶಮೂರ್ತಿಗಳ ವಿಸರ್ಜನೆಗೆ ಅಗತ್ಯ ವ್ಯವಸ್ಥೆ ಮಾಡಿದೆ. ರಾತ್ರಿ 10.30ರ ಬಳಿಕ ಗಣೇಶಮೂರ್ತಿಗಳ ವಿಸರ್ಜನೆ ಮಾಡುವಂತಿಲ್ಲ.

ಗಣೇಶ ಚತುರ್ಥಿ ಆಚರಣೆಗೆ ಈ ನಿಯಮಗಳು ಪಾಲಿಸುವುದು ಕಡ್ಡಾಯ

ಬಿಬಿಎಂಪಿ ಮಲ್ಲೇಶ್ವರಂನ ಸ್ಯಾಂಕಿ ಸೇರಿದಂತೆ 36 ಕೆರೆಗಳಲ್ಲಿ ತಾತ್ಕಾಲಿಕ ಪುಷ್ಕರಣಿಗಳನ್ನು ನಿರ್ಮಿಸಿದೆ. ಪಾಲಿಕೆ ವತಿಯಿಂದ 227, ಮಾಲಿನ್ಯ ನಿಯಂತ್ರಣ ಮಂಡಳಿ ವಯಿಯಿಮದ 42 ಸೇರಿ ಒಟ್ಟು 269 ಸಂಚಾರಿ ಘಟಕಗಳ ವ್ಯವಸ್ಥೆ ಮಾಡಲಾಗಿದೆ.

Ganesh Chaturthi : Lists of BBMP immersion ponts

ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಗಣೇಶ ಚತುರ್ಥಿ ಸಮಾರಂಭದಲ್ಲಿ ಪ್ಲಾಸ್ಟಿಕ್ ಅಥವ ಪರಿಸರಕ್ಕೆ ಹಾನಿ ಮಾಡುವ ಬ್ಯಾನರ್, ಬಂಟಿಗ್ಸ್ ಬಳಸುವುದನ್ನು ನಿಷೇಧಿಸಲಾಗಿದೆ' ಎಂದರು.

ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ

'ನಗರದಲ್ಲಿ ರಾತ್ರಿ 10.30ರ ಬಳಿಕ ಗಣೇಶಮೂರ್ತಿ ವಿಸರ್ಜನೆ ಮಾಡಲು ಅವಕಾಶವಿಲ್ಲ. ವಿಸರ್ಜನೆ ವೇಳೆ ಕೆರೆಗಳ ಬಳಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಅಗ್ನಿ ಶಾಮಕ ದಳದ ಮತ್ತು ಬಿಬಿಎಂಪಿ ಸಿಬ್ಬಂದಿಗಳು ನೀಡುವ ಸೂಚನೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು' ಎಂದು ಮೇಯರ್ ಹೇಳಿದರು.

ಪಾಲಿಕೆ ವೆಬ್ ಸೈಟ್ ನೋಡಿ : ಗಣೇಶ ವಿಸರ್ಜನೆಗೆ ಗುರುತಿಸಿರುವ ಕೆರೆಗಳು, ಪುಷ್ಕರಣಿ, ಸಂಚಾರಿ ಘಟಕಗಳು ನಿಲ್ಲುವ ಸ್ಥಳಗಳಗಳ ಬಗ್ಗೆ ಮಾಹಿತಿ ಪಡೆಯಲು ಪಾಲಿಕೆಯ ವೆಬ್ ಸೈಟ್‌ ನೋಡಬಹುದಾಗಿದೆ. ಅಗತ್ಯ ಮಾಹಿತಿಗಳು ಬೇಕಾದಲ್ಲಿ 22660000/22221188 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bangalore Mahanagara Palike (BBMP) setting up 227 mobile tanks along with a list of 36 lakes for Ganesha immersion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ