ನಾಡಗೀತೆಗೆ ದೃಶ್ಯನಮನ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 01: ನಗರದ ಚಾಮುಂಡೇಶ್ವರಿ ಚಲನಚಿತ್ರ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಲಾದ ನಾಡಗೀತೆಗೆ ದೃಶ್ಯನಮನ ದೃಶ್ಯಗೀತೆಯನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದರು.

ಕನ್ನಡ ನಾಡಗೀತೆ ಹೊಸ ಆವೃತ್ತಿಯ ಸಂಗೀತದಲ್ಲಿ ಕೇಳಿ ಆನಂದಿಸಿ

ಮಾರ್ಚ್ 2018 ರಿಂದ ಕನ್ನಡ ಚಲನ ಚಿತ್ರರಂಗ ಪ್ರವೇಶಿಸುವ ಉದ್ದೇಶವಿದೆ.ಮುಂಬರುವ ದಿನಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.

ನಾನು ಪೋಲೀಸ್ ಕಾನ್ಸ್ ಸ್ಟೇಲ್ ಮಗ. ಶಾಲಾ ದಿನಗಳಲ್ಲಿ ವಿಶ್ವ ಹಿಂದು ಪರಿಷತ್ ಆಯೋಜಿಸುವ ರಾಮಾಯಣ ಮತ್ತು ಮಹಾಭಾರತ ಪಠಣ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಶ್ರೇಯಾಂಕ ಪಡೆದಿದ್ದೆ. ಎಲ್ಲಾ ಸಂಧರ್ಭಗಳಲ್ಲೂ ನನ್ನನ್ನೂ ಸೂಜಿಗಲ್ಲಿನಂತೆ ಸೆಳೆದಿದ್ದು ನಾಡಗೀತೆ.

ಅಮೆರಿಕಾದ ಮ್ಯಾಂಚೆಸ್ಟರ್‌ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಸಂಧರ್ಭದಲ್ಲಿ ನಾನು ನಾಡಗೀತೆಗೆ ಧ್ವನಿಗೂಡಿಸಿದ್ದೇನೆ. ನಾನು ದೊಡ್ಡ ಗಾಯಕ ಅಲ್ಲದೇ ಹೋದರೂ ಕೂಡಾ ನಾಡಗೀತೆಗೆ ದನಿಗೂಡಿಸಿದ್ದೇನೆ ಎಂದರು.

ನಾಡು ನುಡಿಯ ಬಗ್ಗೆ ಅಭಿಮಾನವಿದೆ: ಗಾಲಿರೆಡ್ಡಿ

ನಾಡು ನುಡಿಯ ಬಗ್ಗೆ ಅಭಿಮಾನವಿದೆ: ಗಾಲಿರೆಡ್ಡಿ

ನಾನು ಮೊದಲಿನಿಂದಲೂ ನಾಡು ನುಡಿಯ ಬಗ್ಗೆಯೂ ಕೂಡಾ ಅಭಿಮಾನ ಹೊಂದಿದ್ದೇನೆ. ಮೊದಲಿನಿಂದಲೂ ಕನ್ನಡ ಚಿತ್ರರಂಗ ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿದೆ.

ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶ

ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶ

ಈ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದೇನೆ. ಅಲ್ಲದೆ, ರಾಜಕೀಯ ಹಾಗೂ ಚಲನ ಚಿತ್ರರಂಗ ಎರಡೂ ನನ್ನ ಕಣ್ಣುಗಳು ಎಂದರು.

ನಾಡಗೀತೆಗೆ ಹೊಸದೊಂದು ರೂಪ

ನಾಡಗೀತೆಗೆ ಹೊಸದೊಂದು ರೂಪ

ನಾಡಗೀತೆಗೆ ಹೊಸದೊಂದು ರೂಪವನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಕಲಾವಿದ ಹಾಗೂ ನಿರ್ದೇಶಕ ಅಯ್ಯಪ್ಪ ಶರ್ಮಾ ಅವರ ಪರಿಕಲ್ಪನೆಯಲ್ಲಿ ಮೂಡಿರುವ ದೃಶ್ಯಗೀತೆಯನ್ನು ಜನರ ಮುಂದಿಡುವ ಪ್ರಯತ್ನ ಇದಾಗಿದೆ ಎಂದರು.

ತಾಂತ್ರಿಕ ವರ್ಗದ ಶ್ರಮ ಸಾರ್ಥಕವೆಂದ ರೆಡ್ಡಿ

ತಾಂತ್ರಿಕ ವರ್ಗದ ಶ್ರಮ ಸಾರ್ಥಕವೆಂದ ರೆಡ್ಡಿ

ಈ ದೃಶ್ಯಗೀತೆ ಛಾಯಗ್ರಹಣವನ್ನು ರಾಜೇಶ್ ಕಾಟ, ಸಂಗೀತ ಕೌಶಿಕ್ ಹರ್ಷ, ಕಲೆ ಶಶಿಧರ ಅಡಪ ಓದಗಿಸಿದ್ದು, ಲಕ್ಷ್ಮಣರೆಡ್ಡಿ ಸಂಕಲ ಮಾಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಅಯ್ಯಪ್ಪ ಶರ್ಮ ಸೇರಿದಂತೆ ತಾಂತ್ರಿಕ ವರ್ಗದವರು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Rajyotsava Special : Karnataka's former minister Gali Janardhan reddy is back with another video, this time he is seen acting to Kannada Nadageethe video song directed by Ayyappa P Sharma

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ