ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪನಗದೀಕರಣದ ಲಾಭ ಎಲ್ಲರಿಗೂ ಸಲ್ಲುತ್ತದೆ : ಪಿಯೂಶ್ ಗೋಯೆಲ್

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : ಅಪನಗದೀಕರಣ ಕುರಿತಂತೆ ಉದ್ಭವಾಗಿರುವ ಎಲ್ಲ ಟೀಕೆಗಳನ್ನು ತಳ್ಳಿಹಾಕಿರುವ ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಅವರು, ನೋಟ್ ಬ್ಯಾನ್ ನಿಂದ ಲಭಿಸಿರುವ ಎಲ್ಲ ಲಾಭವನ್ನು ಎಲ್ಲರಿಗೂ ಹಂಚಲಾಗುವುದು ಎಂದು ಹೇಳಿದ್ದಾರೆ.

ಐಐಎಂಬಿಯ ನಾಯಕತ್ವ ಶೃಂಗಸಭೆಯಲ್ಲಿ ಶನಿವಾರ ಮಾತನಾಡುತ್ತಿದ್ದ ಅವರು, ಅಪನಗದೀಕರಣದಿಂದ ನಮಗೆ ಸಾಕಷ್ಟು ಲಾಭ ಸಿಗುವುದು ಗ್ಯಾರಂಟಿ. ಜನರ ಕಲ್ಯಾಣಕ್ಕಾಗಿ, ಅದರಲ್ಲೂ ಹೆಚ್ಚಾಗಿ ಬಡವರಿಗಾಗಿ ಇದರಿಂದ ದಕ್ಕುವ ಲಾಭವನ್ನು ಹಂಚಲಾಗುವುದು ಎಂದರು.

Gain from demonetisation to be shared with all: Piyush Goyal

ನೋಟ್ ಬ್ಯಾನ್ ಬಗ್ಗೆ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿರುವ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಗೋಯೆಲ್ ಅವರು, ಸರಕಾರದ ಈ ನಡೆಯನ್ನು, ಕೆಲವರನ್ನು ಹೊರತುಪಡಿಸಿ ದೇಶದ ಎಲ್ಲ ಜನತೆ ಮುಕ್ತಕಂಠದಿಂದ ಹೊಗಳಿದ್ದಾರೆ ಎಂದರು.

ನವೆಂಬರ್ 8ರ ಸಂಜೆ ನರೇಂದ್ರ ಮೋದಿ ಆರಂಭಿಸಿದ ನೋಟ್ ಬ್ಯಾನ್ ನಂಥ ವಿವಾದಾತ್ಮಕ ಯಜ್ಞದಿಂದಾಗಿ ತಕ್ಷಣ ಯಾವ ರೀತಿ ಲಾಭ ಲಭಿಸುತ್ತದೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ.

English summary
Speaking at an event hosted by Indian Institute of Management, Bengaluru on Saturday, while dismissing all the criticism faced by the government over notes ban, Union Minister Piyush Goyal said the gain from demonetisation will be shared with all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X