ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಊಬರ್ ಕಾರುಗಳಿಗೆ ಸಿಎನ್‌ಜಿ ಇಂಧನ, ಗೈಲ್ ಜೊತೆ ಒಪ್ಪಂದ

By Gururaj
|
Google Oneindia Kannada News

ಗಳೂರು, ಜೂನ್ 18 : ಸಿಎನ್‌ಜಿ ಇಂಧನ ಬಳಕೆ ಪ್ರೋತ್ಸಾಹಿಸಲು ಗೈಲ್ ಬೆಂಗಳೂರು ನಗರದಲ್ಲಿ ಊಬರ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಗೈಲ್ ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಸಿಎನ್‌ಜಿ ಇಂಧನ ತುಂಬಿಸುವ ಬಂಕ್ ಆರಂಭಿಸಿದೆ.

ಸಾಂದ್ರಿಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಕೆ ಪ್ರೋತ್ಸಾಹಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೈಲ್) ಮತ್ತು ಊಬರ್ ಟ್ಯಾಕ್ಸಿ ಕಂಪನಿ ಒಪ್ಪಂದ ಮಾಡಿಕೊಳ್ಳಲಿವೆ. ನಗರದ ಸುಮಾರು 500 ಕಾರು ಸಿಎನ್‌ಜಿಯಿಂದ ಓಡುವಂತೆ ಊಬರ್ ಬದಲಾವಣೆ ಮಾಡಲಿದೆ.

ಬೆಂಗಳೂರಿನ ರಸ್ತೆಗಿಳಿಯಲಿವೆ ಉಬರ್ ಪರಿಸರ ಸ್ನೇಹಿ ಕಾರುಗಳುಬೆಂಗಳೂರಿನ ರಸ್ತೆಗಿಳಿಯಲಿವೆ ಉಬರ್ ಪರಿಸರ ಸ್ನೇಹಿ ಕಾರುಗಳು

ಗೈಲ್ ಈಗಾಗಲೇ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪೈಪ್ ಲೈನ್ ಮೂಲಕ ಸಿಎನ್‌ಜಿ ಪೂರೈಕೆ ಮಾಡುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅದು ಗ್ಯಾಸ್ ಬಂಕ್ ಸಹ ಆರಂಭಿಸಿದೆ.

GAIL may tie up with Uber to promote natural gas

'ಊಬರ್ ಜೊತೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಊಬರ್ ಟ್ಯಾಕ್ಸಿಗಳಿಗೆ ಸಿಎನ್‌ಜಿ ಇಂಧನ ತುಂಬಿಸಿ, ಬಳಕೆಗೆ ಪ್ರೋತ್ಸಾಹ ನೀಡಲು ನಾವು ಸಿದ್ಧರಿದ್ದೇವೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓಲಾ, ಊಬರ್ ಪ್ರಯಾಣ ಶೇ.65ರಷ್ಟು ತುಟ್ಟಿ ಸಂಭವಓಲಾ, ಊಬರ್ ಪ್ರಯಾಣ ಶೇ.65ರಷ್ಟು ತುಟ್ಟಿ ಸಂಭವ

ಗೈಲ್ ಬೆಂಗಳೂರು ನಗರದಲ್ಲಿ ಸಿಎನ್‌ಜಿ ಇಂಧನ ಬಳಕೆಯನ್ನು ಹೆಚ್ಚಿಸಲು 2 ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. ನಗರದ ಸುಮನಹಳ್ಳಿ, ಪೀಣ್ಯ, ಹೆಣ್ಣೂರು, ಮಾಗಡಿ ರಸ್ತೆಯ ಸಮೀಪ ಬಂಕ್‌ಗಳನ್ನು ಆರಂಭಿಸಿದೆ.

ಬಿಎಂಟಿಸಿಯ ಬಳಿ ಸಿಎನ್‌ಜಿ ಇಂಧನದಿಂದ ಓಡುವ ಬಸ್‌ಗಳನ್ನು ಖರೀದಿ ಮಾಡಲು ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ 20 ಸಿಎನ್‌ಜಿ ಇಂಧನ ಬಂಕ್ ಆರಂಭಿಸಲು ಚಿಂತನೆ ನಡೆಸಿದೆ.

English summary
In effort to encourage the use of eco-friendly natural gas (CNG) fuel GAIL Gas Ltd may tying up with Uber in Bengaluru city. Uber is likely to convert close to 500 of its four-wheelers to CNG fuel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X