ಪೆಟ್ರೋಲ್ ಬಂಕ್ ಮುಷ್ಕರ: 2 ದಿನ ತೈಲ ಖರೀದಿ ಮಾಡಲ್ಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ನವೆಂಬರ್ 2: ಇನ್ನು ಎರಡು ದಿನ (ಗುರುವಾರ, ಶುಕ್ರವಾರ) ಪೆಟ್ರೋಲ್ ಬಂಕ್ ಗಳು ಮುಚ್ಚಿರುತ್ತವೆ. ಪೆಟ್ರೋಲ್ ಖರೀದಿಸದೆ ಇರಲು ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ. ತೈಲ ಕಂಪನಿಗಳ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ. ಡೀಲರ್ ಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಲಾಭದ ಪ್ರಮಾಣ ಹೆಚ್ಚಿಸಬೇಕು ಹಾಗೂ ಅಪೂರ್ವಚಂದ್ರ ಸಮಿತಿ ಶಿಫಾರಸುಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಅಖಿಲ ಕರ್ನಾಟಕ ಪೆಟ್ರೋಲಿಯಂ ಟ್ರೇಡರ್ಸ್ ಅಸೋಸಿಯೇಷನ್ ಮತ್ತು ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ ಮಾತನಾಡಿ, ಪ್ರತಿಭಟನೆ ಅಂದರೆ ಎರಡು ದಿನ ತೈಲ ಕಂಪೆನಿಗಳಿಂದ ದಾಸ್ತಾನು ಖರೀದಿಸದಿರಲು ತೀರ್ಮಾನಿಸಿದ್ದೇವೆ. ಇದು ತೈಲ ದಾಸ್ತಾನಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಬಂಕ್ ಮಾಲೀಕರು ಹೇಳಿದ ಪ್ರಕಾರ ನಾಳೆವರೆಗೆ ಅವರ ಬಳಿ ದಾಸ್ತಾನಿದೆ ಎಂದು ಹೇಳಿದ್ದಾರೆ.[ನ.3 ಮತ್ತು 4ರಂದು ಪೆಟ್ರೋಲ್ ಬಂಕ್ ಮುಷ್ಕರ]

Petrol

ಶನಿವಾರದ ನಂತರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪೆಟ್ರೋಲ್ ಬಂಕ್ ಗಳು ಒಂದೇ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಕನಿಷ್ಠ ವೇತನ, ವಿದ್ಯುತ್ ದರ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಡೀಲರ್ ಗಳಿಗೆ ಕಮಿಷನ್ ನೀಡಬೇಕು ಎಂದು ಅಪೂರ್ವಚಂದ್ರ ಸಮಿತಿ ಶಿಫಾರಸು ಮಾಡಿದೆ. ಬೆಂಗಳೂರು ನಗರದಲ್ಲಿ 400 ಪೆಟ್ರೋಲ್ ಬಂಕ್ ಗಳಿವೆ. ಇನ್ನು ರಾಜ್ಯದಾದ್ಯಂತ 4000 ಬಂಕ್ ಇವೆ. ನಗರದಲ್ಲಿ 25 ಬಂಕ್ ಗಳನ್ನು ಖಾಸಗಿ ಕಂಪೆನಿಗಳು ಹಾಗೂ 20 ಬಂಕ್ ಅನ್ನು ಸ್ವತಃ ತೈಲ ಕಂಪನಿಗಳೇ ನಡೆಸುತ್ತವೆ. ಅವು ತೆರೆದಿರುವ ಸಾಧ್ಯತೆಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Several banks are likely to go dry over the next two days with a two day no purchase decision being taken by petrol bunk owners. The protest is against the oil companies. The dealers protest for the implementation of the recommendations by the Apurva Chandra Committee.
Please Wait while comments are loading...