ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಪೆಟ್ರೋಲ್ ಸಿಗಲ್ವಾ?

Subscribe to Oneindia Kannada

ಬೆಂಗಳೂರು, ಮೇ 05: ಇಂಧನ ಸಾಗಾಟಕ್ಕೆ ಉಂಟಾಗುತ್ತಿರುವ ತೊಂದರೆ ನಿವಾರಿಸಲು ಪ್ರಮುಖ ಇಂಧನ ಕಂಪನಿಗಳು ಪರಿಹರಿಸಲು ವಿಫಲವಾಗಿರುವ ಹಿನ್ನೆಲೆ ಲಾರಿ ಮಾಲೀಕರು ಮತ್ತೆ ಮುಷ್ಕರ ಮಾಡಲು ಸಿದ್ಧರಾಗಿದ್ದಾರೆ.

ಹೋಸಕೋಟೆ ಬಳಿಯ ದೇವನಗುಂದಿಯಿಂದ ಇಂಧನ ಸಾಗಾಟಕ್ಕೆ ಎದುರಾಗುತ್ತಿರುವ ಸಮಸ್ಯೆ ಬಗ್ಗೆ ಮೂರು ಪ್ರಮುಖ ಇಂಧನ ಕಂಪನಿಗಳು ಅಸಡ್ಡೆ ತೋರಿರುವ ಕಾರಣ ಇಂಧನ ಪೂರೈಸುವ ಲಾರಿ ಮಾಲೀಕರು ಶುಕ್ರವಾರ (ಮೇ 06) ಮತ್ತೆ ಮುಷ್ಕರ ಆರಂಭಿಸುವ ಸಾಧ್ಯತೆ ಇದೆ.[ಭಾರತದಲ್ಲಿ ತೈಲ ದರ ಯಾಕೆ ಇಳಿಯುತ್ತಿಲ್ಲ? ಇಲ್ಲಿದೆ ಉತ್ತರ]

petrol

ಹೊಸಕೋಟೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಎಚ್‌ಪಿಸಿಎಲ್, ಐಒಸಿ, ಬಿಪಿಸಿಎಲ್ ಕಂಪನಿಗಳಿಂದ ಬೆಂಗಳೂರು ವಿಭಾಗಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯಾಗುತ್ತಿದೆ. ಕಿರಿದಾದ ಮತ್ತು ಕಳಪೆಯಾಗಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರು, ಚಾಲಕರ ಸಂಘಗಳು ಕಳೆದ ತಿಂಗಳು ಮುಷ್ಕರ ಮಾಡಿದ್ದವು.

ಒಂದು ತಿಂಗಳೊಳಗೆ ಸಮಸ್ಯೆ ಪರಿಹರಿಸುವುದಾಗಿ ಕಂಪನಿಗಳು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮುಷ್ಕರ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಸಮಸ್ಯೆಗೆ ಇನ್ನು ಪರಿಹಾರ ಸಿಗದ ಕಾರಣ ಮುಷ್ಕರ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.[ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ದೇವನಗುಂದಿಯಿಂದಲೇ ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೆಟ್ರೋಲ್-ಡೀಸೆಲ್ ಪೂರೈಕೆಯಾಗುತ್ತಿದೆ. ಹೊಸಕೋಟೆಯಿಂದ ದೇವನಗುಂದಿಗೆ ಸಾಗುವ ರಸ್ತೆಗಳು ಚೆನ್ನಾಗಿಲ್ಲ. ಹೊಸ ರಸ್ತೆ ನಿರ್ಮಿಸಿದರೂ ಕಿತ್ತು ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು. ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಕಂಪನಿಗಳೇ ನಿರ್ಮಿಸಬೇಕು ಎಂಬ ಒತ್ತಾಯವನ್ನು ಲಾರಿ ಮಾಲೀಕರು ಮುಂದೆ ಇಟ್ಟಿದ್ದಾರೆ.

ವಾರಾಂತ್ಯ ಸಮಸ್ಯೆ
ಶುಕ್ರವಾರ ಮುಷ್ಕರ ಆರಂಭವಾದರೆ ಬೆಂಗಳೂರಿಗರಿಗೆ ತಾಪತ್ರಯ ಆರಂಭವಾಗುವುದರಲ್ಲಿ ಅನುಮಾನವಿಲ್ಲ. ಸೋಮವಾರದವರೆಗೂ ಪೆಟ್ರೋಲ್, ಡೀಸೆಲ್ ದೊರೆಯುವುದು ಅನುಮಾನ. ಲಾರಿ ಮಾಲೀಕರು ಮುಷ್ಕರ ನಡೆಸುವ ವೇಳೆ ದಿಢೀರ್ ಎಂದು ಒಗ್ಗಟ್ಟು ಪ್ರದರ್ಶನ ಮಾಡುತ್ತಾರೆ ಎಂಬ ಸಂಗತಿಯನ್ನು ತೈಲ ಕಂಪನಿಗಳು ತಲೆಯಲ್ಲಿ ಇಟ್ಟುಕೊಳ್ಳಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Petrol bunks in the city are likely to go dry over the weekend with fuel transporters threatening to go on an indefinite strike. All 700-odd petrol tankers ferrying petrol/diesel into the city from the fuel terminal at Devanagonthi, will remain off the roads, starving the city petrol bunks of petrol and diesel. They are on strike demanding basic facilities at the Devanagonthi terminal.
Please Wait while comments are loading...