ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ವಾಣಿಜ್ಯನಗರಿ ಮುಂಬೈನಲ್ಲಿ ಪೆಟ್ರೋಲ್ ದರ 90ರ ಗಡಿ ದಾಟಿದೆ, ಬೆಂಗಳೂರಿನಲ್ಲಿ ಸೆ.24ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.37ರೂಗೆ ಏರಿಕೆಯಾಗಿತ್ತು. ಸೆ.25ರಂದು ಅದೇ ದರ ಮುಂದುವರೆದಿದೆ.

ಮುಂಬೈಯಲ್ಲಿ 90 ರು ಗಡಿ ದಾಟಿದ ಪೆಟ್ರೋಲ್ ಬೆಲೆ ಮುಂಬೈಯಲ್ಲಿ 90 ರು ಗಡಿ ದಾಟಿದ ಪೆಟ್ರೋಲ್ ಬೆಲೆ

ಸೆ.23ರಂದು 83.26ರೂ ಇದ್ದ ಲೀಟರ್ ಪೆಟ್ರೋಲ್ ದರ ಸೆ.24ಕ್ಕೆ 11 ಪೈಸೆ ಏರಿಕೆ ಕಂಡಿತ್ತು.ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ರಾಜ್ಯ ಬಂದ್ ಮಾಡಲಾಗಿತ್ತು.

ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಕ್ಯಾಶ್‌ಬ್ಯಾಕ್ ಕಟ್ ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಕ್ಯಾಶ್‌ಬ್ಯಾಕ್ ಕಟ್

ಅದಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಪೆಟ್ರೋಲ್ ಬೆಲೆ ಲೀಟರ್ ಗೆ 2 ರೂ ಕಡಿಮೆ ಮಾಡಿ ಆದೇಶ ಹೊರಡಿಸಿದ್ದರು. ಅದಾದ ಬಳಿಕ ಹೆಚ್ಚಿನ ಏರಿಕೆ ಕಾರಣದಿದ್ದರೂ ಕೂಡ ಪೈಸೆ ಲೆಕ್ಕದಲ್ಲಿ ಏರುತ್ತಿದೆ. ಅದೇ ರೀತಿ ಡೀಸೆಲ್ 74.40 ರೂ ಆಗಿದೆ.

Fuel price stagnant in Bengaluru

ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 84.54 ರು ಪ್ರತಿ ಲೀಟರ್ ಗೆ, ಚೆನ್ನೈನಲ್ಲಿ 85.99 ರು ನಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೊಲ್ ಬೆಲೆ 83.37ರು ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 74.40 ರು ನಷ್ಟಿದೆ. ಇನ್ನು ದೆಹಲಿಯಲ್ಲಿ ಕೂಡ ಸೆ.25ರಂದು ಪ್ರತಿ ಲೀಟರ್ ಗೆ 82.72 ರೂ ಆಗಿತ್ತು ಅದೇ ದರ ಮುಂದುವರೆದಿದೆ.

English summary
Petrol and diesel price was remained same on Tuesday as petrol was Rs.83.37 per liter on Monday with increase of 11 paisa than previous day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X