ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರು ಬೋಗಿಯ ಮೆಟ್ರೋ ರೈಲು ಇಂದಿನಿಂದ ಕಾರ್ಯಾರಂಭ

By Nayana
|
Google Oneindia Kannada News

Recommended Video

6 ಭೋಗಿಗಳ ನಮ್ಮ ಮೆಟ್ರೋ ರೈಲನ್ನ ಉದ್ಘಾಟನೆ ಮಾಡಲಿದ್ದಾರೆ ಸಿ ಎಂ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜೂನ್ 22: ಆರು ಬೋಗಿಯ ನಮ್ಮ ಮೆಟ್ರೋ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿದೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೋಗಿಯ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಆರು ಬೋಗಿಯ ರೈಲು ಸಂಚಾರಕ್ಕೆ ಶುಕ್ರವಾರ ಸಂಜೆ 5.30ಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಚಾಲನೆ ನೀಡಲಿದ್ದಾರೆ. ಸದ್ಯಕ್ಕೆ ಒಂದು ರೈಲಿಗೆ ಮಾತ್ರ ಆರು ಬೋಗಿ ಜೋಡಣೆಯಾಗಲಿದೆ.

ಮೊಬೈಲ್‌ ಮೂಲಕವೇ ನಮ್ಮ ಮೆಟ್ರೋ ಟಿಕೆಟ್ ಪಡೆಯಬಹುದುಮೊಬೈಲ್‌ ಮೂಲಕವೇ ನಮ್ಮ ಮೆಟ್ರೋ ಟಿಕೆಟ್ ಪಡೆಯಬಹುದು

ಮೊದಲ ಬೋಗಿಯನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಾಗುತ್ತದೆ. 3 ಬೋಗಿಯ ರೈಲಿನಲ್ಲಿ 975 ಮಂದಿ ಪ್ರಯಾಣಿಸಲು ಸಾಧ್ಯವಿದೆ. ಆರು ಬೋಗಿಯ ರೈಲಿನಲ್ಲಿ ಒಂದೇ ಬಾರಿಗೆ 1,950 ಮಂದಿ ಪ್ರಯಾಣಿಸಬಹುದು.

From Today Namma Metro will have 6 coaches

ಹಸಿರು ಮಾರ್ಗದಲ್ಲಿ ಕನಿಷ್ಠ 1.6 ಲಕ್ಷ ಪ್ರಯಾಣಿಕರು ನೇರಳೆ ಮಾರ್ಗದಲ್ಲಿ 1.87 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಅಲ್ಲದೆ, ಪ್ರಮುಖ ಕೈಗಾರಿಕಾ ಪ್ರದೇಶವಾದ ವೈಟ್‌ಫೀಲ್ಡ್ ಸಂಪರ್ಕ ಕಲ್ಪಿಸುವುದರಿಂದ ಈ ಮಾರ್ಗದಲ್ಲೇ ಆರು ಬೋಗಿ ರೈಲನ್ನು ಕಾರ್ಯಾಚರಿಸಲು ತೀರ್ಮಾನಿಸಲಾಗಿದೆ. ಪ್ರತಿ ದಿನ ರೈಲು ಸಂಚರಿಸುವ ಅವಧಿಯನ್ನು ನಿಗದಿಪಡಿಸಲಾಗಿದೆ.

ಈ ವೇಳಾಪಟ್ಟಿಯನ್ನು ತಪ್ಪದೆ ಅನುಸರಿಸಲಾಗುತ್ತದೆ. ಆದರೆ ಪೀಕ್ ಅವಧಿಯಲ್ಲಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೆಲ ನಿಮಿಷಗಳವರೆಗೆ ವೇಳಾಪಟ್ಟಿಯನ್ನು ಕೈಬಿಟ್ಟು ಹೆಚ್ಚುವರಿ ರೈಲು ಸೇವೆ ನೀಡಲಾಗುತ್ತದೆ ಇದನ್ನು ಲೂಪ್ ಸರ್ವೀಸ್ ಎಂದು ಕರೆಯಲಾಗುತ್ತದೆ. ಅದರು ಬೋಗಿ ರೈಲು ಕಾರ್ಯಾಚರಣೆಗಿಳಿದ ನಂತರವೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ಅದರ ಹಿಂದೆಯೇ ಲೂಪ್ ಸರ್ವೀಸ್ ನೀಡಿ ದಟ್ಟಣೆ ಕಡಿಮೆ ಮಾಡಲಾಗುತ್ತದೆ.

ಸದ್ಯಕ್ಕೆ ಮೆಟ್ರೋ ನಿತ್ಯ ಪ್ರಯಾಣಿಕರ ಸರಾಸರಿ ಪ್ರಮಣ 3.36 ಲಕ್ಷ ಆಗಿದೆ. ಅಪರೂಪಕ್ಕೆ ಇದು 4 ಲಕ್ಷ ತಲುಪುತ್ತದೆ. ಆರು ಬೋಗಿ ರೈಲು ಬಂದ ನಂತರ ಪ್ರತಿ ದಿನ 4 ಲಕ್ಷ ಪ್ರಯಾಣಿಕರು ಸಂಚರಿಸಬಹುದು ಎಂದು ನಿರೀಕ್ಷಿಸಲಾಗಿದೆ.

English summary
After a long time expectation of Namma Metro has finally come true that from Friday onwards it will have six coaches with transportation capacity of around 1,950 commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X