ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನಸ್ವಾಮಿ ಸ್ಟೇಡಿಯಂನಿಂದ ಲಂಡನ್ ನ ಕೋರ್ಟ್ ಬೆಂಚಿನವರೆಗೆ

ಒಂಬತ್ತು ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ತಂಡಕ್ಕೆ ಉತ್ತೇಜನ ನೀಡುತ್ತಿದ್ದ ವಿಜಯ್ ಮಲ್ಯ, ಅದೇ ದಿನ ಅಂದರೆ ಏಪ್ರಿಲ್ 18ರಂದು 2017ರಲ್ಲಿ ಲಂಡನ್ ನ ಕೋರ್ಟ್ ಬೆಂಚಿನಲ್ಲಿ ಕೂರುವಂತಾಗಿದೆ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 18: ನಸೀಬು ಕೈ ಕೊಟ್ಟರೆ ಬದುಕಿಗೆ ಎಂಥ ಲಾತಾ ಬೀಳುತ್ತದೆ ಅನ್ನೋದಕ್ಕೆ ವಿಜಯ್ ಮಲ್ಯ ಸರಿಯಾದ ಉದಾಹರಣೆ. 9 ವರ್ಷದ ಹಿಂದೆ, ಸರಿಯಾಗಿ ಏಪ್ರಿಲ್ 18ನೇ ತಾರೀಕು ವಿಜಯ್ ಮಲ್ಯ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯದಲ್ಲಿ ರಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರೋತ್ಸಾಹಿಸುತ್ತಾ ಇದ್ದರು.

2008ರ ಏಪ್ರಿಲ್ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೊದಲನೇ ಪಂದ್ಯದಲ್ಲಿ ವಿಜಯ್ ಮಲ್ಯ ಇದ್ದರು. ಒಂಬತ್ತು ವರ್ಷಗಳ ನಂತರ ಅಂದರೆ ಏಪ್ರಿಲ್ 18, 2017ರಲ್ಲಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಲ್ಯ, ವೆಸ್ಟ್ ಮಿನಿಸ್ಟರ್ ಕೋರ್ಟ್ ನಲ್ಲಿ ಕೂತಿದ್ದಾರೆ.[ಅರೆಸ್ಟ್ ಆದ 3 ಗಂಟೆಯೊಳಗೆ ಮಲ್ಯಗೆ ಜಾಮೀನು!!!]

From Good Times with IPL in 2008 to Jail time in UK in 2017

9 ವರ್ಷದ ಹಿಂದೆ ಇದೇ ದಿನ ರಾಯಲ್ ಚಾಲೆಂಜರ್ಸ್ ನ ಹೆಮ್ಮೆಯ ಮಾಲೀಕತ್ವ ವಹಿಸಿದ್ದ ಮಲ್ಯ, ರಾಹುಲ್ ದ್ರಾವಿಡ್ ನಾಯಕತ್ವದ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯದ ಪಂದ್ಯವನ್ನು ವೀಕ್ಷಿಸಿದ್ದರು. ಕೋಲ್ಕತ್ತಾ ತಂಡ ಬೆಂಗಳೂರು ವಿರುದ್ಧ 140 ರನ್ ಗಳಿಂದ ಜಯ ಸಾಧಿಸಿತ್ತು. ಬ್ರೆಂಡನ್ ಮೆಕಲಂ ಬಾರಿಸಿದ 158 ರನ್ ನಿಂದ ಕೋಲ್ಕತ್ತಾ ಜಯ ಸಾಧಿಸಿತ್ತು.[ವಿಜಯ್ ಮಲ್ಯ ಯುಕೆಯಲ್ಲಿ ಬಂಧನಕ್ಕೊಳಗಾಗಿದ್ದು ಹೇಗೆ?]

ವಿಜಯ್ ಮಲ್ಯರ ಐಪಿಎಲ್ ಮೇಲಿನ ಪ್ರೀತಿ 2016ರ ಅಟಗಾರರ ಹರಾಜಿನವರೆಗೆ ಮುಂದುವರಿದಿತ್ತು. ಮದ್ಯ, ಮಹಿಳೆಯರ ಮಧ್ಯೆ ಪಾರ್ಟಿಗಳಲ್ಲಿ ಮಿಂಚುತ್ತಿದ್ದ ಮಲ್ಯರ ಒಳ್ಳೆ ದಿನಗಳು ಕೊನೆಯಾಗಿವೆ.

English summary
The evasive mining baron, Vijay Mallya, who fled the country in 2016 was arrested by the Scotland Yard police on Tuesday. Did you know that on this very day, nine years ago, Vijay Mallya was in Bengaluru cheering for his IPL team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X