ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಫ್ರೆಂಚ್‌ ಕಂಪನಿಯೊಂದಿಗೆ ಒಪ್ಪಂದ

By Nayana
|
Google Oneindia Kannada News

ಬೆಂಗಳೂರು, ಜೂನ್ 7: ನಗರದಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಆ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ನಾನಾ ಕ್ರಮವನ್ನು ಕೈಗೊಂಡಿದೆ. ಇದೀಗ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಫ್ರೆಂಚ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನಗರದ ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 500 ಮೆಟ್ರಿಕ್ ಟನ್ ಕಸದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಬಿಬಿಎಂಪಿಯು ಫ್ರೆಂಚ್ ನ '3 ವೇಸ್ಟ್ ಕಂಪನಿ'ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಫ್ರಾನ್ಸ್‌ನ ಭಾರತೀಯ ರಾಯಭಾರಿ ಅಲೆಕ್ಸಾಂಡರ್ ಜಿಗ್ಗರ್ ಅವರು ಒಡಂಬಡಿಕೆಯ ಕಡತವನ್ನು ಮೇಯರ್ ಆರ್. ಸಂಪತ್‌ ರಾಜ್‌ ಅವರಿಗೆ ಹಸ್ತಾಂತರಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ತ್ಯಾಜ್ಯ ಸಾಗಿಸಲು ಕೆಸಿಡಿಸಿ ನಿಗಮಕ್ಕೆ ಹೈಕೋರ್ಟ್ ನಿರ್ದೇಶನಬಿಬಿಎಂಪಿ ವ್ಯಾಪ್ತಿಯಲ್ಲಿರುವ ತ್ಯಾಜ್ಯ ಸಾಗಿಸಲು ಕೆಸಿಡಿಸಿ ನಿಗಮಕ್ಕೆ ಹೈಕೋರ್ಟ್ ನಿರ್ದೇಶನ

ಚಿಕ್ಕನಾಗಮಂಗಲ ಘಟಕದಲ್ಲಿ ತ್ಯಾಜ್ಯದಿಂದ ಉತ್ಪಾದಿಸುವ ಘಟಕ ಸ್ಥಾಪನೆಗೆ ಅನುಮತಿ ಕೋರಿ ಫ್ರೆಂಚ್ ಕಂಪನಿಯು ಪಾಲಿಕೆಗೆ 2017ರ ಆ.3ರಂದು ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಕಂಪನಿಯು ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ 7 ತಿಂಗಳೊಳಗೆ ಘಟಕ ಆರಂಭಗೊಳ್ಳುವ ನಿರೀಕ್ಷೆ ಇದೆ.

French company will install waste to Energy plant near Chikka Nagamangala

3 ವೇಸ್ಟ್ ಫ್ರೆಂಚ್ ಕಂಪನಿಯು ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಘಟಕವನ್ನು ಸ್ಥಾಪಿಸಲಿದೆ. ಹೀಗಾಘಿ, ಸುಮಾರು 15.03 ಎಕರೆಯಷ್ಟಿರುವ ಚಿಕ್ಕನಾಗಮಂಗಲ ಘಟಕವನ್ನು ಕಂಪನಿಗೆ ಉಚಿತ ಬಳಕೆಗಾಗಿ 30 ವರ್ಷಗಳ ಗುತ್ತಿಗೆ ನೀಡಲಾಗುತ್ತಿದೆ. ಪಾಲಿಕೆಯು ನಿತ್ಯ 300 ಟನ್ ಅಷ್ಟು ಕಸವನ್ನು ಘಟಕಕ್ಕೆ ಪೂರೈಸಲಿದೆ. ಕಂಪನಿ ಉತ್ಪಾದಿಸಿದ ಘಟಕದಲ್ಲಿ ಪ್ರತಿ ಯೂನಿಟ್ ವಿದ್ಯುತ್ ಅನ್ನು 7.08 ರೂ.ಗಳಿಗೆ ಕೆಪಿಟಿಸಿಎಲ್ ಮಾರಾಟ ಮಾಡಲಿದೆ.

English summary
France based '3 waste company' has signed agreement with BBMP to install 500 MW waste to energy plant at Chikka Nagamangala. Solid waste treatment plant will be executed by seven months, BBMP said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X