ಜೂನ್ 18ಕ್ಕೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಉಚಿತ ಯೋಗ ಕ್ಯಾಂಪ್

Posted By:
Subscribe to Oneindia Kannada

ಬೆಂಗಳೂರು, ಜೂನ್ 15: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇದೇ ಭಾನುವಾರ ಅಂದರೆ ಜೂನ್ ಹದಿನೆಂಟರಂದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ವತಿಯಿಂದ ಉಚಿತ ಯೋಗ ಕ್ಯಾಂಪ್ ಆಯೋಜಿಸಲಾಗಿದೆ. 'ವಿಶ್ವಶಾಂತಿಗಾಗಿ ಧ್ಯಾನ' ಎಂಬುದು ಈ ಕ್ಯಾಂಪ್ ನ ಥೀಮ್. ಡಾ ಶಶಿಕಾಂತ್ ಅವರು ಆ ದಿನದ ಕಾರ್ಯಕ್ರಮದ ನೇತೃತ್ವ ವಹಿಸುತ್ತಾರೆ.

ದೇಶದಾದ್ಯಂತ ನೂರು ಯೋಗ ಪಾರ್ಕ್ ನಿರ್ಮಿಸಲು ಕೇಂದ್ರ ನಿರ್ಧಾರ

ಈ ಕ್ಯಾಂಪ್ ನ ನಂತರ ಲಘು ಉಪಾಹಾರ ವ್ಯವಸ್ಥೆ ಇರುತ್ತದೆ. ಭಾನುವಾರ ಬೆಳಗ್ಗೆ ಒಂಬತ್ತರಿಂದ ಹತ್ತು ಗಂಟೆವರೆಗೆ ಕ್ಯಾಂಪ್ ನಡೆಯಲಿದ್ದು, ಪ್ರವೇಶ ಉಚಿತವಾಗಿರುತ್ತದೆ. ನೋಂದಣಿ ಮತ್ತಿತರ ಮಾಹಿತಿಗಾಗಿ ಆಸ್ಪತ್ರೆಯ ಸಂಪರ್ಕ ಸಂಖ್ಯೆ 8884416662 ಕರೆ ಮಾಡಿ ವಿಚಾರಿಸಬಹುದು.

Free yoga camp on 18th June in Vikram Hospital

ಅಂದಹಾಗೆ ಈ ಯೋಗ ಕ್ಯಾಂಪ್ ಇರುವುದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ವಿಕ್ರಮ್ ಆಸ್ಪತ್ರೆಯಲ್ಲಿ. ಇನ್ನೇನು ಮೂರೇ ದಿನ ಸಮಯಾವಕಾಶ ಇರುವುದರಿಂದ ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ. ಜತೆಗೆ ಯೋಗಾಭ್ಯಾಸಕ್ಕೆ ಹೊಂದುವಂಥ ದಿರಿಸನ್ನು ತೆಗೆದುಕೊಂಡು ಹೋಗಿ. ಉಳಿದಂತೆ ಮ್ಯಾಟ್ ಮತ್ತಿತರ ವ್ಯವಸ್ಥೆಗಳನ್ನು ವಿಕ್ರಮ್ ಆಸ್ಪತ್ರೆಯಿಂದಲೇ ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru Vikram Hospital celebrating World Yoga Day by organising Free Yoga Camp on 18th June, 2017
Please Wait while comments are loading...