ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ

|
Google Oneindia Kannada News

Recommended Video

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ | Oneindia Kannada

ಬೆಂಗಳೂರು, ಸೆಪ್ಟೆಂಬರ್ 23 : 'ಆರು ತಿಂಗಳಿನಲ್ಲಿ ಬೆಂಗಳೂರಿನ ಎಲ್ಲಾ ಪ್ರದೇಶದಲ್ಲಿ ಉಚಿತ ವೈ-ಫೈ ಸೇವೆ ದೊರೆಯುವ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಭಾನುವಾರ ಗೋವಿಂದರಾಜನಗರದಲ್ಲಿ ನಿರ್ಮಿಸಿರುವ ಪಾಲಿಕೆ ಸೌಧ, ಅಟಲ್‌ ಜೀ ಕ್ರೀಡಾ ಸಂಕೀರ್ಣ, ಜನೌಷಧಿ ಮಳಿಗೆ ಮುಂತಾದವುಗಳನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು.

ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

ಬಳಿಕ ಮಾತನಾಡಿದ ಅವರು, 'ಬೆಂಗಳೂರು ನಗರ ಹೈಟೆಕ್ ಸಿಟಿಯಾಗಿ ಬೆಳೆಯುತ್ತಿದೆ. ದೇಶದ 130 ಕೋಟಿ ಜನಸಂಖ್ಯೆಯಲ್ಲಿ 110 ಕೋಟಿ ಜನರು ಮೊಬೈಲ್ ಬಳಸುತ್ತಿದ್ದಾರೆ. 60 ಕೋಟಿ ಜನರು ಇಂಟರ್‌ ನೆಟ್ ಬಳಕೆ ಮಾಡುತ್ತಿದ್ದಾರೆ' ಎಂದರು.

ಬೆಂಗಳೂರು ನಗರದಲ್ಲಿ 2 ಸಾವಿರ ವೈ-ಫೈ ಸ್ಟಾಟ್ ಸ್ಥಾಪನೆಬೆಂಗಳೂರು ನಗರದಲ್ಲಿ 2 ಸಾವಿರ ವೈ-ಫೈ ಸ್ಟಾಟ್ ಸ್ಥಾಪನೆ

Free wifi in allover Bengaluru in 6 months says G Parameshwara

'ಐಟಿ-ಬಿಟಿಯಲ್ಲಿ ಬೆಂಗಳೂರು ನಗರ ವಿಶ್ವಕ್ಕೆ ಮಾದರಿಯಾಗಿದೆ. ಗೋವಿಂದರಾಜನಗರದಲ್ಲಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಉಚಿತವಾಗಿ ವೈ-ಫೈ ಸೇವೆ ಒದಗಿಸಿದ್ದಾರೆ. ಅವರಿಂದ ಮಾಹಿತಿ ಪಡೆದಿದ್ದೇನೆ. 6 ತಿಂಗಳಿನಲ್ಲಿ ನಗರದ ಎಲ್ಲಾ ಪ್ರದೇಶದಲ್ಲಿ ಉಚಿತ ವೈ-ಫೈ ಸೇವೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ' ಎಂದು ತಿಳಿಸಿದರು.

ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈ-ಫೈ ಸೌಲಭ್ಯಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈ-ಫೈ ಸೌಲಭ್ಯ

'ಕಳೆದ ಬಾರಿ ಬಿಬಿಎಂಪಿಯಲ್ಲಿ 10 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಈ ದೊಡ್ಡ ಮಟ್ಟದ ಬಜೆಟ್‌ಗೆ ಅನುಮೋದನೆ ನೀಡುವುದು ಬೇಡ ಎಂದು ನಿರ್ಧರಿಸಲಾಗಿತ್ತು. ಆದರೆ, ನಗರದ ಅಭಿವೃದ್ಧಿಗಾಗಿ ಅನುಮೋದನೆ ನೀಡಲಾಗಿದೆ' ಎಂದು ಪರಮೇಶ್ವರ ಹೇಳಿದರು.

English summary
Karnataka Deputy Chief Minister and Bengaluru Development minister Dr. G. Parameshwara said that free Wi-Fi facility will be provide in allover Bengaluru with in 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X