ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಇಲಾಖೆ: ಮಹಿಳೆಯರಿಗೆ ಲಘುವಾಹನ ತರಬೇತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಸಾರಿಗೆ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಲಘು ವಾಹನ ತರಬೇತಿಯನ್ನು ಆರಂಭಿಸಿದೆ ಎಂದು ಸಾರಿಗೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರು ಹಾಗೂ ಧಾರವಾಡದ ವಾಹನ ತರಬೇತಿ ಕೇಂದ್ರದಲ್ಲಿ 50 ಮಂದಿಯಂತೆ ಒಟ್ಟು 100 ಮಂದಿಗೆ 30 ದಿನಗಳ ಕಾಲ ಮಹಿಳೆಯರಿಗೆ ಲಘು ವಾಹನ ಚಾಲನಾ ತರಬೇತಿ ನೀಡಲಾಗುವುದು. ತರಬೇತಿ ನಂತರ ಚಾಲನಾ ಪರವಾನಗಿಯನ್ನೂ ಕೂಡ ವಿತರಿಸಲಾಗುವುದು. ಇದರಿಂದ ಪ್ರತಿಯೊಬ್ಬರಿಗೂ 19 ಸಾವಿರ ರೂ ವೆಚ್ಚವಾಗಲಿದೆ.

ಈಗಾಗಲೇ ಸರ್ಕಾರ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಲು 18.90 ಲಕ್ಷ ರೂ ನೀಡಿದೆ. ಲಘು ವಾಹನ ಚಾಲನಾ ತರಬೇತಿಗೆ ಮಹಿಳೆಯರಿಂದ ಸಿಗುವ ಸ್ಪಂದನೆ ಆಧರಿಸಿ ಭಾರಿ ವಾಹನಗಳ ಚಾಲನೆ ತರಬೇತಿ ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Free driving training for 100 women in year

ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ಭಾರೀ ವಾಹನ ಚಾಲನಾ ತರಬೇತಿ ನೀಡಲಾಗುವುದು. ಒಟ್ಟು 200 ಮಂದಿಗೆ ತರಬೇತಿ ನೀಡಲಾಗುತ್ತದೆ. ದೇವರಾಜ ಅರಸು ಟ್ರಕ್ ಟರ್ಮಿನಲ್ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ 15 ಲಕ್ಷದವರೆಗೂ ವಾಹನಖರೀದಿಗೆ ಸಾಲ ನೀಡಲಾಗುತ್ತದೆ. ಇದಕ್ಕಾಗಿ ಎರಡೂವರೆ ಕೋಟಿ ಒದಗಿಸಲಾಗಿದೆ.

ಭಾರೀ ಶಬ್ದ ಮಾಡುವ ವಾಹನಗಳ ಹಾರನ್ ಗಳನ್ನು ತಪಾಸಣೆ ಮಾಡಿ ಮುಟ್ಟುಗೋಲು ಹಾಕಿಕೊಂಡು ಕಾನೂನು ರೀತಿ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.

English summary
Department of transport decided to launch a program to train 100 women in a year with light vehicle driving and provide driving license to them in free cost. Transport commissioner B.Dayanand said that its an initiative to empower the women in the society who could achieve self employment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X