ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾಮ್ ಸಂಗ್ ಸಮೀಕ್ಷೆ : ವ್ಯವಹಾರ ಪರಿಕಲ್ಪನೆ ಬೆಂಗಳೂರಿಗರೇ ಬೆಸ್ಟ್

By Mahesh
|
Google Oneindia Kannada News

ಬೆಂಗಳೂರು, ಭಾರತ- ಸೆಪ್ಟೆಂಬರ್ 5, 2018: ವಹಿವಾಟಿನ ದಿಕ್ಕನ್ನೇ ಬದಲಿಸಬಲ್ಲ ಕನಿಷ್ಟ ಒಂದು ವ್ಯವಹಾರ ಪರಿಕಲ್ಪನೆ ಅಥವಾ ಅನುಶೋಧನೆ ತಮ್ಮ ಬಳಿ ಇದೆ. ಇದು ಭಾರತದ ಕೆಲಸ ಅಥವಾ ವಿರಾಮದ ಜೀವನವನ್ನು ವರ್ಗಾಂತರಿಸಬಲ್ಲದು ಎಂದು ಭಾರತದ ಸಿಲಿಕಾನ್ ವ್ಯಾಲಿ ಎನಿಸಿದ ಬೆಂಗಳೂರಿನ ಬಹುತೇಕ ನಿವಾಸಿಗಳು (81%) ಹೇಳಿದ್ದಾರೆ.

ಬೆಂಗಳೂರಿನ ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?ಬೆಂಗಳೂರಿನ ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?

ಆದರೆ, ಎಲ್ಲ ವಯೋಮಾನದವರ ಪೈಕಿ ಪ್ರತಿ ಮೂವರಲ್ಲಿ ಒಬ್ಬರಿಗೆ ನಗರದಲ್ಲಿ ಸಮಾನ ಮನಸ್ಕ ಜನರ ಜತೆ ಹೇಗೆ ಜಾಲವನ್ನು ನಗರದಲ್ಲಿ ಎಲ್ಲಿ ರೂಪಿಸಬೇಕು ಮತ್ತು ಈ ಕಲ್ಪನೆಗಳನ್ನು ಪೋಷಿಸಲು ಮಾರ್ಗದರ್ಶಕರು ಎಲ್ಲಿದ್ದಾರೆ ಎಂಬ ಬಗ್ಗೆ ಕಲ್ಪನೆ ಇಲ್ಲ.

ಬೆಂಗಳೂರಿನಾದ್ಯಂತ 1628 ನಿವಾಸಿಗಳ ಸಮೀಕ್ಷೆ ನಡೆಸಿದಾಗ, 90% ಮಂದಿ ಬೆಂಗಳೂರಿನ ಸ್ಟಾರ್ಟ್‍ಅಪ್ ಸಂಸ್ಕೃತಿ, ಸೃಜನಶೀಲತೆ ಹಾಗೂ ಅನುಶೋಧನಾ ಪ್ರವೃತ್ತಿ, ಭಾರತದ ಅಗ್ರಗಣ್ಯ ಮೆಟ್ರೊ ನಗರಗಳಿಗಿಂತ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ಕಿಟ್ ನೀಡಿದ ಸ್ಯಾಮ್ ಸಂಗ್!ಸರ್ಕಾರಿ ಶಾಲಾ ಮಕ್ಕಳಿಗೆ ಕಿಟ್ ನೀಡಿದ ಸ್ಯಾಮ್ ಸಂಗ್!

ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ಸ್ ಈ ಸಮೀಕ್ಷೆಯನ್ನು ನಡೆಸಿದ್ದು, ಯುವ ಉದಯೋನ್ಮುಖ ಉದ್ಯಮಶೀಲರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಅವರ ಅಗತ್ಯತೆಗಳನ್ನು ಅರಿತುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದೆ.

ಬೆಂಗಳೂರು ತನ್ನ ಸ್ಟಾರ್ಟ್‍ಅಪ್ ಸಂಸ್ಕೃತಿ, ಸಂಶೋಧನೆ & ಅಭಿವೃದ್ಧಿ ಮತ್ತು ಅನುಶೋಧನಾ ಶಕ್ತಿಯಿಂದ ಹಾಗೂ ತಾಂತ್ರಿಕ ವ್ಯವಹಾರದಿಂದ ವ್ಯಾಖ್ಯಾನಿಸಲ್ಪಟ್ಟಿದೆ ಎಂದು 66% ಸಹಸ್ರಮಾನದ ಪೀಳಿಗೆಯಲ್ಲದವರು ಮತ್ತು 44% ಸಹಸ್ರಮಾನದ ಪೀಳಿಗೆಯವರು ಅಭಿಪ್ರಾಯಪಟ್ಟಿದ್ದಾರೆ.

ಪರಂಪರಾಗತ ಕಟ್ಟಡಗಳನ್ನು ನೋಡಿದ್ದು ಅಪರೂಪ

ಪರಂಪರಾಗತ ಕಟ್ಟಡಗಳನ್ನು ನೋಡಿದ್ದು ಅಪರೂಪ

ಸಮೀಕ್ಷೆಗೆ ಗುರಿಪಡಿಸಿದ ಅರ್ಧದಷ್ಟು ಮಂದಿ ಸಹಸ್ರಮಾನದ ಪೀಳಿಗೆಯವರು ನಗರದ ಕಲೆ ಮತ್ತು ಸಾಂಸ್ಕೃತಿಕ ಚಿತ್ರಣದ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ನಗರದ ವೈವಿಧ್ಯತೆಯ ಸೂಚಕ ಹಾಗೂ ಬದಲಾಗುತ್ತಿರುವ ಮನೋಪ್ರವೃತ್ತಿಯ ಸಹಸ್ರಮಾನದ ಗ್ರಾಹಕರು, ಆಸಕ್ತಿದಾಯಕ ಅನುಭವಕ್ಕಾಗಿ ಎದುರು ನೋಡುತ್ತಿದ್ದಾರೆ.

ಸಾಮ್ರಾಜ್ಯಶಾಹಿ ಮತ್ತು ಕಲಾತ್ಮಕ ಕಟ್ಟಡಗಳನ್ನೊಳಗೊಂಡಂತೆ ನಗರದ ಪಾರಂಪರಿಕ ಕಟ್ಟಡಗಳು ಮತ್ತು ವಾಸ್ತುಶಿಲ್ಪ, ನಗರದ ಗುಣಲಕ್ಷಣವನ್ನು ವ್ಯಾಖ್ಯಾನಿಸುತ್ತದೆ ಎಂದು ಮೂವರಲ್ಲಿ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಾಗಿಯೂ, 78% ಸಹಸ್ರಮಾನದ ಪೀಳಿಗೆಯ ಮಂದಿ, ತಾವು ನಗರದೊಳಗೆ ಪ್ರಯಾಣಿಸುವಾಗ ಕೂಡಾ ಎಂದೂ ಪರಂಪರಾಗತ ಕಟ್ಟಡಗಳನ್ನು ನೋಡಿದ್ದು ಅಪರೂಪ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು

ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು

ಸಹಸ್ರಮಾನದ ಪೀಳಿಗೆಯ ಶೇಕಡ 77ರಷ್ಟು ಮಂದಿ ಮತ್ತು ಹಿಂದಿನ ಸಹಸ್ರಮಾನದ ಪೀಳಿಗೆಯ ಶೇಕಡ 63ರಷ್ಟು ಮಂದಿ, ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವುಗಳನ್ನು ಕಲೆ, ಸಂಸ್ಕೃತಿ ಮತ್ತು ಇತರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮತ್ತು ಸ್ಟಾರ್ಟ್‍ಅಪ್ ಚಟುವಟಿಕೆಗಳಿಗೆ ಸಾರ್ವಜನಿಕರಿಗೆ ಮುಕ್ತವಾದ ಪ್ರದೇಶಗಳಾಗಿ ಪರಿವರ್ತಿಸಬೇಕು ಎನ್ನುವುದನ್ನು ಎದುರು ನೋಡುತ್ತಿದ್ದಾರೆ. ಸಮೀಕ್ಷೆಗೆ ಒಳಪಡಿಸಿದವರ ಪೈಕಿ 86% ಮಂದಿ, ನಗರದಲ್ಲಿ ಇಂಥ ಸ್ಥಳಾವಕಾಶದ ಕೊರತೆ ಇದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ನಾಗರಿಕರ ಜೀವನವನ್ನು ಹೆಚ್ಚು ಸೃಜನಾತ್ಮಕವಾಗಿಸಲು ಮತ್ತು ಸಾಂಸ್ಕೃತಿಕ ಅಂಶಗಳನ್ನು ವಿಸ್ತೃತಗೊಳಿಸಲು ಏನು ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ಮೂವರಲ್ಲಿ ಒಬ್ಬ ಸಹಸ್ರಮಾನದ ಪೀಳಿಗೆಯವರು ಮತ್ತು 40% ಹಳೆಯ ಸಹಸ್ರಮಾನದ ಪೀಳಿಗೆಯವರು ಸೃಜನಶೀಲ ಮತ್ತು ವ್ಯವಹಾರ ಕಲ್ಪನೆಗಳ ಜಾಲ ರೂಪಿಸಲು ಹೆಚ್ಚು ಸ್ಥಳಾವಕಾಶಗಳು ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊರಾಂಗಣ ಸ್ಥಳಾವಕಾಶಗಳು ಮನೋರಂಜನೆಗೆ ಬೇಕು

ಹೊರಾಂಗಣ ಸ್ಥಳಾವಕಾಶಗಳು ಮನೋರಂಜನೆಗೆ ಬೇಕು

77% ಸಹಸ್ರಮಾನದ ಪೀಳಿಗೆಯವರು ಹಾಗೂ 69% ಹಳೆ ಸಹಸ್ರಮಾನದವರು, ನಗರದಾದ್ಯಂತ ಇರುವ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 70% ಸಹಸ್ರಮಾನದ ಪೀಳಿಗೆಯವರು ಹಾಗೂ 63% ಹಳೆ ಸಹಸ್ರಮಾನದವರು, ಹೆಚ್ಚು ಉದ್ಯಾನವನಗಳು ಮತ್ತು ಹೊರಾಂಗಣ ಸ್ಥಳಾವಕಾಶಗಳು ಮನೋರಂಜನೆಗೆ ಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇದು ನಗರದಜನತೆ ಸಾರ್ವಜನಿಕ ಸ್ಥಳಗಳ ಬಗ್ಗೆ, ಸಾಂಸ್ಕೃತಿಕ ಮತ್ತು ಪಾರಂಪರಿಕ ಅಂಶಗಳ ಬಗ್ಗೆ ಜನ ಕಾಳಜಿ ಹೊಂದಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಭಾರತದ ತಂತ್ರಜ್ಞಾನ ಕೇಂದ್ರವಾಗಿ ಕ್ಷಿಪ್ರವಾಗಿ ಪ್ರಗತಿ ಹೊಂದುತ್ತಿರುವ ಬೆಂಗಳೂರು ಹಲವು ವರ್ಷಗಳಿಂದ ಈ ಅಂಶಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ.

ಈ ಪ್ರಾಥಮಿಕ ಸಮೀಕ್ಷಾ ಅಂಕಿ ಅಂಶಗಳು

ಈ ಪ್ರಾಥಮಿಕ ಸಮೀಕ್ಷಾ ಅಂಕಿ ಅಂಶಗಳು

ಈ ಪ್ರಾಥಮಿಕ ಸಮೀಕ್ಷಾ ಅಂಕಿ ಅಂಶಗಳು 1628 ಮಂದಿಯ ಮುಖಾಮುಖಿ ಸಂದರ್ಶನವನ್ನು ಆಧರಿಸಿವೆ. 18 ರಿಂದ 50 ವರ್ಷ ವಯೋಮಿತಿಯ ಬೆಂಗಳೂರಿಗರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಅಂಕಿ ಅಂಶಗಳನ್ನು ಆಗಸ್ಟ್ 21 ಮತ್ತು ಆಗಸ್ಟ್ 29, 2018ರ ನಡುವೆ ಸಂಗ್ರಹಿಸಲಾಗಿದೆ.

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್: ಸ್ಯಾಮ್‍ಸಂಗ್ ವರ್ಗಾಂತರ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನದ ಮೂಲಕ ವಿಶ್ವಕ್ಕೆ ಸ್ಫೂರ್ತಿ ಒದಗಿಸಿದ್ದು, ಭವಿಷ್ಯವನ್ನು ರೂಪಿಸುತ್ತಿದೆ. ಟಿವಿ, ಸ್ಮಾರ್ಟ್‍ಫೋನ್, ಧರಿಸುವ ಸಾಧನಗಳು, ಟ್ಯಾಬ್ಲೆಟ್, ಡಿಜಿಟಲ್ ಅಪ್ಲಿಕೇಶನ್, ನೆಟ್‍ವರ್ಕ್ ಸ್ಟಿಸ್ಟಂ ಮತ್ತು ಮೆಮೊರಿ, ಸಿಸ್ಟಮ್ ಎಲ್‍ಎಸ್‍ಐ, ಫೌಂಡ್ರಿ ಮತ್ತು ಎಲ್‍ಇಡಿ ಸೊಲ್ಯೂಶನ್‍ಗಳನ್ನು ಸ್ಯಾಮ್‍ಸಂಗ್ ಮರು ವ್ಯಾಖ್ಯಾನಿಸಿದೆ.

English summary
A majority of residents (81%) of the Silicon Valley of India, Bengaluru, said they have had at least one ‘game changer’ idea or invention, which could transform India’s work or leisure life, but one out of three does not know of a place in the city where they can network with like-minded people and mentors, and nurture their ideas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X