ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಾಲ್ವರು ಸುಪಾರಿ ಹಂತಕರ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 07 : ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿನ ಟೈಮ್ಸ್ ಬಾರ್‌ನ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದ ನಾಲ್ವರು ಸುಪಾರಿ ಹಂತಕರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರು ನಾಲ್ವರ ಬಂಧನದ ಬಗ್ಗೆ ಮಾಹಿತಿ ನೀಡಿದರು. ಬಂಧಿತರು ಬೆಳ್ತಂಗಡಿಯ ಅನ್ವರ್‌ ಹಸನ್ (32), ಮೂಡಬಿದಿರೆಯ ಇಮ್ರಾನ್ (33), ಸುರೇಶ್ (28) ಹಾಗೂ ಆಂಧ್ರಪ್ರದೇಶದ ಸುಹೈಲ್‌ ಖಾನ್ (26).[ಬಾರ್ ಮಾಲೀಕನ ಮೇಲೆ ಗುಂಡಿನ ದಾಳಿ]

ns megharikh

ಆ.17ರಂದು ಟೈಮ್ಸ್ ಬಾರ್‌ನ ಮಾಲೀಕ ಚೇತನ್ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲು ಪ್ರಯತ್ನ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ರಾಕೇಶ್ ಅಲಿಯಾಸ್ ಅಲ್ತಾಫ್ ಮತ್ತು ಅಸ್ಗರ್ ಅಲಿ ಅಲಿಯಾಸ್ ಮುನ್ನಾ ಎಂಬುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ['ಬೆಂಗಳೂರು ನನಗೆ ಹೊಸದಲ್ಲ' : ನೂತನ ಆಯುಕ್ತ ಮೇಘರಿಕ್]

ಹತ್ಯೆಯ ಪ್ರಯತ್ನ ಏಕೆ? : ತಲೆಮರೆಸಿಕೊಂಡಿರುವ ರಾಕೇಶ್ ಮತ್ತು ಬಾರ್ ಮಾಲೀಕ ಚೇತನ್ ಹಿಂದೆ ವ್ಯಾಪಾರದಲ್ಲಿ ಪಾಲುದಾರರಾಗಿದ್ದರು. ನಂತರ ಮೈಮನಸ್ಸು ಉಂಟಾಗಿ ಬೇರೆ-ಬೇರೆಯಾಗಿದ್ದರು. ದುಬೈಗೆ ತೆರಳಿದ್ದ ರಾಕೇಶ್ 15 ಲಕ್ಷ ಹಣ ನೀಡುವಂತೆ ಚೇತನ್‌ಗೆ ಬೇಡಿಕೆ ಇಟ್ಟಿದ್ದ.

ಹಣ ನೀಡಲು ನಿರಾಕರಿಸಿದ್ದರಿಂದ ಅಸ್ಗರ್ ಅಲಿ ಜೊತೆ ಸೇರಿ ಚೇತನ್ ಹತ್ಯೆಗೆ ಸಂಚು ರೂಪಿಸಿದ್ದ. ಬಂಧಿತ ಇಮ್ರಾನ್‌ಗೆ 15 ಲಕ್ಷ ರೂ.ಗೆ ಸುಪಾರಿ ನೀಡಿ ಚೇತನ್ ಕೊಲೆ ಮಾಡಲು ತಿಳಿಸಲಾಗಿತ್ತು. 1 ಲಕ್ಷ ರೂ.ಗಳ ಮುಂಗಡ ಹಣವನ್ನು ನೀಡಲಾಗಿತ್ತು.

ಇಮ್ರಾನ್ ತನ್ನ ಸಹಚರರ ಜೊತೆ ಬೆಂಗಳೂರಿಗೆ ಬಂದು ಬಾರ್ ಮಾಲೀಕ ಚೇತನ್ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಆ.17ರಂದು ಬಾರ್‌ನಲ್ಲಿ ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ಚೇತನ್ ಬೆನ್ನಿಗೆ ಗುಂಡು ತಗುಲಿದ್ದು, ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಚಿತ್ರ ಮಾಹಿತಿ : ಬೆಂಗಳೂರು ಪೊಲೀಸ್]

Tweet by Deputy Commissioner of Police - Central DivisionBengaluru CityShri. Sandeep Patil, IPS@DCPCentralBCP@...

Posted by BENGALURU CITY POLICE onMonday, September 7, 2015

English summary
Bengaluru Ashok Nagar police arrested Four contract killers and claimed that they have involved in August 17th Times pub shootout case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X