ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ವಿರುದ್ಧ ದೇಶದ್ರೋಹದ ದೂರು ದಾಖಲಾಗಿರುವ ಸುದ್ದಿ ತಿಳಿದಿರಬಹುದು. ಈ ಬಗ್ಗೆ ರಮ್ಯಾ ಅವರು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಬಳಿಕ ಸುದ್ದಿಸಂಸ್ಥೆಗಳ ಜತೆ ಮಾತನಾಡಿದ್ದಾರೆ. ಈ ನಡುವೆ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ತಮ್ಮ ಅಂಕಣದಲ್ಲೂ ವಿವರಣೆ ನೀಡಿದ್ದಾರೆ. ಇದರ ಸಾರಾಂಶ ಇಲ್ಲಿದೆ

ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ, ಕ್ಷಮೆಯಾಚಿಸಲ್ಲ ಎಂದಿರುವ ರಮ್ಯಾ ಅಲಿಯಾಸ್ ದಿವ್ಯಸ್ಪಂದನ, ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ, ದೇಶದ್ರೋಹದ ಕೇಸ್ ಹಾಕಿದರೂ ನಾನು ಧೃತಿಗೆಡಲ್ಲ, ನಾನು ನನ್ನ ಹೇಳಿಕೆ ಬದ್ಧಳಾಗಿದ್ದೇನೆ, ಪಾಕಿಸ್ತಾನ ನರಕವಲ್ಲ, ನಾನು ಕ್ಷಮೆಯಾಚಿಸಬೇಕಾದ ಪ್ರಯೇಯವಿಲ್ಲ, ಶಾಂತಿ ಬಯಸುವವರನ್ನು ಟಾರ್ಗೆಟ್ ಮಾಡಲಾಗುತ್ತದೆ, ಕೊಲೆಗಾರರನ್ನು ರಕ್ಷಿಸಲಾಗುತ್ತದೆ ಎಂದು ರಮ್ಯಾ ಬರೆದಿದ್ದಾರೆ.[ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ]

ಈ ನಡುವೆ ಯುವ ಸಂಸದರ ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಿ ಬಂದ ರಮ್ಯಾ ಬಗ್ಗೆ ಪ್ರಶಂಸಿಸದೆ, ಪಾಕಿಸ್ತಾನದ ಜನತೆಯನ್ನು ಮತ್ತು ಆತಿಥ್ಯವನ್ನು ಹೊಗಳಿದ್ದಕ್ಕೆ ಕಿಡಿಕಾರುವವರ ವಿರುದ್ಧ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ಮಾಜಿ ಸಚಿವ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.

ಈಗಾಗಲೇ ಟ್ವಿಟ್ಟರ್ ನಲ್ಲಿ ರಮ್ಯಾ ಪರ #istandwithramya ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಲು ರಮ್ಯಾ ಅಭಿಮಾನಿಗಳು ಸಜ್ಜಾಗಿದ್ದಾರೆ. ಜನಪ್ರಿಯ ಪತ್ರಕರ್ತೆ ಬರ್ಖಾ ದತ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ. ರಮ್ಯಾ ಬರೆದಿರುವ ಲೇಖನದ ಸಾರಾಂಶ ಮುಂದೆ ಓದಿ...[ರಮ್ಯಾ ಹೇಳಿಕೆ: ಒನ್ಇಂಡಿಯಾ ಓದುಗರ ನಿಲುವು ಏನು?]

ರಮ್ಯಾ ಹೆಳಿಕೆ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸದ್ದು

ರಮ್ಯಾ ಹೆಳಿಕೆ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸದ್ದು

ಲೇಖನದ ಆರಂಭದಲ್ಲೇ 'ಫ್ರೆಂಡ್ ಒಬ್ಬರು ನನ್ನ ಬಗ್ಗೆ ಬರುತ್ತಿರುವ ಸುದ್ದಿಯನ್ನು ನೋಡಿ ಸಹಿಸಲು ಆಗದೆ ಮೆಸೇಜ್ ಮಾಡಿದರು. ಅದರಲ್ಲೂ ಭಾವಚಿತ್ರಕ್ಕೆ ಚಪ್ಪಲಿಯೇಟು ನೀಡುತ್ತಿದ್ದಾರೆ. ಪ್ರತಿಭಟನೆ, ಪ್ರತಿಕೃತಿ ದಹನ, ರಸ್ತೆ ತಡೆ ಮಾಡಲು ಸದಾ ತಂಡಗಳು ಸಿದ್ಧವಾಗಿರುತ್ತದೆಯೇ? ಎಂದು ಪ್ರಶ್ನಿಸಿದರು,

ರಾಷ್ಟ್ರೀಯವಾದಿಗಳಿಗೆ ನನ್ನ ಹೇಳಿಕೆ ಅರ್ಥವಾಗಿರಲಿಕ್ಕಿಲ್ಲ

ರಾಷ್ಟ್ರೀಯವಾದಿಗಳಿಗೆ ನನ್ನ ಹೇಳಿಕೆ ಅರ್ಥವಾಗಿರಲಿಕ್ಕಿಲ್ಲ

ಕೇಸರಿ ಬಣ್ಣದ ಉಡುಪು ಧರಿಸುವ ರಾಷ್ಟ್ರೀಯವಾದಿಗಳಿಗೆ ನನ್ನ ಹೇಳಿಕೆ ಅರ್ಥವಾಗಿರಲಿಕ್ಕಿಲ್ಲ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ, ನಾನು ಇಸ್ಲಾಮಾಬಾದಿನಲ್ಲಿ ಸುರಕ್ಷಿತವಾಗಿದ್ದೆ. ಸೌಹಾರ್ದ ವಾತಾವರಣ ಕಂಡಿದ್ದೆ. ನರಕದಂಥ ದೃಶ್ಯ ಕಾಣಲಿಲ್ಲ, ಅಲ್ಲಿನ ಜನ ಕೂಡಾ ನಮ್ಮಂತೆ ಎಂದು ಹೇಳಿದ್ದೇನೆ.

ಆಲ್ಲಿನ ಮುಗ್ಧ ಸಮಾಜಕ್ಕೂ ಸಂಬಂಧಿಸಿಲ್ಲ

ಆಲ್ಲಿನ ಮುಗ್ಧ ಸಮಾಜಕ್ಕೂ ಸಂಬಂಧಿಸಿಲ್ಲ

ನನ್ನ ಹೇಳಿಕೆ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಸಂಘರ್ಷಕ್ಕೂ ಆಲ್ಲಿನ ಮುಗ್ಧ ಸಮಾಜಕ್ಕೂ ಸಂಬಂಧಿಸಿಲ್ಲ. ನೆರೆ ರಾಷ್ಟ್ರಗಳ ಜೊತೆ ಸೌಹಾರ್ದಯುತ ವಾತಾವರಣ, ಗೆಳೆತನ ಹೊಂದಬೇಕು ಎಂಬ ಉದ್ದೇಶದಿಂದ ನಾನು ಸಾರ್ಕ್ ಯುವ ಸಂಸದರ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಪಾಕಿಸ್ತಾನಿ ಪ್ರತಿನಿಧಿಗಳ ಜತೆ ಗೆಳೆತನ ಸಂಪಾದಿಸಿದೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಅಷ್ಟೇ

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಅಷ್ಟೇ

ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ' ಎಂಬ ಹೇಳಿಕೆಯನ್ನು ಮಾಜಿ ಸಂಸದೆ ರಮ್ಯಾ ಆಕ್ಷೇಪಿಸಿದ್ದು, ಪಾಕಿಸ್ತಾನವನ್ನು ಹೊಗಳಿದ್ದಾರೆ. ನಾನು ಮೋದಿ ಅವರನ್ನು ದ್ವೇಷಿಸುವುದಿಲ್ಲ. ಅವರ ಕೆಲವು ನಿಲುವುಗಳಿಗೆ ನನ್ನ ಸಹಮತವಿಲ್ಲ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಅಷ್ಟೇ, ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ ಎಂದು ರಮ್ಯಾ ಅವರು ಹೇಳಿದ್ದಾರೆ. ಅಂಕಣ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ

English summary
Ramya writes on ‘sedition’ charge: With a complaint of sedition filed against me, I stand by my remarks that Pakistan is not hell and I see no reason to withdraw or apologise for it. It’s ironical that in a country where people get away with crimes such as a murder, those that seek peace are targeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X