ಮಾಜಿ ಸಂಸದೆ ರಮ್ಯಾಗೆ ಜ್ವರ, ಮಲ್ಯ ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04: ಮಾಜಿ ಸಂಸದೆ, ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರಿಗೆ ತೀವ್ರ ಜ್ವರ ಕಾಡುತ್ತಿದೆ. ಅನಾರೋಗ್ಯದಿಂದ ಬಳಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಮ್ಯಾ ಅವರಿಗೆ ವೈರಲ್ ಫೀವರ್ ಇದೆ, ಶನಿವಾರ ರಾತ್ರಿ ವಿಠಲ್ ಮಲ್ಯ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ರಮ್ಯಾ ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

MP Ramya admitted to Mallya Hospital, Bengaluru due to viral Fever

ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಮಂಡ್ಯದಲ್ಲೇ ನೆಲೆಸಿದ್ದ ರಮ್ಯಾ ಅವರಿಗೆ ಸೈಕ್ಲೋನ್ ಪ್ರಭಾವದಿಂದ ನೆಗಡಿಯಾಗಿದೆ ನಂತರ ಜ್ವರ ಬಂದಿದೆ. ಈ ನಡುವೆ ದೆಹಲಿಗೂ ಹೋಗಿ ಬಂದಿದ್ದ ಅವರು ಪ್ರಯಾಣದಿಂದ ಬಳಲಿದ್ದರಿಂದ ಜ್ವರ ಉಲ್ಬಣಿಸಿತ್ತು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former MP Ramya admitted to Mallya Hospital in Bengaluru due to viral Fever. She is under treatment
Please Wait while comments are loading...