ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದ ರಮ್ಯಾ

By Mahesh
|
Google Oneindia Kannada News

ಬೆಂಗಳೂರು, ನ.28: ಮುಂಬರುವ ಎಂಎಲ್ಸಿ ಚುನಾವಣೆಗಾಗಿ ಮಂಡ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಜೋರಾಗಿ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಸಭೆ ನಂತರ ಮಾತನಾಡಿದ ಮಾಜಿ ಸಂಸದೆ ರಮ್ಯಾ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಮರಳುವ ಆಸೆ ನನಗೂ ಇಲ್ಲ. ಆದರೆ, ಹಿರಿಯ ನಾಯಕರು ಬಯಸಿದಲ್ಲಿ ಎಂಎಲ್ಸಿ ಚುನಾವಣೆಗೆ ನನ್ನ ಹೆಸರು ಸೇರಲಿದೆ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ರಮ್ಯಾ ಅವರು ನಾನು ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಎಲ್ಲಾ ಪಕ್ಷಗಳಲ್ಲಿ ಇರುವಂತೆ ನಮ್ಮ ಪಕ್ಷದಲ್ಲೂ ಭಿನ್ನಾಭಿಪ್ರಯಗಳಿವೆ.ಆದರೆ, ಎಲ್ಲರ ಅಭಿಪ್ರಾಯದಂತೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಒಮ್ಮತದ ಅಭ್ಯರ್ಥಿಗೆ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.[ಎಂಎಲ್ಸಿ ಚುನಾವಣೆ ಲಾಬಿ, ರಮ್ಯಾ ಹೆಸರು ಐತೇನ್ರಿ!]

ಅಂಬರೀಷ್ ನಾಯಕತ್ವ : ರಮ್ಯಾ, ನರೇಂದ್ರಸ್ವಾಮಿ,ಆತ್ಮಾನಂದ, ಮಧು ಮಾದೇಗೌಡ, ಮಾಜಿ ಸ್ಪೀಕರ್ ಕೃಷ್ಣ ಸೇರಿದಂತೆ ಎಲ್ಲರೂ ಅಂಬರೀಶ್ ನಾಯಕತ್ವದಲ್ಲಿ ನಂಬಿಕೆ ಇರಿಸಿಕೊಂಡಿದ್ದಾರೆ. ಮಾಜಿ ಶಾಸಕರು ಸೇರಿದಂತೆ 8 ಜನರ ಅರ್ಜಿ ಬಂದಿದೆ. ರಮ್ಯಾ ಅವರು ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿಲ್ಲ ಎಂದಿದ್ದಾರೆ.

2018ರ ಚುನಾವನೆ ನಮ್ಮ ಗುರಿ

2018ರ ಚುನಾವನೆ ನಮ್ಮ ಗುರಿ

2018ರ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತವನ್ನು ಉಳಿಸಿಕೊಳ್ಳುವುದು ರಮ್ಯಾ ಅವರ ಗುರಿ. ಪರಿಷತ್ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇನ್ನೂ ಎರಡು ಮೂರು ದಿನದೊಳಗೆ ಅಂತಿಮ ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಾಗುತ್ತದೆ.ಎಂದರು.

 ಸುಮಾರು 25 ಸದಸ್ಯರ ಅವಧಿ ಮುಗಿಯಲಿದೆ

ಸುಮಾರು 25 ಸದಸ್ಯರ ಅವಧಿ ಮುಗಿಯಲಿದೆ

ಜನವರಿ 2016 ರ ಅಂತ್ಯಕ್ಕೆ ಸುಮಾರು 25 ಸದಸ್ಯರ ಅವಧಿ ಮುಗಿಯಲಿದೆ. ಈ ಪೈಕಿ 13 ಜನ ಕಾಂಗ್ರೆಸ್ಸಿಗರು, 7 ಜನ ಬಿಜೆಪಿ ಹಾಗೂ 5 ಜನ ಜೆಡಿಎಸ್ ನಿಂದ ಇದ್ದಾರೆ. ಕಾಂಗ್ರೆಸ್ ಬಹುತೇಕ ಹಳೆ ಸದಸ್ಯರನ್ನೇ ಮರು ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ.

ನಾಲ್ವರು ಹೊಸಬರು ಮೇಲ್ಮನೆ ಸೇರ್ಪಡೆ

ನಾಲ್ವರು ಹೊಸಬರು ಮೇಲ್ಮನೆ ಸೇರ್ಪಡೆ

ಹೈಕಮಾಂಡ್ ಆಜ್ಞೆಯಂತೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಸೇರಿದಂತೆ ನಾಲ್ವರು ಹೊಸಬರು ಮೇಲ್ಮನೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂಬ ಗುಸುಗುಸು ಸುದ್ದಿ ಓಡಾಡಿಕೊಂಡಿತ್ತು. ಆದರೆ, ರಮ್ಯಾ ಅವರ ಆಯ್ಕೆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಉಳಿದ ಹೊಸಬರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ

ಸದಸ್ಯತ್ವ ಅವಧಿ ಮುಗಿಯಲಿದೆ

ಸದಸ್ಯತ್ವ ಅವಧಿ ಮುಗಿಯಲಿದೆ

ಎಸ್ ಆರ್ ಪಾಟೆಲ್, ನಾಗರಾಜ್ ಛಬ್ಬಿ, ಶ್ರೀಕಾಂತ್ ಘೋಟ್ನೆಕರ್(ಉತ್ತರ ಕನ್ನಡ), ವೀರಕುಮಾರ್ ಅಪ್ಪಾಸೊ ಪಾಟೀಲ್, ಶ್ರೀನಿವಾಸ್ ಮಾನೆ, ದಯಾನಂದ, ಎವಿ ಗಾಯತ್ರಿ ಶಾಂತೇಗೌಡ (ಚಿಕ್ಕಮಗಳೂರು), ಪ್ರತಾಪ್ ಚಂದ್ರ ಶೆಟ್ಟಿ, ಟಿ ಜಾನ್(ಕೊಡಗು), ನಾಸಿರ್ ಅಹ್ಮದ್, ಅಲ್ಲಮ ಪ್ರಭು ಪಾಟೀಲ್, ಆರ್ ಧರ್ಮಸೇನ ಅವರ ಸದಸ್ಯತ್ವ ಅವಧಿ ಮುಗಿಯಲಿದೆ

ರಘು ಆಚಾರ್ ಅವರು ಚಿತ್ರದುರ್ಗದಿಂದ ಸ್ಪರ್ಧೆಗೆ

ರಘು ಆಚಾರ್ ಅವರು ಚಿತ್ರದುರ್ಗದಿಂದ ಸ್ಪರ್ಧೆಗೆ

ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಮೇಲ್ಮನೆ ಸದಸ್ಯ ರಘು ಆಚಾರ್ ಅವರು ಚಿತ್ರದುರ್ಗದಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಸಾಧ್ಯತೆಯಿದೆ.

ಮರು ಆಯ್ಕೆ ಸಾಧ್ಯವಿಲ್ಲ

ಮರು ಆಯ್ಕೆ ಸಾಧ್ಯವಿಲ್ಲ

ಶ್ರೀಕಾಂತ್ ಘೋಟ್ನೆಕರ್(ಉತ್ತರ ಕನ್ನಡ), ಎವಿ ಗಾಯತ್ರಿ ಶಾಂತೇಗೌಡ(ಚಿಕ್ಕಮಗಳೂರು),ಟಿ ಜಾನ್(ಕೊಡಗು) ಮರು ಆಯ್ಕೆ ಸಾಧ್ಯವಿಲ್ಲ ಎಂಬ ಮಾಹಿತಿ ಸಿಕ್ಕಿದೆ.

English summary
With the Central Election Commission (CEC) announcing the poll schedule to fill up 25 vacant seats in the Legislative Council, hectic lobbying is on in the Congress camp for tickets. Former MP from Mandya Ramya's said she won't be contesting the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X