ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ರಾಜಕಾರಣಕ್ಕೆ ಬರಲ್ಲ ಅಂದ ರಮ್ಯಾ ಕಣ್ಣೀರಿಗೆ ಕಾರಣವೇನು?

By Mahesh
|
Google Oneindia Kannada News

ಬೆಂಗಳೂರು, ಅ.19: ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಅವರು ಸೋಮವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್ಎಂ ಕೃಷ್ಣ ಅವರ ನಿವಾಸಕ್ಕೆ ತೆರಳಿ, ಭೇಟಿ ಮಾಡಿ ಮಾತುಕತೆ ನಡೆಸಿ ಹೊರಬಂದಿದ್ದಾರೆ.

ಎಸ್ಸೆಂ ಕೃಷ್ಣ ಅವರ ಜೊತೆ ಮಾತುಕತೆ, ಚರ್ಚಿಸಿದ ವಿಷಯಗಳ ಸುಳಿವು ನೀಡಿದ ರಮ್ಯಾ ಅವರು, 'ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ' ಎಂದು ಘೋಷಿಸಿದ್ದಾರೆ. ಅದರೆ, ಕೃಷ್ಣ ಅವರ ನಿವಾಸದಿಂದ ಹೊರ ಬರುವಾಗ ರಮ್ಯಾ ಅವರ ಕಣ್ಣಂಚಲ್ಲಿ ನೀರು ಕಾಣಿಸಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಂತರ ಮಾಧ್ಯಮಗಳ ಜೊತೆ ಮಾತನಾಡುವಾಗ ರಮ್ಯಾ ಲವಲವಿಕೆಯಿಂದ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರ ಸದಾಶಿವ ನಗರ ಮನೆಗೆ ರಮ್ಯಾ ಭೇಟಿ ಮಾಡಿ ಅವರು ಮಾತುಕತೆ ನಡೆಸಿರುವುದರ ಬಗ್ಗೆ ಕಾಂಗ್ರೆಸ್ಸಿಗರು ಕುತೂಹಲಿಗಳಾಗಿದ್ದಾರೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಎಸ್ಸೆಂ ಕೃಷ್ಣ ಹಾಗೂ ರಮ್ಯಾ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. [ಆಗಸ್ಟ್ ತಿಂಗಳಲ್ಲಿ ಕೃಷ್ಣ ಭೇಟಿ ನಂತರ ರಮ್ಯಾ ಹೇಳಿಕೆ]

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಡ್ಯದ ವಿಸಿ ಫಾರ್ಮ್ ಗೆ ಬಂದು ಹೋದ ಮೇಲೆ ನಡೆದ ಚೆಕ್ ಪರಿಹಾರ, ಸಂಪುಟ ವಿಸ್ತರಣೆ, ರಮ್ಯಾ ಹಾಗೂ ಮಂಡ್ಯ ಕಾಂಗ್ರೆಸ್ ಜಟಾಜಟಿ ಎಲ್ಲದರ ಬಗ್ಗೆ ಎಸ್ಸೆಂ ಕೃಷ್ಣರಿಂದ ಸೋನಿಯಾ ಅವರು ಮಾಹಿತಿ ಪಡೆದುಕೊಂಡಿದ್ದಾರೆ.[ಕೆಪಿಸಿಸಿ ಚೆಕ್ ವಿವಾದ : ಮಾಜಿ ಸಂಸದೆ ರಮ್ಯಾ ಸ್ಪಷ್ಟನೆ]

ರಮ್ಯಾ ಅವರಿಗೆ ಮತ್ತೊಮ್ಮೆ 'ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು' ಎಸ್‌.ಎಂ.ಕೃಷ್ಣ ಕಿವಿಮಾತು ಹೇಳಿದ್ದಾರಂತೆ. ಮಂಡ್ಯದಲ್ಲಿನ ಗೊಂದಲಕ್ಕೆ ನಾನೇನು ಕಾರಣವಲ್ಲ ಎಂದು ರಮ್ಯಾ ಸಮಾಜಾಯಿಷಿ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಫೇಸ್ ಬುಕ್ ಪೋಸ್ಟ್ ಬಗ್ಗೆ ಸ್ಪಷ್ಟನೆ

ಫೇಸ್ ಬುಕ್ ಪೋಸ್ಟ್ ಬಗ್ಗೆ ಸ್ಪಷ್ಟನೆ

ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ರಮ್ಯಾ, ಡಿವಿ ಗುಂಡಪ್ಪ ಅವರ ಕಗ್ಗಗಳ ಬಗ್ಗೆ ಇಂಗ್ಲೀಷ್ ನಲ್ಲಿ ಓದಿಕೊಂಡಿದ್ದೇನೆ. ಗುಂಡಪ್ಪ ಎಂಬ ಹೆಸರು ನನಗೆ ಹತ್ತಿರವಾಗಿದೆ. ನನ್ನ ತಂದೆಯನ್ನು ಗುಂಡಪ್ಪ ಎಂದು ಕರೆಯುತ್ತಿದ್ದೆ. ನನ್ನ ಸ್ಪಷ್ಟನೆ ಅರ್ಥವಾಗುವವರಿಗೆ ಆದರೆ ಸಾಕು. ಜನರನ್ನು ತಲುಪಲು ಫೇಸ್ ಬುಕ್ ಉತ್ತಮ ಮಾರ್ಗ ಎನಿಸಿತು ಎಂದು ನಗು ನಗುತ್ತಾ ಹೇಳಿದರು.

ಈ ಹಿಂದಿನ ಭೇಟಿಯಲ್ಲಿ ನಡೆದ ಮಾತುಕತೆ

ಈ ಹಿಂದಿನ ಭೇಟಿಯಲ್ಲಿ ನಡೆದ ಮಾತುಕತೆ

ಪಬ್ಲಿಕ್ ಪಾಲಿಸಿ ಆನ್ ಇಂಟರ್‌ ನ್ಯಾಷನಲ್ ರಿಲೇಷನ್' ಬಗ್ಗೆ ಅಧ್ಯಯನ ಮಾಡಲು ಲಂಡನ್ ಗೆ ಹೋಗಿ ಬಂದಿದ್ದರ ಬಗ್ಗೆ ಹಾಗೂ ಜರ್ಮನಿ ಹೋಗಿ 'ಗ್ಲೋಬಲ್ ಗವರ್ನೆನ್ಸ್' ಬಗ್ಗೆ ಅಧ್ಯಯನ ನಡೆಸುವ ಬಗ್ಗೆ ಎಸ್ಸೆಂ ಕೃಷ್ಣರಲ್ಲಿ ಸಲಹೆ ಕೇಳಿದೆ ಎಂದು ರಮ್ಯಾ ಮಾಧ್ಯಮಗಳ ಮುಂದೆ ಹೇಳಿದ್ದರು.

ಪರಿಷತ್ ಸದಸ್ಯರಾಗಿ ಆಯ್ಕೆ ಬಗ್ಗೆ ಸ್ಪಷ್ಟನೆ

ಪರಿಷತ್ ಸದಸ್ಯರಾಗಿ ಆಯ್ಕೆ ಬಗ್ಗೆ ಸ್ಪಷ್ಟನೆ

ರಮ್ಯಾ ಅವರನ್ನು ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವ ಬಗ್ಗೆ ಹಬ್ಬಿರುವ ಸುದ್ದಿ ಕಳೆದ ಆರು ತಿಂಗಳಿನಿಂದ ಚಾಲ್ತಿಯಲ್ಲಿದೆ. ಸಂಪುಟದಲ್ಲಿ ಅಂಬರೀಷ್ ಅವರ ಸ್ಥಾನಪಲ್ಲಟದ ಸುದ್ದಿಯೂ ಹರಿದಾಡುತ್ತಿದೆ. 'ನನಗೆ ಪರಿಷತ್ ಸ್ಥಾನ ನೀಡಬೇಕು ಎಂದು ಕೇಳಿಲ್ಲ ಎಂದು ರಮ್ಯಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹಿಂದೆ ಕೂಡಾ ಹೇಳಿದ್ದೆ. ನನಗೆ ಎಂಎಲ್ ಸಿ, ಎಂಎಲ್ ಎ ಆಗಲು ಇಷ್ಟವಿಲ್ಲ. ಸಂಸದೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಜನರ ಸೇವೆಗೆ ಸಿದ್ಧವಿದ್ದೇನೆ ಎಂದಿದ್ದಾರೆ.

ಹೈಕಮಾಂಡ್ ಗೆ ದೂರು ನೀಡಿಲ್ಲ

ಹೈಕಮಾಂಡ್ ಗೆ ದೂರು ನೀಡಿಲ್ಲ

ಎಸ್.ಎಂ.ಕೃಷ್ಣ ಅವರು ರಾಜ್ಯ ಸರಕಾರದ ವಿರುದ್ಧ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ ಎಂಬುದು ಕೇವಲ ಊಹಾಪೋಹ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಆಧರಿಸಿ, ಊಹಾಪೋಹಗಳಿಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹೀಗಾಗಿ ಕೃಷ್ಣ ಅವರ ಭೇಟಿ ಬಗ್ಗೆ ಕುತೂಹಲ ಇನ್ನೂ ಮುಂದುವರೆದಿದೆ.ರಮ್ಯಾ ವಿರುದ್ಧ ದೂರು ನೀಡಿದ್ದಕ್ಕೆ ಸ್ಪಷ್ಟನೆ ಪಡೆದುಕೊಂಡ ಹೈಕಮಾಂಡ್ ನೀಡಿರುವ ನಿರ್ದೇಶನಗಳೇನು ಎಂಬುದು ಸ್ಪಷ್ಟವಾಗಿಲ್ಲ.

English summary
Mandya former MP Ramya today(Oct. 19) met senior Congress leader SM Krishna at his residence in Sadashivanagar, Bengaluru. After the meeting Ramya said she is not interested in State politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X