ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಾರಿನ್ ವರ-ಮೈಸೂರಿನ ವಧು, ದೇವಸ್ಥಾನದಲ್ಲಿ ಶಾಸ್ತ್ರೋಕ್ತ ಮದುವೆ

By Manjunatha
|
Google Oneindia Kannada News

ಬೆಂಗಳೂರು, ಜುಲೈ 06: ರಾಜ್ಯದ ಗಂಡು ಮಕ್ಕಳೇ ಮದುವೆಗೆ ಹೆಣ್ಣುಗಳಿಲ್ಲ ಎಂದು ಕೈ-ಕೈ ಹಿಸುಕಿಕೊಳ್ಳುತ್ತಿರುವ ಈ ಸಮಯದಲ್ಲಿ ಫಾರಿನ್ ವರನೊಬ್ಬ ಮೈಸೂರಿನ ಯುವತಿಯೊಬ್ಬಳ ವರಸಿ ಲಂಡನ್‌ಗೆ ಹಾರಿಸಿಕೊಂಡು ಹೋಗಿದ್ದಾನೆ.

ಮೈಸೂರಿನ ಚೈತ್ರಾ ಎಂಬ ಚೆಲುವೆಯನ್ನು ಲಂಡನ್‌ನ ಪಾಲ್ ಎಂಬಾತ ಇಂದು ಮದುವೆಯಾಗಿದ್ದಾನೆ. ಅದೂ ಶಾಸ್ತ್ರೋಕ್ತ ಭಾರತೀಯ ಸಂಸ್ಕೃತಿಯ ರೀತಿಯಲ್ಲಿ ವಿವಾಹವಾಗಿರುವುದು ವಿಶೇಷ.

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

ನಂದಿ ಬೆಟ್ಟದ ಭೋಗನಂದೀಶ್ವರ ದೇವಾಲಯದಲ್ಲಿ ಈ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ದೇವರ ಸನ್ನಿಧಿಸಿಯಲ್ಲಿ ಅಪ್ಪಟ ಶಾಸ್ತ್ರೋಕ್ತವಾಗಿ ಇಬ್ಬರ ಮದುವೆಯಾಗಿದೆ. ಈ ಸಂದರ್ಭದಲ್ಲಿ ಇಬ್ಬರ ಕುಟುಂಬದ ಹಿರಿಯರೂ ಹಾಜರಿದ್ದರು ನವ ದಂಪತಿಗಳಿಗೆ ಆಶೀರ್ವದಿಸಿದ್ದಾರೆ.

foreign groom weds Indian bride according Indian culture

ಹಿಂದೂ-ಮುಸ್ಲಿಂ ವಿವಾಹಕ್ಕೆ ಸಾಕ್ಷಿಯಾದ ಕಲಬುರಗಿ ಮಹಿಳಾ ನಿಲಯಹಿಂದೂ-ಮುಸ್ಲಿಂ ವಿವಾಹಕ್ಕೆ ಸಾಕ್ಷಿಯಾದ ಕಲಬುರಗಿ ಮಹಿಳಾ ನಿಲಯ

ಲಂಡನ್‌ಗೆ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಚೈತ್ರ ಅಲ್ಲಿಯೇ ಪಾಲ್‌ನೊಂದಿಗೆ ಪ್ರೇಮಕ್ಕೆ ಬಿದ್ದಿದ್ದರು. ಇದು ಇಬ್ಬರ ಕುಟುಂಬಕ್ಕೂ ಒಪ್ಪಿಗೆಯಾಗಿ ಪಾಲ್‌ ಅವರು ಚೈತ್ರಾ ಅವರ ಮನೆಯ ಸದಸ್ಯರ ಆಸೆಯಂತೆ ಇಲ್ಲಿಯೇ ಭಾರತೀಯ ಸಂಸ್ಕೃತಿಯ ಪ್ರಕಾರವೇ ಮದುವೆಯಾಗಿದ್ದಾರೆ.

English summary
London's Pol gets married with Mysuru's bride Chaitra according to Indian tradition and culture today in Nandi hills temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X