ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದಿ ಹೇರಲು ಹೊರಟ ಬೆಂಗಳೂರು ಐಐಎಂ ವಿರುದ್ಧ ಪ್ರತಿಭಟನೆ

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 01: ಬ್ಯಾಂಕು, ರೈಲ್ವೆ ನಿಲ್ದಾಣ, ಮೆಟ್ರೊ, ಅಂಚೆ ಕಚೇರಿ ಎಲ್ಲೆಡೆ ಆದ ಮೇಲೆ ಈಗ ಕಾಲೇಜುಗಳಲ್ಲೂ ಹಿಂದಿ ಹೇರಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದನ್ನು ವಿದ್ಯಾರ್ಥಿಗಳೇ ವಿರೋಧಿಸುತ್ತಿದ್ದಾರೆ.

ನಗರದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿನ ಆಡಳಿತ ಮಂಡಳಿ ಹಿಂದಿಯಲ್ಲಿ ಹೆಸರು ಬರೆದು ಕೊಡುವಂತೆ ಕೇಳಿದೆ. ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಹಿಂದಿಯಲ್ಲಿ ಮುದ್ರಿಸುವ ಉದ್ದೇಶದಿಂದ ಹೀಗೆ ಕೇಳಲಾಗಿತ್ತಂತೆ ಆದರೆ ಅದಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜನವರಿ 29ರಂದು ಕಾಲೇಜು ವಿದ್ಯಾರ್ಥಿಗಳಿಗೆ ಇ-ಮೇಲ್ ಮಾಡಿದ್ದ ಕಾಲೇಜು ಆಡಳಿತ, ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಹಿಂದಿಯಲ್ಲಿ ಬುಧವಾರದ ಒಳಗೆ ಬರೆದು ಮೇಲ್ ಮಾಡುವಂತೆ ಕೇಳಿತ್ತು, ಹೆಸರುಗಳನ್ನು ಅಂಕಪಟ್ಟಿಯಲ್ಲಿ ನಮೂದಿಸುವ ಕಾರಣ ಸರಿಯಾಗಿ ಬರೆದುಕೊಡುವಂತೆ ಸೂಚಿಸಿತ್ತು' ಈ ಮೇಲ್ ಕ್ಯಾಂಪಸ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

forced enforcement Hindi in Bangalore IIM

ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾವು ಓದು ಮುಗಿಸಿ ಅರ್ಜಿಯನ್ನು ಹಿಂದಿಯಲ್ಲಿ ಹಾಕುತ್ತೇವೆಯೇ. ಹಿಂದಿ ಹೆಸರು ಹೊಂದಿದ ಮಾರ್ಕ್ಸ್‌ ಕಾರ್ಡ್‌ ಇಟ್ಟುಕೊಂಡು ಹೊರ ದೇಶದ ಕಂಪೆನಿಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕುವುದು ಹೇಗೆ? ಎಂದು ವಿದ್ಯಾರ್ಥಿಗಳು ಆಡಳಿತವನ್ನು ಪ್ರಶ್ನಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿಯು, 'ಅಂಕಪಟ್ಟಿಯು ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಇರಲಿದೆ ಎಂದು ಸಮಜಾಯಿಷಿ ನೀಡಿದೆ'. ಆದರೆ ಇದಕ್ಕೂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಹಾಗೆ ಮಾಡುವುದಿದ್ದರೆ ಇಂಗ್ಲಿಷ್ ಜೊತೆಗೆ ನಮ್ಮ ಪ್ರಾದೇಶಿಕ ಭಾಷೆಯಲ್ಲೆ ನಮ್ಮ ಹೆಸರು ಮುದ್ರಿಸಿ ಎಂದು ಪಟ್ಟು ಹಿಡಿದಿದ್ದಾರೆ.

ಈಗ ವಿಷಯ ಕ್ಯಾಂಪಸ್ ಬಿಟ್ಟು ಹೊರಗೆ ಬಂದಿದ್ದು, ಹಲವು ಕನ್ನಡ ಪರ ಸಂಘಟನೆಗಳ ಕಿವಿಗೂ ಬಿದ್ದಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಧ್ವನಿ ಎತ್ತಿದ್ದು, ಆಡಳಿತ ಮಂಡಳಿ ಇನ್ನಾದರೂ ಬುದ್ಧಿ ಕಲಿಯುತ್ತದೆಯೊ ನೋಡಬೇಕು.

English summary
Bengaluru's IIM college forcefully trying to enforce Hindi on students. IIM administration printing Student names in Hindi on their certificates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X