ಮಹಿಳೆಗೆ ಕಿರುಕುಳ ಕೊಟ್ಟ ಫುಡ್ ಫಂಡಾದ ಡೆಲವರಿ ಬಾಯ್ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜುಲೈ 12 : ಫೋನ್ ಮೂಲಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಫುಡ್ ಫಂಡಾದ ಡೆಲವರಿ ಬಾಯ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಡರ್ ವಾಪಸ್ ತೆಗೆದುಕೊಂಡು ಹೋಗಲು ಹೇಳಿದ್ದಕ್ಕೆ ಕೋಪಗೊಂಡ ಯುವಕ ಫೋನ್ ಮೂಲಕ ಕಿರುಕುಳ ನೀಡುತ್ತಿದ್ದ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಜುಲೈ 8ರಂದು ಫುಡ್ ಫಂಡಾದ ಡೆಲವರಿ ಬಾಯ್‌ ಜೆ.ಪಿ.ನಗರದಲ್ಲಿರುವ ಮಹಿಳೆಯ ಮನೆಗೆ ಆಹಾರ ಸರಬರಾಜು ಮಾಡಿದ್ದ. ಆದರೆ, ಅದು ಸರಿ ಇಲ್ಲದ ಕಾರಣ ವಾಪಸ್ ತೆಗೆದುಕೊಂಡು ಹೋಗುವಂತೆ ಮಹಿಳೆ ಸೂಚಿಸಿದ್ದಳು.'[ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತಾಡುತ್ತಿದ್ದ ವಿಕೃತನ ಬಂಧನ]

dcp sharanappa

ಇದರಿಂದಾಗಿ ಕೋಪಗೊಂಡ ಆತ ಮಹಿಳೆಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮಹಿಳೆ ಕಾಲ್ ಗರ್ಲ್‌ ಎಂದು ಹಲವು ವಾಟ್ಸಪ್ ಗ್ರೂಪ್‌ಗಳಲ್ಲಿ ಆಕೆಯ ಮೊಬೈಲ್ ನಂಬರ್ ಶೇರ್ ಮಾಡಿದ್ದ. ಒಂದೇ ದಿನ ಮಹಿಳೆಗೆ 15ಕ್ಕೂ ಹೆಚ್ಚು ಕರೆಗಳು ಬಂದಿದ್ದವು. [ಸಿಗರೇಟ್ ನೆಪದಲ್ಲಿ ಯುವತಿಗೆ ಕಿರುಕುಳ, ಮೂವರ ಬಂಧನ]

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಮಹಿಳೆ ನೀಡಿದ ದೂರಿನಲ್ಲಿದ್ದ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಹುಡುಕಾಟ ನಡೆಸಿದ ಪೊಲೀಸರು ಸೋಮವಾರ ಆರೋಪಿನ್ನು ಬಂಧಿಸಿದ್ದಾರೆ. ಮಹಿಳೆಗೆ ಕರೆ ಮಾಡಿದ ಉಳಿದ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆರ್ಡರ್ ವಾಪಸ್ ತೆಗೆದುಕೊಂಡು ಹೋಗಲು ಹೇಳಿದ ಕಾರಣ ಆಕೆಗೆ ಬುದ್ಧಿ ಕಲಿಸಲು ಈ ರೀತಿ ಮಾಡಿದ್ದಾಗಿ ಯುವಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bengaluru-based food delivery boy working with Foodpanda, a food ordering platform, arrested for sexually harassed a woman over the phone.
Please Wait while comments are loading...