ಮಹಿಳೆಯ ಜೀವತೆಗೆದ ನರ್ಸಿಂಗ್ ಹಾಸ್ಟೆಲಿನ ಕ್ಯಾಂಟೀನ್ ಆಹಾರ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,15: ಕಾಲೇಜಿನ ಹಾಸ್ಟೆಲ್ ಕ್ಯಾಂಟೀನ್ ನ ಊಟ ಮಾಡಿದ ನಾಲ್ವರಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಮೂವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರಹಳ್ಳಿಯ ಶಾರದಾ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ.

ವಿಷಾಹಾರ ಸೇವಿಸಿ ಮೃತಪಟ್ಟ ಮಹಿಳೆಯೇ ತಂಗಿ (58). ವಿಷಾಹಾರ ಸೇವಿಸಿದ ನಾಲ್ವರನ್ನು ನಗರದ ವಿಶ್ವಭಾರತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ತಂಗಿ ಎಂಬಾಕೆ ಮೃತಪಟ್ಟಿದ್ದು ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.[ಮಂಡ್ಯ ಕಾಲೇಜು ವಿದ್ಯಾರ್ಥಿನಿಯ ಪ್ರಾಣಕ್ಕೆ ಕುತ್ತು ತಂದ ಹೊಟ್ಟೆನೋವು]

Food poisoning kills Kerala woman in Bengaluru

ಘಟನೆಯ ವಿವರ:

ಉತ್ತರಹಳ್ಳಿಯ ಶಾರದಾ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಮಾಡಿದ ಅಡುಗೆ ಖಾಲಿಯಾಗಿತ್ತು. ಮೂವರು ವಿದ್ಯಾರ್ಥಿಗಳು ಕೆಲಸ ಮುಗಿಸಿಕೊಂಡು ಹಾಸ್ಟೆಲಿಗೆ ತಡವಾಗಿ ಬಂದಿದ್ದರು. ಊಟ ಖಾಲಿಯಾದ ಕಾರಣ ತಂಗಿ ಅವರು ಹಾಸ್ಟೆಲ್ ಕ್ಯಾಂಟೀನ್ ನಲ್ಲಿ ಮಾಡಿದ್ದ ಮೈದಾ ಹಿಟ್ಟಿನ ಉಂಡೆಯನ್ನು ತಂದಿದ್ದಾರೆ.[ಅಡಿಗಾಸ್ ಹೋಟೆಲ್ ಫುಡ್ ನಲ್ಲಿ ಇಲಿ ಪಿಚ್ಕೆ ಸಿಕ್ತಂತೆ!]

ಬಳಿಕ ತಂಗಿ ಸೇರಿದಂತೆ ಮೂವರು ವಿದ್ಯಾರ್ಥಿನಿಯರು ಮೈದಾಹಿಟ್ಟಿನ ಉಂಡೆ ತಿಂದಿದ್ದಾರೆ. ಕೆಲವು ಸಮಯದ ನಂತರ ಹೊಟ್ಟೆನೋವು, ವಾಂತಿ ಆರಂಭವಾಗಿದೆ. ಸುಮಾರು ಸಮಯ ಹಾಸ್ಟೆಲಿನಲ್ಲಿಯೇ ಒದ್ದಾಡಿದ ಇವರನ್ನು ವಿಶ್ವಭಾರತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.[ಆಹಾರ ಪದಾರ್ಥಗಳ ಮೇಲೆ 'ಬೆಸ್ಟ್ ಬಿಫೋರ್' ಕಿತ್ತು ಹಾಕಿ!]

ಆದರೆ ತುಂಬಾ ನಿತ್ರಾಣಗೊಂಡ ತಂಗಿ ಸಾವನ್ನಪ್ಪಿದ್ದು, ಮೂವರು ವಿದ್ಯಾರ್ಥಿನಿಯರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೈದಾ ಹಿಟ್ಟಿನ ಉಂಡೆಯನ್ನು ಎಫ್ ಎಸ್ಎಲ್ (Food Specialities Limitted) ಗೆ ಕಳುಹಿಸಲಾಗಿದ್ದು, ಪರೀಕ್ಷೆ ಮುಗಿದ ಬಳಿಕ ಘಟನೆಯ ಬಗ್ಗೆ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Keralite woman has died and 3 students hospitalized of food poisoning at Sharada Nursing Hostel, Uttarahalli, in Subramanayapura on Monday.
Please Wait while comments are loading...