ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಎಲ್‌ಸುತ್ತ ಡ್ರೋಣ್ ಹಾರಾಟ, ಇಬ್ಬರ ಬಂಧನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ಎಚ್‌ಎಎಲ್ ರನ್‌ ವೇ ಆವರಣದಲ್ಲಿ ಡ್ರೋಣ್ ಹಾರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೆಲಿಕಾಪ್ಟರ್ ಹಾರಾಟ ನಡೆಸುವಾಗ ಡ್ರೋಣ್ ರಡಾರ್‌ ವ್ಯಾಪ್ತಿಗೆ ಸಿಕ್ಕಿದ್ದು, ಆಡಳಿತ ಮಂಡಳಿ ದೂರು ನೀಡಿತ್ತು.

ಬಂಧಿತ ಆರೋಪಿಗಳನ್ನು ಸಯ್ಯದ್ (24), ಭರತ್ (28) ಎಂದು ಗುರುತಿಸಲಾಗಿದೆ. ಇಬ್ಬರು ಸಹ ವೈಟ್‌ಫೀಲ್ಡ್‌ ನಿವಾಸಿಗಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

30 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದ ಎಚ್‌ಎಎಲ್30 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದ ಎಚ್‌ಎಎಲ್

ಡಿಸೆಂಬರ್ 15ರಂದು ಎಚ್‌ಎಎಲ್ ಆವರಣದಲ್ಲಿನ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟ ನಡೆಸುವಾಗ ಅಪಾರ್ಟ್‌ಮೆಂಟ್ ಮೇಲಿಂದ ಡ್ರೋನ್ ಅನ್ನು ಬಿಟ್ಟು, ಚಿತ್ರೀಕರಣ ನಡೆಸಲಾಗುತ್ತಿತ್ತು.

Flying drone in HAL, Two arrested

ಎಚ್‌ಎಎಲ್ ಚೀಫ್ ಮ್ಯಾನೇಜರ್ ಕೃಷ್ಣಾ ನಾಯಕ್ ಅವರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. 'ಹೆಲಿಕಾಪ್ಟರ್ ಹಾರಾಟ ನಡೆಸುವಾಗ ರಡಾರ್‌ ವ್ಯಾಪ್ತಿಗೆ ಡ್ರೋಣ್ ಸಿಕ್ಕಿದೆ. ಡ್ರೋಣ್ ಹಾರಾಟ ಹೆಲಿಕಾಪ್ಟರ್ ಪೈಲೆಟ್ ಜೀವಕ್ಕೆ ಅಪಾಯ ತರಬಹುದು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಚ್‌ಎಎಲ್ ನಿರ್ಮಿತ ಹೆಲಿಕಾಪ್ಟರ್'ಎಲ್‌ಯುಎಚ್' ಯಶಸ್ವಿ ಹಾರಾಟಎಚ್‌ಎಎಲ್ ನಿರ್ಮಿತ ಹೆಲಿಕಾಪ್ಟರ್'ಎಲ್‌ಯುಎಚ್' ಯಶಸ್ವಿ ಹಾರಾಟ

ಸಯ್ಯದ್ ಮತ್ತು ಭರತ್ ವಿಚಾರಣೆ ನಡೆಸಲಾಗುತ್ತಿದೆ. ನಿಷೇಧಿತ ಸ್ಥಳದಲ್ಲಿ ಡ್ರೋಣ್ ಹಾರಾಟ ನಡೆಸಿದ್ದೇಕೆ? ಎಂದು ತನಿಖೆ ನಡೆಸಲಾಗುತ್ತಿದೆ. ಪ್ರೇಸ್ಟಿಜ್‌ ಗ್ರೂಪ್‌ಗೆ ಸೇರಿದ ಅಪಾರ್ಟ್‌ಮೆಂಟ್ ಮೇಲಿಂದ ಡ್ರೋಣ್ ಮೂಲಕ ಜಾಹೀರಾತಿಗೆ ಚಿತ್ರೀಕರಣ ನಡೆಸುತ್ತಿದ್ದೆವು ಎಂದು ಆರೋಪಿಗಳು ಹೇಳಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಎಚ್‌ಎಎಲ್‌ನಿಂದ ಹೆಲಿ ಟ್ಯಾಕ್ಸಿ ಹಾರಲ್ಲಕೆಂಪೇಗೌಡ ಏರ್‌ಪೋರ್ಟ್‌ಗೆ ಎಚ್‌ಎಎಲ್‌ನಿಂದ ಹೆಲಿ ಟ್ಯಾಕ್ಸಿ ಹಾರಲ್ಲ

ಐಪಿಸಿ ಸೆಕ್ಷನ್ 188, 287, 336, 353 ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಎಚ್‌ಎಎಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಚ್‌ಎಎಲ್ ಆವರಣದ ಸುತ್ತ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ.

English summary
Bengaluru HAL police detained two people for illegally flying a drone in the old airport premises. The duo were using a drone to capture video of an apartment belonging to Prestige Group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X