ಬೆಂಗಳೂರಲ್ಲಿ ದಟ್ಟ ಮಂಜು : ವಿಮಾನ ಹಾರಾಟದಲ್ಲಿ ವ್ಯತ್ಯಯ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28 : ಇಂದು (ನವೆಂಬರ್ 28) ಕವಿದಿದ್ದ ದಟ್ಟ ಮಂಜಿನಿಂದಾಗಿ ದೇವನಹಳ್ಳಿ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 20 ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.

ಕೆಐಎಎಲ್ ನಲ್ಲಿ ಶೀಘ್ರ ಪ್ರತ್ಯೇಕ ಕಾರ್ಗೋ ಟರ್ಮಿನಲ್

ಮಂಜು ಹೆಚ್ಚಿದ್ದ ಕಾರಣ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 3 ಅಂತರರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಿಸಿ ಚೆನ್ನೈಗೆ ಕಳುಹಿಸಲಾಗಿದೆ. ಕುವೈತ್ ಏರ್‌ಲೈನ್ಸ್ 353, ಏರ್ ಮಾರಿಷಸ್ 746 ಮತ್ತು ಏರ್ ಇಂಡಿಯಾ 978 ವಿಮಾನಗಳು ಬೆಂಗಳೂರಿನ ಬದಲಿಗೆ ಚೆನೈನಲ್ಲಿ ಭೂಸ್ಪರ್ಷ ಮಾಡಿವೆ.

Flights delayed in Kempegowda International Airport due to fog

ನವೆಂಬರ್ 28 ಬೆಳಿಗ್ಗೆ 4.30 ಸುಮಾರಿಗೆ ದಟ್ಟ ಮಂಜು ಆವರಿಸಿ ಲ್ಯಾಂಡಿಂಗ್ ನಲ್ಲಿ ಸಮಸ್ಯೆ ಉಂಟಾದ ಕಾರಣ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಲವು ವಿಮಾನಗಳ ಮಾರ್ಗ ಬದಲಿಸಲಾಗಿದೆ. ವಿಮಾನ ವಿಳಂಬವಾದ ಕಾರಣ ಪ್ರಯಾಣಿಕರು ನಿಲ್ದಾಣದಲ್ಲಿಯೇ ಪರದಾಡುವಂತಾಯಿತು.
8 ಗಂಟೆ ಸುಮಾರಿಗೆ ಮಂಜು ಕಡಿಮೆಯಾದ ನಂತರ ವಿಮಾನ ಸೇವೆ ಯಥಾವತ್ ಆರಂಭವಾಗಿದೆ.

Flights delayed in Kempegowda International Airport due to fog

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 20 flights delayed in Kempegowda International airport due to heavy fog, 3 flights diverted to Chennai Airport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ