ಇನ್ಮುಂದೆ ಕನ್ನಡದಲ್ಲೇ ವಿಮಾನ ಹಾರಾಟ ಮಾಹಿತಿ ಲಭ್ಯ!

Posted By:
Subscribe to Oneindia Kannada

ಬೆಂಗಳೂರು, ಜನವರಿ 24 : ಊರಿಂದೂರಿಗೆ, ದೇಶದಿಂದ ದೇಶಕ್ಕೆ ಹಾರಾಡುತ್ತಲೇ ಇರುವ 'ಅಪ್ಪಟ' ಕನ್ನಡಿಗರು ಹುರ್ರೆ ಅಂತ ಚಪ್ಪಾಳೆ ಹೊಡೆದು ಸಂಭ್ರಮಿಸಿ ಹಕ್ಕಿಯಂತೆ ಹಾರಾಡುವಂಥ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ...

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ವಿಮಾನ ಹಾರಾಟದ ಮಾಹಿತಿಗಳು ಕನ್ನಡದಲ್ಲಿ ಲಭ್ಯವಾಗಲಿವೆ. ಕರ್ನಾಟಕದಲ್ಲಿ ಎಲ್ಲೆಲ್ಲೂ ಕನ್ನಡ ರಾರಾಜಿಸಬೇಕು ಎಂದು ಬಯಸುವ ಕನ್ನಡಿಗರಿಗೆ ಇದಕ್ಕಿಂತ ಸಂತಸದ ಸುದ್ದಿ ಮತ್ತೇನಿದೆ? [ಕನ್ನಡದಲ್ಲೇ ಮಾಹಿತಿ ನೀಡಿದ್ರೆ ಮಾತ್ರ ಉತ್ಪನ್ನ ಕೊಳ್ತೇನೆ!]

Flight information available in Kannada at Kempegowda airport

ಇದಕ್ಕಾಗಿ ಹೋರಾಟ ಮಾಡಿದ ಕನ್ನಡ ಗ್ರಾಹಕರ ಕೂಟಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಮಾಹಿತಿ ಕನ್ನಡದಲ್ಲಿ ಸಿಗಬೇಕೆಂದು 2016ರ ಏಪ್ರಿಲ್ 11ರಂದು ಕರ್ನಾಟಕ ಕಾಂಗ್ರೆಸ್ ನ ಕಾರ್ಯನಿರತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಗ್ರಾಹಕರ ಕೂಟ ಮನವಿಯನ್ನು ಸಲ್ಲಿಸಿತ್ತು.

ಇದನ್ನು ಸಾಧ್ಯವಾಗಿಸಿದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಡಿವಿ ಪ್ರಸಾದ್ ಅವರಿಗೂ ಕನ್ನಡ ಗ್ರಾಹಕ ಸಮಿತಿ ಧನ್ಯವಾದಗಳನ್ನು ಅರ್ಪಿಸಿದೆ. ಕರುನಾಡ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಲೇ ಇರಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ. [ಕನ್ನಡ ಬಳಸಲು ನಿರಾಕರಿಸಿದ ಅಮೆಜಾನ್ ಗೆ ನೋಟಿಸ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Now onwards Flight information will be available in Kannada at Kempegowda International airport, Bengaluru. Kannada Grahakara Koota had submitted a request to Dinesh Gundu Rao in 2016 April. @KannadaGrahaka has thanked DV Prasad, IAS for making this happen.
Please Wait while comments are loading...