ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಿಸಲು 5 ವರ್ಷ ಕಾಲಾವಕಾಶ

|
Google Oneindia Kannada News

ಬೆಂಗಳೂರು, ನವೆಂಬರ್ 9: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ ಎರಡು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಉಗೊಂಡಿದೆ. ಹಾಗೆಯೇ ಮನೆಯನ್ನು ಕಟ್ಟಿಕೊಳ್ಳಲು ಬಿಡಿಎ ಐದು ವರ್ಷಗಳ ಗಡುವು ನೀಡಿದೆ.

ಎರಡನೇ ಹಂತದಲ್ಲಿ ನಿವೇಶನ ಹಂಚಿಕೆದಾರರಿಗೆ ರವಾನಿಸಿರುವ ಪತ್ರದಲ್ಲಿ ಈ ವಿಷಯವನ್ನು ನಮೂದಿಸಲಾಗಿದೆ. ಸ್ವವಿವರ ಹಾಗೂ ಇನ್ನಿತರೆ ಮಾಹಿತಿಯೊಂದಿಗೆ ಸೈಟ್‌ ನ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿದೆ.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ಒಂದೆರೆಡು ತಿಂಗಳ ಹಿಂದೆ ಬಿಡಿಎ ನ ಕೆಲ ಅಧಿಕಾರಿಗಳು ಮನೆ ನಿರ್ಮಿಸುವ ಅವಧಿ ಮೂರು ವರ್ಷ ಮಾತ್ರ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಆತಂಕಕ್ಕೆ ಒಳಗಾದ ನಾಗರಿಕರು ಪ್ರಾಧಿಕಾರದ ಕಚೇರಿಗೆ ದೌಡಾಯಿಸಿ ಸಮಜಾಯಿಷಿ ಕೋರಿದ್ದರು. ಈಗ ಹಂಚಿಕೆ ಪತ್ರ ರವಾನಿಸಿರುವ ಬಿಡಿಎ ಮನೆ ನಿರ್ಮಿಸುವ ಅವಧಿಯನ್ನು ಕರಾರುವಕ್ಕಾಗಿ ತಿಳಿಸಿದೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

ಈ ಗಡುವಿನ ಬಳಿಕ ಮನೆ ನಿರ್ಮಿಸಿದವರಿಗೆ ನೋಟಿಸ್ ನೀಡಿ ಹಂಚಿಕೆ ರದ್ದು ಮಾಡಬಹುದು. ಆದರೆ ವಾಪಸ್ ಪಡೆಯಲು ಸ್ಪಷ್ಟ ನಿಯಮಾವಳಿ ಇಲ್ಲದ ಕಾರಣ ನಾಗರಿಕರು ನಿಖರ ಕಾರಣ ಹೇಳಿ ಹೆಚ್ಚುವರಿ ಸಮಯ ಕೋರಬಹುಸು. ಕೋರ್ಟ್ ಮೂಲಕವೂ ಒಂದಿಷ್ಟು ಸಮಯ ಪಡೆಯಲು ಅವಕಾಶ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಬಿಡಿಎ ಸೈಟು ಪಡೆದವರು ಮನೆ ಕಟ್ಟುವುದು ಕಡ್ಡಾಯವಾಗಿದೆ.

ಎರಡನೇ ಹಂತದಲ್ಲಿ 5 ಸಾವಿರ ಮಂದಿಗೆ ಸೈಟು

ಎರಡನೇ ಹಂತದಲ್ಲಿ 5 ಸಾವಿರ ಮಂದಿಗೆ ಸೈಟು

ಎರಡನೇ ಹಂತದಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ಒಟ್ಟು ಐದು ಸಾವಿರ ಮಂದಿಗೆ ನಿವೇಶನ ನೀಡಲಾಗಿದೆ.ಪ್ರಸ್ತುತ ನಿವೇಶನ ಪಡೆದುಕೊಂಡ ಜನರಲ್‌ ಕ್ಯಾಟಗರಿಯವರು ಎರಡು ತಿಂಗಳೊಳಗಾಗಿ ಹಣ ಪಾವತಿ ಮಾಡದಿದ್ದರೆ ಶೇ.18 ರಷ್ಟು ಬಡ್ಡಿ ಹಾಕಲಾಗುತ್ತದೆ. ಈ ಅವಧಿಯೂ ಮೀರಿದರೆ ಶೇ.21ರಷ್ಟು ಬಡ್ಡಿ ಹಾಕಲಾಗುವುದು. ಪರಿಶಿಷ್ಟ ಜಾತಿ ಅವರಿಗೆ ಮೂರು ವರ್ಷದ ಅವಧಿ ನೀಡಲಾಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳು

ಕೆಂಪೇಗೌಡ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳು

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಿವಿಧ ಸೌಲಭ್ಯ ಕಲ್ಪಿಸಲು ಬಿಡಿಎ ಮುಂದಾಗಿದೆ. ಒಳಚರಂಡಿ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಒದಗಿಸುವ ಕಾಮಗಾರಿಗೆ ಚಾಲನೆ ದೊರೆಯಲಿದೆ. ಕೆಂಪೇಗೌಡ ಬಡಾವಣೆ 4043 ಎಕರೆ ವಿಸ್ತೀರ್ಣ ಹೊಂದಿದೆ. ಈಗಾಗಲೇ ಸ್ವಾಧೀನಗೊಂಡಿರುವ ಜಮೀನಿನಲ್ಲಿ ಶೇ.60 ರಷ್ಟು ಭಾಗ ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಗೊಂಡಿದೆ.

ಸೈಟ್ ಸಿಗದಿದ್ದರೂ ಠೇವಣಿ ವಾಪಸ್ ಖಾತ್ರಿ ಕೊಟ್ಟ ಬಿಡಿಎಸೈಟ್ ಸಿಗದಿದ್ದರೂ ಠೇವಣಿ ವಾಪಸ್ ಖಾತ್ರಿ ಕೊಟ್ಟ ಬಿಡಿಎ

ಭೂಮಿಪೂಜೆಗೂ ಮುನ್ನವೇ ಬೇಡಿಕೆ ಪಡೆದ ವಿಲ್ಲಾಗಳು

ಭೂಮಿಪೂಜೆಗೂ ಮುನ್ನವೇ ಬೇಡಿಕೆ ಪಡೆದ ವಿಲ್ಲಾಗಳು

ಬಿಡಿಎ ದಾಸನಪುರ ಬಳಿ ನಿರ್ಮಿಸಲಿರುವ 4 ಬಿಎಚ್‌ಕೆ ವಿಲ್ಲಾಗಳಿಗೆ ಈಗಲೇ ಬೇಡಿಕೆ ಆರಂಭವಾಗಿದೆ. ದಾಸನಪುರ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ 320 ವಿಲ್ಲಾಗಳ ಪೈಕಿ 200 ಕ್ಕೂ ವಿಲ್ಲಾಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಬಹುತೇಕ ಬಿಡಿಎ ಅಪಾರ್ಟ್ ಮೆಂಟ್‌ಗಳು ಖಾಲಿ ಇವೆ, ರಿಯಾಯ್ತಿಯನ್ನು ಘೋಷಿಸಿದರೂ ಪ್ರಯೋಜನವಾಗುತ್ತಿಲ್ಲ, ಏಕೆಂದರೆ ಮೈಸೂರು ರಸ್ತೆ ಬಳಿ ಇನ್ನಿತರೆ ಕಡೆಗಳಲ್ಲಿ ಬಿಡಿಎ ನಿರ್ಮಿಸಿರುವ ಪ್ಲಾಟ್‌ಗಳು ಕಡಿಮೆ ವಿಸ್ತೀರ್ಣವನ್ನು ಹೊಂದಿದೆ ಎನ್ನುವುದು ಒಂದು ಕಾರಣವಾಗಿದೆ.

ಕೆಂಪೇಗೌಡ ಲೇಔಟ್: ಠೇವಣಿದಾರರಿಗೆ ಹಣ ವಾಪಸ್

ಕೆಂಪೇಗೌಡ ಲೇಔಟ್: ಠೇವಣಿದಾರರಿಗೆ ಹಣ ವಾಪಸ್

ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ ಎರಡನೇ ಹಂತದ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಠೇವಣಿ ನೀಡಿ ನಿವೇಶನ ದೊರೆಯದಿರುವವರಿಗೆ ಅ.1 ರಿಂದ ಠೇವಣಿ ವಾಪಸ್ ನೀಡಲಾಗುತ್ತಿದೆ. ಹಣ ಹಿಂದಿರುಗಿಸಬೇಕಾದವರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಅರ್ಜಿಗಳೊಂದಿಗೆ ತಾಳೆ ಹಾಕಿದ ಬಳಿಕ ಹಣ ಪಾವತಿಸುವಂತೆ ಆರ್ಥಿಕ ವಿಭಾಗದ ಮುಖ್ಯಸ್ಥರು, ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಪಟ್ಟಿ ಪರಾಮರ್ಶಿಸಿ ಮುಂದುವರೆಯಲು ನಿರ್ದೇಶಿಸಲಾಗಿದೆ.

English summary
BDA has given five year time bond to borrower to construct home in the kempegowda sight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X