ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟದಲ್ಲಿ ಒಂಟಿ ಸಲಗ ದಾಳಿ, ಐವರಿಗೆ ಗಾಯ

|
Google Oneindia Kannada News

ಬೆಂಗಳೂರು, ಜೂ. 16 : ಬನ್ನೇರುಘಟ್ಟದಲ್ಲಿ ಕೂಲಿ ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬನ್ನೇರುಘಟ್ಟದ ಸಫಾರಿ ದಾರಿಯ ಸೀಗೆಕಟ್ಟೆ ಬಳಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮಹೇಶ್ವರಿ, ನಾಗಮ್ಮ ಮತ್ತು ಮೂವರು ಮಕ್ಕಳು ಆನೆದಾಳಿಯಿಂದ ಗಾಯಗೊಂಡಿದ್ದಾರೆ. ನಾಗಮ್ಮ ಮತ್ತು ಮಹೇಶ್ವರಿ ಅವರಿಗೆ ಗಂಭೀರ ಗಾಯಗಳಾಗಿವೆ.

elephant

ಮಂಗಳವಾರ ಬೆಳಗ್ಗೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದ ಇವರ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ದಾಳಿಯಿಂದಾಗಿ ಮಹೇಶ್ವರಿ ಅವರ ಸೊಂಟ ಮುರಿದು ಹೋಗಿದ್ದರೆ, ನಾಗಮ್ಮ ಅವರ ಕಾಲು ಮರಿದಿದೆ. [ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ]

ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. [ಪೇಟಾದಿಂದ ಬನ್ನೇರುಘಟ್ಟದಲ್ಲಿ ಶೀಘ್ರ ಆನೆಗಳ ಅಭಯಾರಣ್ಯ]

ಆನೆಗಳ ಅಭಯಾರಣ್ಯ : ಅಂತಾರಾಷ್ಟ್ರೀಯ ಪ್ರಾಣಿ ದಯಾ ಸಂಘಟನೆ ಪೇಟಾ ಹಾಗೂ ಬನ್ನೇರುಘಟ್ಟ ಜೈವಿಕ ಪಾರ್ಕ್‌ ಜಂಟಿಯಾಗಿ ಆನೆಗಳಿಗೆ ಅಭಯಾರಣ್ಯ ನಿರ್ಮಿಸಲು ಮುಂದಾಗಿವೆ. ಬನ್ನೇರುಘಟ್ಟದ ಜೈವಿಕ ಪಾರ್ಕ್‌ಗೆ ಹೊಂದಿಕೊಂಡಿರುವ 49.5 ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ಅಭಯಾರಣ್ಯ ಸ್ಥಾಪನೆಯಾಗಲಿದೆ.

English summary
An elephant attacked construction workers at Bannerghatta Biological Park, Bengaluru on Tuesday morning. Five construction workers are injured in the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X