ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಓಲಾ ಜೋನ್

Posted By:
Subscribe to Oneindia Kannada

ಬೆಂಗಳೂರು, ಮೇ 19: ಮೊಬೈಲ್ ಆಧಾರಿತ ಕ್ಯಾಬ್ ಸರ್ವೀಸ್ ನೀಡುವ ಓಲಾ ಸಂಸ್ಥೆ ಇದೇ ಮೊದಲ ಬಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ 'ಓಲಾ ಜೋನ್' ಸ್ಥಾಪಿಸಿದೆ. ಇನ್ಮುಂದೆ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ನಗರಕ್ಕೆ ಕ್ಯಾಬ್ ಸರ್ವೀಸ್ ಬಯಸುವವರು ಸುಲಭವಾಗಿ ಓಲಾ ಕ್ಯಾಬ ಪಡೆದುಕೊಳ್ಳಬಹುದು.

ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಆವರಣದಲ್ಲೇ 'ಓಲಾ ಜೋನ್' ಇರುವುದರಿಂದ ಪ್ರಯಾಣಿಕರಿಗೆ ಸುಲಭವಾಗಿ ಕ್ಯಾಬ್ ಗಳು ಲಭ್ಯವಾಗಲಿದೆ. ಈ ರೀತಿ ಪಾರ್ಕಿಂಗ್ ವ್ಯವಸ್ಥೆ ಒದಗಿಸಲಿ ಕರ್ನಾಟಕ ಸರ್ಕಾರ ಹಾಗೂ ಓಲಾ ಸಂಸ್ಥೆ ಜೊತೆ ಒಪ್ಪಂದ ಗುರುವಾರ ಮಾಡಿಕೊಳ್ಳಲಾಗಿದೆ.[ಹುಬ್ಬಳ್ಳಿ ಸೇರಿ 75 ನಗರಗಳಿಗೆ ಓಲಾ ಕ್ಯಾಬ್ ವಿಸ್ತರಣೆ]

First in India : Ola signs an MoU with Kempegowda International Airport Dedicated Ola Zone

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುಮಾರು 19 ಮಿಲಿಯನ್ ಗೂ ಅಧಿಕ ಪ್ರಯಾಣಿಕರು ಕಂಡಿದೆ. ಈಗ ಓಲಾ ಜೋನ್ ಸ್ಥಾಪನೆಯಾಗಿರುವುದರಿಂದ ಈ ಸಂಖ್ಯೆ ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ. ಓಲಾ ಕ್ಯಾಬ್ ಗಳನ್ನು ಎಂದಿನಂತೆ ಮೊಬೈಲ್ ಅಪ್ಲಿಕೇಷನ್ ಬಳಸಿ ಬುಕ್ ಮಾಡಬಹುದು. ವಿಮಾನ ನಿಲ್ದಾಣದ ನಿರ್ಗಮನ ಬಾಗಿಲ ಬಳಿಗೆ ಕ್ಯಾಬ್ ಬರಲಿದೆ. ಪ್ರಯಾಣಿಕರಿಗೆ ಓಲಾ ಜೋನ್ ಗೆ ಕರೆದೊಯ್ಯಲು ಮಾರ್ಗದರ್ಶಕರನ್ನು ಕೂಡಾ ಸಂಸ್ಥೆ ನೇಮಿಸುತ್ತಿದೆ.[ಇನ್ಫೋಸಿಸ್ ತೊರೆದ ಬನ್ಸಾಲ್ ಈಗ ಓಲಾ ಸಿಎಫ್ಒ]

ಇದೇ ರೀತಿ ಸ್ಪೆಷಲ್ ಜೋನ್ ಗಳನ್ನು ಬೆಂಗಳೂರಿನ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೂಡಾ ವಿಸ್ತರಿಸಲು ಓಲಾ ಚಿಂತಿಸುತ್ತಿದೆ. ದೇಶದ 102 ನಗರಗಳಲ್ಲಿ ಓಲಾ ತನ್ನ ಜಾಲ ವಿಸ್ತರಿಸಲಿದೆ.

First in India : Ola signs an MoU with Kempegowda International Airport Dedicated Ola Zone

ಐಐಟಿ ಬಾಂಬೆ ಅಲುಮ್ನಿಗಳಾದ ಭವಿಶ್ ಅಗರವಾಲ್ ಹಾಗೂ ಅಂಕಿಯ್ ಭಾಟಿ ಅವರು 2011ರಲ್ಲಿ ಸ್ಥಾಪಿಸಿದ ಓಲಾ, ದೇಶದ ಪ್ರಮುಖ ಮೊಬೈಲ್ ಅಪ್ಲಿಕೇಷನ್ ಆಧಾರಿತ ಸಾರಿಗೆ ವ್ಯವಸ್ಥೆಯಾಗಿದೆ.

2015ರಲ್ಲಿ ಟ್ಯಾಕ್ಸಿ ಫಾರ್ ಶ್ಯೂರ್ ಖರೀದಿಸಿದ ನಂತರ ಓಲಾ ಸಂಸ್ಥೆ ಕ್ಯಾಬ್, ಆಟೋರಿಕ್ಷಾ, ಟ್ಯಾಕ್ಸಿ ಸೇವೆಯನ್ನು ಇನ್ನಷ್ಟು ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ www.olacabs.com

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
First in India: Ola signs an MoU with Kempegowda International Airport, Bengaluru (KIAB) to provide reliable transportation access to travelers.Dedicated Ola Zone with parking space for driver partners and pick up points for customers - ETAs of less than 3 mins at the Bengaluru Airport Plans to replicate a similar model with airports and public utility spaces across the country
Please Wait while comments are loading...