ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಗಿಳಿಯಲಿದೆ ದೇಶದ ಮೊಟ್ಟಮೊದಲ ಎಲೆಕ್ಟ್ರಿಕ್ ಬಸ್

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ಬಿಎಂಟಿಸಿ ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್ ಚಾಲಿತ ಬಸ್ ಗಳನ್ನು ಬಳಕೆಗೆ ತರಲಿದೆ.

ಬಿಎಂಟಿಸಿ ಬಸ್ಸಿನಲ್ಲಿಯೇ ಬೋರ್ಡಿಂಗ್ ಪಾಸ್ ಪಡೆಯಿರಿಬಿಎಂಟಿಸಿ ಬಸ್ಸಿನಲ್ಲಿಯೇ ಬೋರ್ಡಿಂಗ್ ಪಾಸ್ ಪಡೆಯಿರಿ

ಪ್ರಯೋಗಾರ್ಥವಾಗಿ ಮೂರು ತಿಂಗಳ ಹಿಂದೆ ಒಂದು ಎಲೆಕ್ಟ್ರಿಕ್ ಬಸ್ಸನ್ನು ನಗರದಲ್ಲಿ ಓಡಾಡಿಸಲಾಗಿದ್ದ. ಚೀನಾ ನಿರ್ಮಿತ ಈ ಬಸ್ ನ ಪ್ರಯೋಗ ನಡೆಸಿ ಕಾರ್ಯಕ್ಷಮತೆಯಲ್ಲಿ ನಂಬಿಕೆ ಬಂದ ಹಿನ್ನಲೆಯಲ್ಲಿ ಬಿಎಂಟಿಸಿ ಪೂರ್ಣ ಪ್ರಮಾಣದಲ್ಲಿ ಈ ಬಸ್ಸಿನ ಬಳಕೆ ಆರಂಭಿಸಲಿದೆ.

ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿ ಸೀಟು ಕಾಯ್ದಿರಿಸಿ!ಬಿಎಂಟಿಸಿ ವಾಯು ವಜ್ರ ಬಸ್ಸಿನಲ್ಲಿ ಸೀಟು ಕಾಯ್ದಿರಿಸಿ!

ಈ ಕುರಿತು ಟ್ವೀಟ್ ಮಾಡಿರುವ ಕೈಗಾರಿಕೆ ಸಚಿವ ಆರ್.ವಿ ದೇಶಪಾಂಡೆ, ರಾಜ್ಯದಲ್ಲಿ ಜಾರಿಗೆ ತಂದಿರುವ ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಸ್ಮರಿಸಿದ್ದಾರೆ. ದೇಶದಲ್ಲಿ ಜಾರಿಗೆ ತಂದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ನೀತಿ ಭವಿಷ್ಯದಲ್ಲಿ ಲಾಭ ತರಲಿದೆ ಎಂದು ಅವರು ಹೇಳಿದ್ದಾರೆ.

ಬಿಎಂಟಿಸಿ ಕಾರ್ಯ ಶ್ಲಾಘಿಸಿದ ದೇಶಪಾಂಡೆ

ಸಾರ್ವಜನಿಕ ಸಾರಿಗೆಯಲ್ಲಿ ಮೊತ್ತ ಮೊದಲ ಬಾರಿಗೆ ಬೆಂಗಳೂರು ಎಲೆಕ್ಟ್ರಿಕ್ ಬಸ್ಸುಗಳನ್ನು ಹೊಂದುವ ತೀರ್ಮಾನ ಸಂತಸ ತಂದಿದೆ ಎಂದಿರುವ ದೇಶಪಾಂಡೆ, ನಗರದಲ್ಲಿ ಮಾಲಿನ್ಯ ಕಡಿತಗೊಳಿಸಲು ವಿದ್ಯುತ್ ಚಾಲಿತ ಬಸ್ ಗಳನ್ನು ಜಾರಿಗೆ ತಂದಿರುವ ಬಿಎಂಟಿಸಿಯ ಕಾರ್ಯ ಶ್ಲಾಘನೀಯ ಎಂದು ಟ್ವೀಟ್ ಮಾಡಿದ್ದಾರೆ.

ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಿದ್ಯುತ್ ಚಾಲಿತ ಬಸ್ಸುಗಳು ಈ ಸಮಯದ ತುರ್ತು ಅಗತ್ಯವಾಗಿತ್ತು. ಡೀಸೆಲ್ ಬಳಕೆಯ ಬದಲು ವಿದ್ಯುತ್ ಬಳಸುವುದರಿಂದ ಮಾಲಿನ್ಯ ತಡೆಯುವುದಷ್ಟೇ ಅಲ್ಲ, ಇದರಿಂದ ಬಳಕೆಯ ಖರ್ಚು ಕೂಡ ಕಡಿಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.

2.6 ಕೋಟಿ ಬೆಲೆಯ ಬಸ್

2.6 ಕೋಟಿ ಬೆಲೆಯ ಬಸ್

ಬಿಎಂಟಿಸಿ ಬಸ್ ನ ಕಾರ್ಯಕ್ಷಮತೆಯಿಂದ ಉತ್ತೇಜನಗೊಂಡಿತ್ತು. ಆದರೆ ಬೆಲೆ ಕೇಳಿ ದಂಗು ಬಡಿದುಹೋಗಿತ್ತು. ಕಂಪೆನಿ ಬಸ್ಸಿನ ಬೆಲೆ 2.9 ಕೋಟಿ ಎಂದು ಹೇಳಿತ್ತು. ಇದು ಸಾಮಾನ್ಯ ವೋಲ್ವೋ ಬಸ್ ಗಿಂತ ದುಪ್ಪಟ್ಟು ಬೆಲೆಯಾಗಿತ್ತು. ಹೀಗಾಗಿ ಬಿಎಂಟಿಸಿ 2.1 ಕೋಟಿಯ ಆಫರ್ ಮುಂದಿಟ್ಟಿತು. ಕೊನೆಗೆ ಎರಡೂ ಕಡೆಯಿಂದ ಚರ್ಚೆ ನಡೆದು ಇದೀಗ 2.6 ಕೋಟಿಗೆ ಬಸ್ ಖರೀದಿ ಮಾಡಲಾಗುತ್ತಿದೆ.

ಸದ್ಯದಲ್ಲೇ ಟೆಂಡರ್

ಸದ್ಯದಲ್ಲೇ ಟೆಂಡರ್

ಒಟ್ಟು 150 ಬಸ್ ಗಳನ್ನು ಏಕಕಾಲದಲ್ಲಿ ಬೆಂಗಳೂರಿನ ರಸ್ತೆಗಿಳಿಸಲು ಬಿಎಂಟಿಸಿ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ 'ಸದ್ಯದಲ್ಲೇ ನಾವು ಟೆಂಡರ್ ಕರೆಯಲಿದ್ದೇವೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಪೊನ್ನುರಾಜ್ ಹೇಳಿದ್ದಾರೆ. ಟೆಂಡರ್ ನ್ನು ಚೀನಾ ಕಂಪೆನಿ ಪಡೆದುಕೊಂಡರೆ ಅದೇ ಕಂಪನಿ ಬಸ್ ಪೂರೈಸಲಿದೆ.

ಬಸ್ಸಿನ ಬೆಲೆ 2 ರಿಂದ 3 ಕೋಟಿ ಮಧ್ಯೆ ಇರಲಿದೆ. ಬಸ್ಸಿನಲ್ಲಿರುವ ಬ್ಯಾಟರಿ ಗಾತ್ರಕ್ಕೆ ತಕ್ಕಂತೆ ಬೆಲೆ ಇರಲಿದೆ. ಬಸ್ಸಿನ ಬೆಲೆಯಲ್ಲಿ ಬ್ಯಾಟರಿಗೇ ಹೆಚ್ಚಿನ ಖರ್ಚು ತಗುಲಲಿದೆ.

ಕೇಂದ್ರ ಸರಕಾರ ಪ್ರತಿ ಬಸ್ ಗೆ 1 ಕೋಟಿ ವರೆಗೆ ಸಬ್ಸಿಡಿ ನೀಡುವ ಸಾಧ್ಯತೆ ಇದೆ ಎಂದು ಪೊನ್ನುರಾಜ್ ಹೇಳಿದ್ದಾರೆ.

ಖರ್ಚು ಕಡಿಮೆ

ಖರ್ಚು ಕಡಿಮೆ

ಡೀಸೆಲ್ ಬಸ್ ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಬಸ್ ಗಳ ನಿರ್ವಹಣೆ ವೆಚ್ಚ ಕಡಿಮೆ. ಆರಂಭಿಕ ಹೂಡಿಕೆ ಸ್ವಲ್ಪ ಜಾಸ್ತಿಯಾದರೂ ಎಲೆಕ್ಟ್ರಿಕ್ ಬಸ್ ಗಳ ಓಡಾಟಕ್ಕೆ ಕಿಲೋಮೀಟರ್ ಗೆ ಕೇವಲ 10 ರೂಪಾಯಿ ಖರ್ಚಾಗುತ್ತದೆ. ಅದೇ ಡೀಸೆಲ್ ಬಸ್ ಗಳಲ್ಲಾದರೆ ಕಿಲೋಮೀಟರ್ ಗೆ 15 ರಿಂದ 23 ರೂಪಾಯಿ ಖರ್ಚಾಗುತ್ತದೆ.

ದುಬಾರಿ ಬೆಲೆಯಿಂದ ಪ್ರಾಜೆಕ್ಟ್ ಕೈಬಿಟ್ಟಿದ್ದ ಬಿಎಂಟಿಸಿ

2014ರಲ್ಲೂ ನಡೆದಿತ್ತು ಪ್ರಯೋಗ

2014ರಲ್ಲೂ ನಡೆದಿತ್ತು ಪ್ರಯೋಗ

ಈ ಹಿಂದೆ 2014ರಲ್ಲೂ ಎಲೆಕ್ಟ್ರಿಕ್ ಬಸ್ ಗಳ ಪ್ರಯೋಗ ನಡೆದಿತ್ತು. ಆದರೆ ಕೊನೆಗೆ ದುಬಾರಿ ದರದ ಹಿನ್ನಲೆಯಲ್ಲಿ ಪ್ರಾಜೆಕ್ಟ್ ಕೈ ಬಿಡಲಾಗಿತ್ತು. ಸೆಪ್ಟೆಂಬರ್ ನಲ್ಲಿ ಹಿಮಾಚಲ ಪ್ರದೇಶದಲ್ಲಿ ದೂರ ಪ್ರಯಾಣಕ್ಕೆ ಎಲೆಕ್ಟ್ರಿಕ್ ಬಸ್ ಗಳನ್ನು ಆರಂಭಿಸಲಾಗಿದೆ. ಇದೀಗ ಕರ್ನಾಟಕದಲ್ಲಿ ಬೆಂಗಳೂರು ನಗರದಲ್ಲಿ ಕಡಿಮೆ ಅಂತರದ ಪ್ರಯಾಣಕ್ಕೆ ವಿದ್ಯುತ್ ಚಾಲಿತ ಬಸ್ ಗಳನ್ನು ಬಳಸಲಾಗುತ್ತಿದೆ.

English summary
Bengaluru Metropolitan Transport Corporation (BMTC) planned to launch 150 electric buses in Bengaluru. If all goes according to plan, Bengaluru could be the first city in India to have electric buses for public transport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X