ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷದಂದು ಜನಿಸುವ 24 ಹೆಣ್ಣು ಶಿಶುಗಳಿಗೆ ಪಾಲಿಕೆಯಿಂದ 5 ಲಕ್ಷ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಹೊಸ ವರ್ಷದಂದು ಬಿಬಿಎಂಪಿಯ 24 ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣುಮಗುವಿಗೆ 5 ಲಕ್ಷ ರೂ ವ್ಯಯಿಸಲು ಬಿಬಿಎಂಪಿ ಮುಂದಾಗಿದೆ.

ಭ್ರೂಣ ಹತ್ಯೆ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಿಂಕ್ ಬೇಬಿ ಯೋಜನೆಯನ್ನು ಪಾಲಿಕೆ ಕಳೆದ ವರ್ಷ ಆರಂಭಿಸಿ ಒಂದು ಮಗುವಿಗೆ ಮಾತ್ರ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಸಾಲಿನಲ್ಲೂ ಯೋಜನೆಯನ್ನು ಮುಂದುವರೆಸಲು ಮೇಯರ್ ಗಂಗಾಂಬಿಕೆ ನಿರ್ಧರಿಸಿದ್ದು, 24 ಹೆಣ್ಣು ಮಕ್ಕಳಿಗೆ ಯೋಜನೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೊಸ ವರ್ಷ ಆಚರಣೆ: ಬೆಂಗಳೂರಲ್ಲಿ ಪೊಲೀಸರ ಬಂದೋಬಸ್ತ್ ಹೇಗಿದೆ?ಹೊಸ ವರ್ಷ ಆಚರಣೆ: ಬೆಂಗಳೂರಲ್ಲಿ ಪೊಲೀಸರ ಬಂದೋಬಸ್ತ್ ಹೇಗಿದೆ?

ಬೆಂಗಳೂರಲ್ಲಿರುವ 24 ಪಾಲಿಕೆಯ ಹೆರಿಗೆ ಆಸ್ಪತ್ರೆಗಳಿದ್ದು, ಜನವರಿ 1ರಂದು ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ 5 ಲಕ್ಷ ರೂಗಳನ್ಉ ಪಾಲಿಕೆಯಿಂದ ಠೇವಣಿ ಇಡಲಾಗುತ್ತದೆ. ಮಗು ಶಾಲೆಗೆ ಸೇರುವ ವಯಸ್ಸಿಗೆ ವಾರ್ಷಿಕ ಇಂತಿಷ್ಟು ಪ್ರಮಾಣ ಹಣ ಪೋಷಕರಿಗೆ ದೊರೆಯಲಿದ್ದು, ಆ ಹಣದಿಂದ ಮಗುವಿಗೆ ಉತ್ತಮ ಶಿಕ್ಷಣ ಕೊಡಿಸುವುದು ಯೋಜನೆಯ ಉದ್ದೇಶವಾಗಿದೆ.

First girl child born on New Year in BBMP hospitals to get Rs 5 lakhs

ಇದೇ ಮೊದಲ ಬಾರಿಗೆ 24 ಮಕ್ಕಳಿಗೆ 5 ಲಕ್ಷ ರೂ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ1.20 ಕೋಟಿ ರೂ ಮೀಸಲಿಡಲಿದೆ. ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ಬಡ, ಮಧ್ಯಮ ವರ್ಗದವರು ಹೆಚ್ಚು ಚಿಕಿತ್ಸೆ ಪಡೆಯುತ್ತಾರೆ.

ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ

ಜೊತೆಗೆ ಹೆಣ್ಣು ಮಗು ಜನಿಸಿದಾಗ ಆವರಿಗೆ ಶಿಲಕ್ಷ, ಮದುವೆ ಹೀಗೆ ಭವಿಷ್ಯದ ಬಗ್ಗೆ ಯೋಚಿಸಿ ಕೆಲವರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಇಲ್ಲ ಹಾಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.

English summary
Bruhat Bengaluru Mahanagar Palika (BBMP) has decided to celebrate the girl child and for this, the civic body has announced that the first girl child born in the New Year at 24 BBMP hospitals in Bengaluru will be provided 5 lakh rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X