ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: 10 ವರ್ಷಗಳ ಹಿಂದಿನ ಪ್ರಕಟಣಕ್ಕೆ ಅಂತೂ ತೀರ್ಪು ಪ್ರಕಟಗೊಂಡಿದ್ದು, ಪರಿಚಿತ ಯುವತಿಗೆ ಇ ಮೇಲ್ ಮೂಲಕ ಅಶ್ಲೀಲ ಫೋಟೊ, ಸಂದೇಶ ಕಳುಹಿಸಿ ಬೆದರಿಕೆಯೊಡ್ಡುತ್ತಿದ್ದ ವ್ಯಕ್ತಿಗೆ 2 ವರ್ಷ ಜೈಲುಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಎಸಿಎಂಎಂ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಹತ್ತು ವರ್ಷಗಳ ಹಿಂದೆ ಈ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಶಿವಪ್ರಸಾದ್ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67ರ ಅಡಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಗಂಗಾಧರ ಚಡಚಣ ಹತ್ಯೆ : 373 ಪುಟದ ಚಾರ್ಜ್ ಶೀಟ್ ಸಲ್ಲಿಕೆಗಂಗಾಧರ ಚಡಚಣ ಹತ್ಯೆ : 373 ಪುಟದ ಚಾರ್ಜ್ ಶೀಟ್ ಸಲ್ಲಿಕೆ

2000ನೇ ಇಸವಿಯಲ್ಲಿ ಶಿವಪ್ರಸಾದ್ ಹಾಗೂ ಸಂತ್ರಸ್ತ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ಟೆಲಿ ಕಮ್ಯುನಿಕೇಷನ್ ಕೋರ್ಸ್ ಮಾಡುತ್ತಿದ್ದರು. ತನ್ನ ಚಿಕ್ಕಪ್ಪನ ಮನೆಯಲ್ಲಿ ಯುವತಿ ನೆಲೆಸಿದ್ದಳು, ಶಿಕ್ಷಣ ಮುಗಿಸಿದ ಬಳಿಕ ನಗರದಲ್ಲಿ ಕೆಲಸ ಸಿಗದ ಕಾರಣ ತಂದೆಯ ಊರಾದ ದೆಹಲಿಗೆ ಮರಳಿದ್ದಳು.

First conviction in cyber crime case in Karnataka

ಆರೆ ಆಕೆ ಬಿಟ್ಟು ಹೋಗಿದ್ದಕ್ಕೆ ಕುಪಿತಗೊಂಡ ಶಿವಪ್ರಸಾದ್ ಆಕೆಯ ಚಿಕ್ಕಪ್ಪನ ಮನೆಗೆ ತೆರಳಿ ಗಲಾಟೆ ಮಾಡಿದ್ದ, ನನಗೆ ತಿಳಿಸದೆ ಅದ್ಹೇಗೆ ಊರು ಬಿಟ್ಟು ಹೋಗಿದ್ದಾಳೆ ಎಂದು ಜಗಳವಾಡಿದ್ದ.

ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್

ನಂತರ ಆಕೆಯ ಮತ್ತು ಪಾಲಕರ ದೂರವಾಣಿ ಸಂಖ್ಯೆ ಪಡೆದು ನಿರಂತರವಾಗಿ ಕರೆ ಮಾಡುತ್ತಿದ್ದ. ಯುವತಿ ಲಂಡನ್ ನಲ್ಲಿ ಕೆಲಸ ದೊರೆತ ಕಾರಣ ಅಲ್ಲಿಗೆ ಹೋಗಿದ್ದಳು. ಹೀಗಾಗಿ ಆಕೆಯ ಇಮೇಲ್ ಐಡಿ ತಿಳಿದುಕೊಂಡು ನಗರದ ಖಾಸಗಿ ಸೈಬರ್ ಕೆಫೆಗೆ ತೆರಳಿ ಇ ಮೇಲ್ ಮೂಲಕ ಅಶ್ಲೀಲ ಸಂದೇಶ, ಫೋಟೊ ಗಳನ್ನು ಕಳುಹಿಸುತ್ತಿದ್ದ.

ಇದು ಹೊಸ ರೀತಿ ಬ್ಲ್ಯಾಕ್ ಮೇಲ್, ಭಾರತದ ಮೊದಲ ಪ್ರಕರಣ ಬೆಂಗ್ಳೂರಲ್ಲಿಇದು ಹೊಸ ರೀತಿ ಬ್ಲ್ಯಾಕ್ ಮೇಲ್, ಭಾರತದ ಮೊದಲ ಪ್ರಕರಣ ಬೆಂಗ್ಳೂರಲ್ಲಿ

ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದರು. ಬಳಿಕ ಯುವತಿ ಇ ಮೇಲ್ ಮೂಲಕ ಬಂದಿದ್ದ ಸಂದೇಶವನ್ನು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಳು, ಪ್ರಕರಣದ ತನಿಖೆ ಮುಗಿಸಿದ ಪೊಲೀಸರು 2009ರ ಸೆಪ್ಟೆಂಬರ್ ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಸಿಐಡಿ ಸೈಬರ್ ಕ್ರೈಂನಲ್ಲಿ ಮೊದಲ ಶಿಕ್ಷೆ: ಸಿಐಡಿಯ ಸೈಬರ್ ಕ್ರೈಂ ಠಾಣೆ ಇತಿಹಾಸದಲ್ಲಿಯೇ ಮೊದಲ ಬಾರಿ ಪ್ರಕಟಣವೊಂದರಲ್ಲಿ ಜೈಲು ಶಿಕ್ಷೆಯಾಗಿದೆ ಎಂದು ಸಿಐಡಿ ಆರ್ಥಿಕ ಅರಾಧಗಳ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

English summary
Bengaluru ACMM court has convicted in cyber crime case which is ever first case filed by CID under cyber crime act against Shivaprasad Sajjan who was sent absence pictures through e-mail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X