'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ'ನ ವಾರ್ಷಿಕೋತ್ಸವ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 28 : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಶುಚಿಯಾಗಿಡಬೇಕೆಂಬ ಉದ್ದೇಶದಿಂದ ಅಕ್ಟೋಬರ್ 2ರಂದು ಆರಂಭಿಸಿದ್ದ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಈಗ ವರ್ಷದ ಸಂಭ್ರಮ. ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥನಾರಾಯಣ ಸಿಎನ್ ಅವರೇ ಈ ಯೋಜನೆಯ ರೂವಾರಿ.

ಸ್ವಚ್ಛ ಭಾರತ ಅಭಿಯಾನದ ಭಾಗವಾಗಿರುವ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ'ನ ಈ ಸಂಭ್ರಮವನ್ನು ಕ್ಷೇತ್ರದ ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಮಲ್ಲೇಶ್ವರದಲ್ಲಿ ಮತ್ತು ಯಶವಂತಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. [ಹೆಮ್ಮೆ ತಂದ ಮೈಸೂರಿಗೆ ಕ್ಲೀನ್‌ಸಿಟಿ ಪ್ರಶಸ್ತಿ ಪ್ರದಾನ]

First anniversary of Smart Swachh malleshwaram

ಮೊದಲಿಗೆ, ಮಲ್ಲೇಶ್ವರದಲ್ಲಿರುವ ಮಹಾರಾಣಿ ಅಮ್ಮಣ್ಣಿ ಕಾಲೇಜು ಬಳಿಯಿರುವ ಸರ್ಕಲ್ ಮಾರಮ್ಮ ವೃತ್ತದಲ್ಲಿ ಬೆಳಿಗ್ಗೆ 9.30ಕ್ಕೆ 'ಸ್ವಚ್ಛ ಭಾರತ ಲಾಂಛನ'ವನ್ನು ಬಿಡುಗಡೆ ಮಾಡಲಾಗುತ್ತಿದೆ. ['ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ರೂವಾರಿಗಳು ಯಾರು?]

ನಂತರ, ಯಶವಂತಪುರದ ದೀವಾನರಪಾಳ್ಯದ ಎಚ್ಎಂಟಿ ರಸ್ತೆಯಲ್ಲಿರುವ ಚಂದ್ರೋದಯ ಶಾಲೆಯ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ, ಕಳೆದ ಒಂದು ವರ್ಷದಲ್ಲಿ ಪೂರೈಸಿದ ಸಾಧನೆಗಳನ್ನು ನಾಗರಿಕರೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿದೆ. [ಗಿರಿನಗರದಲ್ಲಿ ಪುಟಾಣಿಗಳಿಗಾಗಿ ಸ್ವಚ್ಛ ಬಾಲ ಅಭಿಯಾನ]

ಈ ಕಾರ್ಯಕ್ರಮದಲ್ಲಿ ಮಲ್ಲೇಶ್ವರಂನ ಶಾಸಕ ಡಾ. ಅಶ್ವತ್ಥನಾರಾಯಣ, ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್, ಮೈ ಕ್ಲೀನ್, ಮಲ್ಲೇಶ್ವರಂ ಅಭಿಯಾನ, ಮಲ್ಲೇಶ್ವರಂನ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಚಿತ್ರನಟ ಯಶ್ ಕೂಡ ಈ ಅಭಿಯಾನದ ರಾಯಭಾರಿಯಾಗಿದ್ದಾರೆ. [ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಸಂದರ್ಶನ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
First anniversary of Smart Swachh malleshwaram, A Swachh Bharath Initiative, is being celebrated on Gandhi Jayanti, 2nd October in Malleshwaram and Yeshwanthpur. Malleshwaram MLA Dr Ashwath Narayan CN will be participating in the event.
Please Wait while comments are loading...