ಬೆಂಗಳೂರು: ಅಪಹರಣಕಾರರ ಮೇಲೆ ಪೊಲೀಸರಿಂದ ಫೈರಿಂಗ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಅಪಹರಣಕಾರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಇಂದು ಬೆಳಿಗ್ಗೆ 5:30 ರ ಸಮಯಕ್ಕೆ ಬೆಂಗಳೂರಿನಲ್ಲಿ ನಡೆದಿದೆ.

ಟೆಕ್ಸಾಸ್ ಯುನಿವರ್ಸಿಟಿ ಶೂಟೌಟ್: ಪೊಲೀಸ್ ಅಧಿಕಾರಿ ಹತ್ಯೆ

ಅಕ್ಟೋಬರ್ 5 ರಂದು ಬೆಂಗಳೂರಿನ ಕೊತ್ತನೂರು ಬಳಿ ಅಭಿರಾಮ್ ಎಂಬ 3 ವರ್ಷದ ಮಗುವನ್ನು ಅಪಹರಣ ಮಾಡಿ, ಆ ಮಗುವನ್ನು ಶಹನಾಜ್ ಖಾನಮ್ ಎನ್ನುವವರಿಗೆ ನೀಡಲಾಗಿತ್ತು.

Firing by Bengaluru police on Kidnappers

ಅ.12 ರಂದು ಅಭಿರಾಮ್ ಮತ್ತು ಶಹಜಾನ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜೊತೆಗೆ ಮೂವರು ಅಪಹರಣಕಾರರನ್ನೂ ಬಂಧಿಸಲಾಗಿತ್ತು. ಇಂದು ಬೆಳಿಗ್ಗೆ ನೂರುಲ್ಲಾ ಎಂಬ ಆರೋಪಿಯ ನ್ನು ಚೇಸಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸುವುದಕ್ಕೆ ಆರಂಭಿಸಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದು, ನೂರುಲ್ಲಾ ಕಾಲಿಗೆ ಗುಂಡು ತಗುಲಿದೆ.

ಆರೋಪಿಗಳನ್ನು ನೂರುಲ್ಲಾ, ಐಜಾಕ್ ಖಾನ್, ವಾಹಿದ್ ಎಂದು ಗುರುತಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police have started firing on 3 kidnappers in this morning, who have kidnapped a 3 year boy in Kotnoor, in Bengaluru

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ