ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಪಾಲನ್ ಆರ್ಕೆಡ್‌ ಅಗ್ನಿ ಅವಘಡಕ್ಕೆ ಮೂಲ ಕಾರಣವೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ, 01: ಬೆಂಗಳೂರಿನ ಮಾಲ್ ಗಳು ಎಷ್ಟು ಸುರಕ್ಷಿತ ಎಂಬ ಅನುಮಾನ ಮತ್ತು ಆತಂಕ ಒಮ್ಮೆಲೇ ಹುಟ್ಟಿಕೊಂಡಿದೆ, ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೆಡ್ ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.

ಮಹಾನಗರದ 18 ಮಾಲ್ ಗಳಿಗೆ ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ತಿಂಗಳ ಹಿಂದೆಯೇ ಅಗ್ನಿಶಾಮಕ ಮತ್ತು ತುರ್ತುಸೇವೆ ಡಿಜಿಪಿ ಎಂ ಎನ್ ರೆಡ್ಡಿ ನೋಟಿಸ್ ನೀಡಿದ್ದರು. ಆದರೆ ಅದರ ಪಾಲನೆ ಸರಿಯಾಗಿ ಆಗುತ್ತಿಲ್ಲ ಎಂಬುದಕ್ಕೆ ಈ ಅವಘಡವೇ ಸಾಕ್ಷಿಯಾಗಿದೆ. ಅಗ್ನಿ ಅವಘಡದ ವೇಳೆ ಮಾಲ್ ನಲ್ಲಿ ಇಟ್ಟಿದ್ದ ಪರಿಹಾರ ಸಾಮಗ್ರಿಗಳು ಕೆಲಸಕ್ಕೆ ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.[ಗೋಪಾಲನ್ ಆರ್ಕೆಡ್ ನಲ್ಲಿ ಅಗ್ನಿ ಅವಘಡ]

ಕಳೆದ ವರ್ಷ ಎಂಜಿ ರಸ್ತೆಯ ನವರತನ್ ಜ್ಯುವೆಲ್ಲರ್ಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೀನಾಕ್ಷಿ ಮಾಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದೀಗ ಗೋಪಾಲನ್ ಆರ್ಕಿಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಕೇವಲ ಗೋಪಾಲನ್ ಆರ್ಕಿಡ್ ಗೆ ಸಂಬಂಧಿಸಿದ ಸಂಗತಿ ಅಲ್ಲ.[2010: ಕಾರ್ಲಟನ್ ಅಗ್ನಿ ದುರಂತದಲ್ಲಿ 9 ಜನರ ಸಾವು]

ಕೆಲಸ ಮಾಡದ ಸಲಕರಣೆಗಳು

ಕೆಲಸ ಮಾಡದ ಸಲಕರಣೆಗಳು

ನೋಟಿಸ್ ನೀಡಿ 15 ದಿನದೊಳಗೆ ಸಂಬಂಧಿಸಿದ ಮಾಲ್ ಸುರಕ್ಷಾ ಕ್ರಮವನ್ನು ತೆಗೆದುಕೊಳ್ಳಬೇಕು. ಆದರೆ ಈಗ ಸಂಭವಿಸಿದ ಬೇರೆಯದೇಕತೆಯನ್ನು ಹೇಳುತ್ತದೆ. ಸುರಕ್ಷಾ ಕ್ರಮಗಳಿದ್ದರೂ ಪ್ರಯೋಜನಕ್ಕೆ ಬಾರದಿದ್ದದ್ದು ಯಾಕೆ ಎಂಬುದು ತನಿಖೆಯ ನಂತರವಷ್ಟೇ ತಿಳಿದು ಬರಲಿದೆ.

ವ್ಯಾಪಿಸಿದ ಬೆಂಕಿ

ವ್ಯಾಪಿಸಿದ ಬೆಂಕಿ

ಮೊದಲು ಮೆಕ್ ಡೊನಾಲ್ಡ್ ಕಿಚನ್ ನಲ್ಲಿ ಕಾಂಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ಮೂರು ಮಹಡಿಗೆ ವ್ಯಾಪಿಸಿದೆ. ಬೆಂಕಿ ನಂದಿಸಲು ಮಾಲ್ ನ ಸಿಬ್ಬಂದಿ ಮುಂದಾದರೂ ಸಲಕರಣೆಗಳು ಕೆಲಸ ಮಾಡಿಲ್ಲ.

ಕಿಡಕಿ ಒಡೆಯಲಾಗಿದೆ

ಕಿಡಕಿ ಒಡೆಯಲಾಗಿದೆ

ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯಶ ಕಂಡಿದ್ದಾರೆ. ಹೊಗೆ ಹೊರಹೋಗುವಂತೆ ಮಾಡಲು ಮಾಲ್ ನ ಕಿಡಗಿಗಳನ್ನು ಒಡೆಯಲಾಗಿದೆ. ನಷ್ಟದ ಅಂದಾಜು ಇನ್ನು ಸರಿಯಾಗಿ ಸಿಕ್ಕಿಲ್ಲ.

15 ದಿನ ಕಾಲಾವಕಾಶ

15 ದಿನ ಕಾಲಾವಕಾಶ

18 ಪ್ರತಿಷ್ಠಿತ ಮಾಲ್ ಗಳಿಗೆ ಅಗ್ನಿಶಾಮಕ ಮತ್ತು ತುರ್ತುಸೇವೆ ಡಿಜಿಪಿ ಎಂ ಎನ್ ರೆಡ್ಡಿ ನೋಟಿಸ್ ನೀಡಿದ್ದು ಮುಂದಿನ 15 ದಿನದೊಳಗೆ ಯಾವ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಗಿದ್ದು ಇಲಾಖೆ ಮತ್ತೊಮ್ಮೆ ಪರಿಶೀಲನೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.

English summary
Bengaluru: An accidental fire broke out in Gopalan Arcade Mall located at Rajarajeshwarinagar on Mysure road on Monday. What are the Safety measures?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X