ಬೆಂಗಳೂರು : ಚಿಕ್ಕಪೇಟೆಯಲ್ಲಿ ಎಲೆಕ್ಟ್ರಿಕ್‌ ಶಾಪ್‌ಗೆ ಬೆಂಕಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 16 : ಬೆಂಗಳೂರಿನ ಚಿಕ್ಕಪೇಟೆಯಲ್ಲಿನ ಎಲೆಕ್ಟ್ರಿಕ್‌ ಶಾಪ್‌ ಗೋಡಾನ್‌ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. 9 ಅಗ್ನಿ ಶಾಮಕ ದಳದ ವಾಹನಗಳು ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ, ಬೆಂಕಿಯನ್ನು ಹತೋಟಿಗೆ ತಂದಿವೆ.

ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಮಾಯಾ ಎಲೆಕ್ಟ್ರಿಕ್‌ ಶಾಪ್‌ ಗೋಡಾನ್‌ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ಅಪಘಟದಲ್ಲಿ ಇಬ್ಬರಿಗೆ ಗಾಯಳಾಗಿದ್ದು, 2 ಬೈಕ್‌ಗಳು ಸುಟ್ಟು ಹೋಗಿವೆ.[ಮೋಂಬತ್ತಿ ಉರುಳಿಬಿದ್ದು ಹೊತ್ತಿ ಉರಿದ ಮದ್ಯವ್ಯಸನಿ]

fire

9 ಅಗ್ನಿ ಶಾಮಕದಳವ ವಾಹನಗಳು ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಿವೆ. ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಮೊದಲು ನೆಲ ಮಹಡಿಯಲ್ಲಿ ಸ್ಫೋಟದ ಸದ್ದು ಕೇಳಿಸಿದ್ದು, ಬಳಿಕ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹತ್ತಿದೆ.[ಮೈಸೂರು ನೋಟು ಮುದ್ರಣಾಲಯದಲ್ಲಿ ಅಗ್ನಿ ಅವಘಡ]

ನೆಲ ಮಹಡಿಯಲ್ಲಿದ್ದ ಎರಡು ಬೈಕ್ ಮತ್ತು ಲಕ್ಷಾಂತರ ರೂಪಾಯಿಗಳ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಗೋಡಾನ್‌ನಲ್ಲಿ ಸ್ಫೋಟ ಸಂಭವಿಸಲು ಕಾರಣವೇನು? ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿ ಆಕಸ್ಮಿಕದಿಂದಾಗಿ ರಸ್ತೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಎರಡನೇ ಮಹಡಿಯಲ್ಲಿದ್ದ ಎಲೆಕ್ಟ್ರಿಕ್ ಶಾಪ್‌ನಲ್ಲಿನ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A fire has broken out at an electric goods shop in the Chickpet area of Bengaluru. Nine fire tenders have been rushed to the spot.
Please Wait while comments are loading...