ಪತ್ರಕರ್ತೆಗೆ ಬೆದರಿಕೆ ಹಾಕಿದ ವಿಜಯ್ ಫ್ಯಾನ್ಸ್ ವಿರುದ್ಧ ಎಫ್ಐಆರ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10 : ಪತ್ರಕರ್ತೆ ಧನ್ಯಾ ರಾಜೇಂದ್ರನ್ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್ ಗಳನ್ನು ಮಾಡಿ, ಕಿರುಕುಳ ನೀಡಿದ ಆರೋಪದ ಮೇಲೆ ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರ ಫ್ಯಾನ್ಸ್ ಮೇಲೆ ಎಫ್ಐಆರ್ ಹಾಕಲಾಗಿದೆ.

ಶಾರುಖ್ ಖಾನ್‌ ಅಭಿನಯದ 'ಜಬ್ ಹ್ಯಾರಿ ಮೆಟ ಸೆಜಲ್' ಚಿತ್ರವನ್ನು ತಮಿಳು ನಟ ವಿಜಯ್ ಅಭಿನಯದ 'ಸುರ' ಚಿತ್ರಕ್ಕಿಂತಲೂ ಕೆಟ್ಟದಾಗಿದೆ ಎಂದು ಧನ್ಯಾ ಟ್ವೀಟ್ ಮಾಡಿದ್ದು, ವಿಜಯ್ ಅಭಿಮಾನಿಗಳನ್ನು ಕೆರಳಿಸಿತ್ತು.

ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅಭಿಮಾನಿಗಳು ಎನ್ನಲಾದ ಗುಂಪೊಂದು ಅವಹೇಳನಕಾಗಿ, ಅಶ್ಲೀಲ ಸಂದೇಶಗಳನ್ನು ಹರಡತೊಡಗಿದರು.

ಸರಿ ಸುಮಾರು 63 ಸಾವಿರಕ್ಕೂ ಅಧಿಕ ಸಂದೇಶಗಳು ಹರಿದಾಡಿ, ಟ್ವಿಟ್ಟರ್ ನಲ್ಲಿ ಬುಧವಾರ ಸಂಜೆ ವೇಳೆ ಟ್ರೆಂಡ್ ಆಗಿತ್ತು. ಸಾಕಷ್ಟು ಸಂದೇಶಗಳನ್ನು ಸಂಗ್ರಹಿಸಿದ ಧನ್ಯಾ ಹಾಗೂ ಅವರ ಆಪ್ತರು, ಸೈಬರ್ ಪೊಲೀಸರಿಗೆ ದೂರು ನೀಡಿದರು.

ಸೈಬರ್ ಪೊಲೀಸರಿಂದ ತನಿಖೆ

ಸೈಬರ್ ಪೊಲೀಸರಿಂದ ತನಿಖೆ

ತಮ್ಮ ವಿರುದ್ಧ ನಡೆಯುತ್ತಿರುವ ಟ್ವೀಟ್ ದಾಳಿ ಹಿಂದೆ ಕಾಣದ ಕೈಗಳಿವೆ. ಯಾರೋ ಉದ್ದೇಶಪೂರ್ವಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಧನ್ಯಾ ದೂರಿನಲ್ಲಿ ಹೇಳಿದ್ದಾರೆ. ವಿಮರ್ಶೆ ಮಾಡುವುದೇ ತಪ್ಪು ಎನ್ನುವುದಾದರೆ ಹೇಗೆ? ಎಂದು ಧನ್ಯಾ ಅವರಿಗೆ ಬೆಂಬಲಿಸಿ ಅನೇಕರು ಟ್ವೀಟ್ ಮಾಡಿದ್ದಾರೆ. ಚೆನ್ನೈನ ಸೈಬರ್ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಎಫ್ ಐಆರ್ ಕಾಪಿ

ಎಫ್ ಐಆರ್ ಕಾಪಿ

'ಮಹಿಳೆಯರ ಬಗ್ಗೆ ನನಗೆ ಗೌರವವಿದೆ. ಸಿನಿಮಾ ಚೆನ್ನಾಗಿಲ್ಲದಿದ್ದರೆ ಚೆನ್ನಾಗಿಲ್ಲ ಎನ್ನುವ ಹಕ್ಕು ಎಲ್ಲರಿಗೂ ಇದೆ. ಆದ್ದರಿಂದ ಅಭಿಮಾನಿಗಳು ಆವೇಶಕ್ಕೊಳಗಾಗಬಾರದು. ಅದರಲ್ಲೂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಬಾರದು' ಎಂದು ನಟ ವಿಜಯ್ ಅವರು ಮನವಿ ಮಾಡಿದ್ದಾರೆ. ಚಿತ್ರಕೃಪೆ : http://www.thenewsminute.com/

ಧೈರ್ಯವಾಗಿ ಎದುರಿಸಿದ ಧನ್ಯಾ

ಸೂಪರ್ ಸ್ಟಾರ್ ವಿಜಯ್ ಅವರ ಅಭಿಮಾನಿಗಳ ಕಿರುಕುಳವನ್ನು ಧೈರ್ಯವಾಗಿ ಎದುರಿಸಿದ ಧನ್ಯಾ ಅವರು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ.

ರಾಧಿಕಾರಿಂದ ಬೆಂಬಲದ ಟ್ವೀಟ್

ತಮಿಳು ಚಿತ್ರರಂಗದ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅವರು ಧನ್ಯಾ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.

ವ್ಯವಸ್ಥಿತವಾಗಿ ಟ್ವೀಟ್

ಸಂಜೆ 6 ಗಂಟೆ ತನಕ ಕಾಯುವಂತೆ ಸೂಚಿಸಿ ನಂತರ ಟ್ವೀಟ್ ಮಾಡುತ್ತಿದ್ದಾರೆ ಎಂದರೆ ಇದು ವ್ಯವಸ್ಥಿತವಾಗಿ ಒಬ್ಬರ ತೇಜೋವಧೆಗೆ ಮಾಡಿರುವ ತಂತ್ರಗಾರಿಕೆ ಎಂದು ಧನ್ಯಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Cyber Crime Branch of the Chennai police has lodged an FIR against four anonymous Twitter handles and others for the sexual harassment and abuse of TNM Editor-in-Chief Dhanya Rajendran on Twitter. The FIR was lodged after Dhanya was abused for several days by persons who are allegedly fans of Tamil actor
Please Wait while comments are loading...