ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ವಿರುದ್ಧ ಎಫ್‌ಐಆರ್

Posted By:
Subscribe to Oneindia Kannada

ಬೆಂಗಳೂರು, ಮೇ 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮಂಜುನಾಥ ರೆಡ್ಡಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಆದೇಶದಂತೆ ಮೈಕೋ ಲೇಔಟ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ಬಿಬಿಎಂಪಿ ಚುನಾವಣೆ ವೇಳೆ ಸೀರೆ ಹಂಚಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿತ್ತು. ದೂರಿನ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ಎಫ್‌ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. [ಮಂಜುನಾಥ ರೆಡ್ಡಿ ವ್ಯಕ್ತಿ ಚಿತ್ರ]

manjunath reddy

ಪಾಪಣ್ಣ ಎಂಬುವವರು ಮೇಯರ್ ಮಂಜುನಾಥ ರೆಡ್ಡಿ ವಿರುದ್ಧ ಹಲ್ಲೆ ಮತ್ತು ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಪಾಪಣ್ಣ ಅವರ ಸೀರೆ ಅಂಗಡಿ ಮೇಲೆ ಮಂಜುನಾಥ್ ರೆಡ್ಡಿ ಮತ್ತು ಬೆಂಬಲಿಗರು ದಾಳಿ ನಡೆಸಿದ್ದರು. ಈ ವೇಳೆ ಪಾಪಣ್ಣ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ ಎಂಬುದು ಆರೋಪ. [ಟ್ರಾಫಿಕ್ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]

'ಮಂಜುನಾಥ ರೆಡ್ಡಿ ಅವರ ವಿರುದ್ಧ ಪೊಲೀಸರಿಗೆ ದೂರು ಕೊಡಲು ಹೋದರೆ ತೆಗೆದುಕೊಂಡಿಲ್ಲ. ಕೊನೆ ಹಂತದ ಹೋರಾಟವಾಗಿ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದೇನೆ. ಮಂಜುನಾಥ ರೆಡ್ಡಿ ಅವರ ಬೆಂಬಲಿಗರು ನನಗೆ ಹಲವು ಬಾರಿ ಜೀವ ಬೆದರಿಕೆಯನ್ನು ಹಾಕಿದ್ದಾರೆ' ಎಂದು ಪಾಪಣ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಬೆಂಗಳೂರಿಗರು ಜಾತ್ಯತೀತರಾಗುವುದು ಇನ್ನೂ ಬಹುದೂರ!]

ಮೈಕೋ ಲೇಔಟ್ ಪೊಲೀಸರು ದೂರು ಸ್ವೀಕರಿಸದ ಕಾರಣ ಎಸಿಎಂಎಂ ನ್ಯಾಯಾಲಯಕ್ಕೆ ಪಾಪಣ್ಣ ದೂರು ಕೊಟ್ಟಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಎಫ್‌ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mico layout police registered FIR against Bruhat Bengaluru Mahanagara Palike (BBMP) mayor B.N. Manjunath Reddy in the allegation of casteist remark.
Please Wait while comments are loading...