ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಬಿ ವಿರುದ್ಧವೇ ದಾಖಲಾಯಿತು ಎಫ್‌ಐಆರ್ ಕಾರಣವೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ನಗರದ ವಿವಿಧೆಡೆ ರಿಕ್ರಿಯೇಷನ್ ಕ್ಲಬ್, ಇಸ್ಪೀಟ್‌ ಕ್ಲಬ್‌ಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಸಿಸಿಬಿ ಪೊಲೀಸರ ವಿರುದ್ಧವೇ ಎಫ್‌ಐಆರ್‌ ದಾಖಲಾಗಿದೆ.

ಅಕ್ರಮ ಹಣ ಸುಲಿಗೆ, ಅಕ್ರಮ ಬಂಧನ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಬಸವೇಶ್ವರನಗರ ಮುಖ್ಯರಸ್ತೆಯಲ್ಲಿರುವ ಮೆಂಬರ್ಸ್ ರಿಕ್ರಿಯೇಷನ್ ಕ್ಲಬ್ ಮತ್ತು ಲಾಂಜ್ ಎನ್ನುವ ವೀಡಿಯೋಗೇಮ್ ಕೇಂದ್ರದ ಮೇಲೆ ಮಾ.24 ರಂದು ಸಿಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಜೂಜಾಟದಲ್ಲಿ ತೊಡಗಿದ್ದರೆನ್ನಲಾದ 7 ಮಂದಿ ಹಾಗೂ ವಿಡಿಯೋ ಗೇಮ್ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆರು ಮಂದಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಬಸವೇಶ್ವರನಗರ ಠಾಣೆಗೆ ಒಪ್ಪಿಸಲಾಗಿತ್ತು.

ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

ದಾಳಿ ವೇಳೆ ಸಿಸಿಬಿ ಪೊಲೀಸರು ನಡೆದುಕೊಂಡ ರೀತಿ ಮತ್ತು ಬಸವೇಶ್ವರನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಕೆ.ವೈ ಅಶ್ವತಯ್ಯ ಅವರು ನಡೆದುಕೊಂಡ ರೀತಿಯನ್ನು ಆಕ್ಷೇಪಿಸಿ ಬಂಧನಕ್ಕೆ ಒಳಗಾಗಿದ್ದ ಜಿತೇಶ್ ಕೋರ್ಟ್ ಮೆಟ್ಟಿಲೇರಿದ್ದರು.

FIR against 3 policemen for extortion, criminal trespass

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ

ನ್ಯಾಯಾಲಯದ ಸೂಚನೆಯಂತೆ ಸಿಸಿಬಿ ವಿಶೇಷ ವಿಚಾರಣಾ ತಂಡದ ಇಬ್ಬರು ಇನ್‌ಸ್ಪೆಕ್ಟರ್ ವಿಚಾರಣಾ ತಂಡದ ಇಬ್ಬರು ಇನ್‌ಸ್ಪೆಕ್ಟರ್ ಸೇರಿ ಮೂವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

English summary
Acting on court directions, police have registered an FIR for extortion and criminal trespass against three police officers, including two inspectors attached with the Central Crime Branch (CCB), for raiding a private recreational club in March 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X