ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್ಸಿನ ಮಾಹಿತಿಯನ್ನು ಮೊಬೈಲ್‌ನಲ್ಲಿ ಪಡೆಯಿರಿ

|
Google Oneindia Kannada News

ಬೆಂಗಳೂರು, ಜ.6 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕ ಸ್ನೇಹಿಯಾಗಲು ಸಿದ್ಧತೆ ನಡೆಸಿದೆ. ಬಸ್‌ಗಳ ವೇಳಾಪಟ್ಟಿ, ಮಾರ್ಗ ಮುಂತಾದ ಮಾಹಿತಿಗಳನ್ನು ಮೊಬೈಲ್ ಮೂಲಕ ಪಡೆಯಲು ಅಪ್ಲಿಕೇಶನ್‌ಅನ್ನು (App)ಬಿಡುಗಡೆ ಮಾಡುತ್ತಿದೆ.

ಶುಕ್ರವಾರ ಬಿಎಂಟಿಸಿಯ ಅಪ್ಲಿಕೇಶನ್‌ಗೆ ಚಾಲನೆ ದೊರೆಯಲಿದೆ. ಈ ಅಪ್ಲಿಕೇಶನ್ ಮೂಲಕ ಬಸ್ಸಿನ ಮಾರ್ಗ, ಹೊರಡುವ ಸಮಯ ಮತ್ತು ಎಲ್ಲಿಗೆ ತಲುಪಲಿದೆ ಎಂಬ ಮಾಹಿತಿಯನ್ನು ಪಡೆಯಬಹುದು. ಬಸ್ಸು ಎಲ್ಲಿದೆ? ಮತ್ತು ಎಷ್ಟು ಹೊತ್ತಿಗೆ ನಿಗದಿತ ಸ್ಥಳಕ್ಕೆ ತಲುಪಲಿದೆ? ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿರುವುದಿಲ್ಲ. [ಪ್ರಯಾಣಿಕ ಸ್ನೇಹಿಯಾಗಲು ಬಿಎಂಟಿಸಿ ಸಿದ್ಧತೆ!]

bmtc

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ್ ಕೌರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಈ ಅಪ್ಲಿಕೇಶನ್ ಮೂಲಕ ಬಸ್ಸು ಎಲ್ಲಿದೆ? ಎಂಬ ನಿಖರ ಮಾಹಿತಿ ದೊರೆಯಲು ವಿಳಂಬವಾಗಲಿದೆ. ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಅನುಷ್ಠಾನಕ್ಕೆ ಬಂದ ನಂತರ ಈ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. [ಬಿಳಿ, ನೀಲಿ ಬಣ್ಣದಲ್ಲಿ ಕಂಗೊಳಿಸಲಿವೆ ಬಿಎಂಟಿಸಿ ಬಸ್?]

ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ ಈ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‌ ಮೂಲಕ ನೀವು ದೂರುಗಳನ್ನು ಸಲ್ಲಿಸಬಹುದಾಗಿದ್ದು, ಅದನ್ನು ಬಗೆಹರಿಸಲು ಬೇಕಾದ ವ್ಯವಸ್ಥೆಯನ್ನು ಬಿಎಂಟಿಸಿ ಮಾಡಿಕೊಂಡಿದೆ. ಶುಕ್ರವಾರ ಈ ಸೇವೆಗೆ ಚಾಲನೆ ದೊರೆಯಲಿದೆ.

English summary
Bangalore Metropolitan Transport Corporation (BMTC) will launch its mobile phone application on Friday, January, 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X