ಅಂತೂ ಇಂತೂ ಕನ್ನಡ ಪಾಠ ಕಲಿತ ಬಿಎಂಟಿಸಿ

Written By:
Subscribe to Oneindia Kannada

ಬೆಂಗಳೂರು, ಜುಲೈ, 12: ಕನ್ನಡಿಗರ ಮತ್ತು ಸಾಮಾಜಿಕ ತಾಣಗಳ ಒತ್ತಡಕ್ಕೆ ಮಣಿದ ಬಿಎಂಟಿಸಿ ಮತ್ತು ಸಾರಿಗೆ ಇಲಾಖೆ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ಕನ್ನಡದಲ್ಲಿ ಸಿಗುವಂತೆ ಮಾಡಿದೆ.

ಬಿಎಂಟಿಸಿ ಅಪ್ಲಿಕೇಶನ್ ನಲ್ಲಿ ಕನ್ನಡದ ಆಯ್ಕೆ ಇಲ್ಲದ್ದಕ್ಕೆ ನಾಗರಿಕರಿಂದ ತೀವ್ರ ವಿರೋಧ ಕೇಳಿ ಬಂದಿತ್ತು. ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲೂ ಆಕ್ರೋಶ ಎದುರಾಗಿತ್ತು.[ಭಾಷೆ ಮರೆತ ಬಿಎಂಟಿಸಿ: ಸರ್ಕಾರಕ್ಕೆ ಹನುಮಂತಯ್ಯ ಪತ್ರ]

ಬಿಎಂಟಿಸಿ ನಾಗರಿಕರ ಅನುಕೂಲಕ್ಕೆ ಜಾರಿಗೆ ತಂದಿರುವ "ಸುಲಭ ಪ್ರಯಾಣಕ್ಕೆ ಸಕಲ ಮಾಹಿತಿ" (ಈಸಿ ಟ್ರಾವೆಲ್‌ ಇನ್ಫಾರ್ಮೆಷನ್‌ ಪ್ಲಾನ್‌) ಮೊಬೈಲ್ ಅಪ್ಲಿಕೇಶನ್ ನಲ್ಲಿ ಕನ್ನಡಕ್ಕೆ ಜಾಗವಿಲ್ಲ. ಬಿಎಂಟಿಸಿ ಬಿಡಗಡೆ ಮಾಡಿರುವ ಅಪ್ಲಿಕೇಶನ್ ನಲ್ಲಿ ಪ್ರಧಾನ ಭಾಷೆಯಾಗಿ ಕನ್ನಡ ಇರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್ ಹನುಮಂತಯ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಹಿಂದೆ ಪತ್ರ ಬರೆದಿದ್ದರು.

bmtc

ಆಡಳಿತ ಭಾಷೆಯೇ ರಾಜಧಾನಿಯ ಸಂಪರ್ಕ ಸಾರಿಗೆಗೆ ಬಳಸುವ ಅಪ್ಲಿಕೇಶನ್ ನಲ್ಲಿ ಇಲ್ಲದಿದ್ದರೆ ಹೇಗೆ? ಈ ಬಗ್ಗೆ ಸಾರಿಗೆ ಸಚಿವರು ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದರು.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಇದೀಗ ಸರ್ಕಾರ ಅಪ್ಲಿಕೇಶನ್ ನಲ್ಲಿ ಮಹತ್ತರವಾದ ಬದಲಾವಣೆ ಮಾಡಿದ್ದು ಮಾಹಿತಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದ್ದು ಇಡೀ ಬೆಂಗಳೂರಿನ ಬಸ್ ಮಾಹಿತಿಯನ್ನು ಅಂಗೈನಲ್ಲಿಯೇ ಪಡೆದುಕೊಳ್ಳಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Finally Bangalore Metropolitan Transport Corporation(BMTC) introduced Kannada on their mobile application. Now you can download new application from Google Play store.
Please Wait while comments are loading...